ಬೆಂಗಳೂರು, ಜು. 24 : ಮಹಿಳೆಯರು ತಿಂಗಳ ಬಜೆಟ್ ನಲ್ಲಿ ಹೇಗೆ ಉಳಿತಾಯ ಮಾಡಬಹುದು ಎಂಬುದಕ್ಕೆ ಒಂದಷ್ಟು ಟಿಪ್ಸ್ ಗಳನ್ನು ನಾವಿಲ್ಲಿ ಕೊಡುತ್ತೀವಿ ನೋಡಿ. ಪ್ರತಿ ತಿಂಗಳು ಮನೆಗೆ ಎಷ್ಟು ಹಣ ಬೇಕಾಗುತ್ತದೆ ಎಂದು ಬಜೆಟ್ ರೆಡಿ ಮಾಡಿಕೊಳ್ಳಿ. ಮನೆಗೆ ರೇಷನ್, ಹಾಲು, ಹಣ್ಣು ತರಕಾರಿಗೆ ಎಷ್ಟು ಹಣ ಬೇಕು ಎಂಬುದನ್ನು ನಿರ್ಧರಿಸಿ. ಇದರಲ್ಲಿ ಎಲ್ಲಾದರೂ ಹಣ ಉಳಿತಾಯ ಮಾಡಬಹುದೇ ಎಂದು ಗಮನಿಸಿ. ನೀವು ಸಿದ್ಧ ಪಡಿಸಿದ ಬಜೆಟ್ ಮೇಲೆ ತಿಂಗಳ ಖರ್ಚನ್ನು ನಿಭಾಯಿಸಿ.
ಮನೆಗೆ ಏನನ್ನೇ ಆದರೂ ಖರೀದಿಸುವ ಮುನ್ನ ನಿಮ್ಮಲ್ಲೇ ಲೆಕ್ಕಾಚಾರ ಹಾಕಿಕೊಳ್ಳಿ. ಆ ವಸ್ತುವಿನ ಅಗತ್ಯ ನಿಮಗೆಷ್ಟಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಬೇಕೇ ಬೇಕು ಎಂಬುದನ್ನು ಖರೀದಿಸಿ. ಆದಷ್ಟು ಎಲ್ಲೇ ಏನೇ ಖರೀದಿಸಿದರೂ ಕ್ರೆಡಿಟ್ ಕಾರ್ಡ್ ಗಳ ಬಳಕೆಯನ್ನು ಕಡಿಮೆ ಮಾಡಿ. ಕ್ರೆಡಿಟ್ ಕಾರ್ಡ್ ನಲ್ಲಿ ಬಿಲ್ ಕೊಡುವಾಗ ನಿಮಗೆ ಖರ್ಚಿನ ಬಗ್ಗೆ ಹೆಚ್ಚು ಗಮನವಿರುವುದಿಲ್ಲ. ಕೈಯಿಂದ ಹಣ ಎಣಿಸಿಕೊಡುವಾಗ ಖರೀದಿಸುತ್ತಿರುವುದು ಎಷ್ಟು ಅಗತ್ಯವಿದೆ ಎಂಬುದರ ಅರಿವಾಗುತ್ತದೆ.
ಇನ್ನು ಮನೆಯಲ್ಲಿನ ಖರ್ಚುಗಳ ಬಗ್ಗೆಯೂ ಅರಿವಿರಲಿ. ಸುಮ್ಮನೆ ಮನೆಯಲ್ಲೆಲ್ಲಾ ಲೈಟ್ಸ್ ಆನ್ ಮಾಡದಿರಿ. ರೂಮಿನಲ್ಲಿ ಯಾರೂ ಇಲ್ಲ ಎಂದರೆ ಆಫ್ ಮಾಡಿ., ಅಡುಗೆ ಮನೆಯಲ್ಲಿ ಕೆಲಸವಿದ್ದರೆ ಮಾತ್ರವೇ ಲೈಟ್ ಆನ್ ಇರಲಿ. ಓಡಾಡಲು ಬೆಳಕು ಬೇಕೆಂದರೆ ಝೀರೋ ಕ್ಯಾಮಡಲ್ ಗಳನ್ನು ಬಳಸಿ. ಫ್ಯಾನ್, ಗೀಸರ್ ಗಳನ್ನು ಅಗತ್ಯವಿಲ್ಲದಿದ್ದರೆ ಆಫ್ ಮಾಡಿ. ಇದರಿಂದ ಹೆಚ್ಚಿನ ಖರ್ಚು ತಗ್ಗುತ್ತದೆ. ತಿಂಗಳ ವಿದ್ಯುತ್ ಬಿಲ್ ನಲ್ಲೂ ವ್ಯತ್ಯಾಸ ಕಾಣಬಹುದು.
ಪ್ರತೀ ತಿಂಗಳು ಶಾಪಿಂಗ್ ಅಗತ್ಯವಿದೆಯಾ ಎಂದು ಯೋಚಿಸಿ. ಬಟ್ಟೆಗಳು ಮನೆಯಲ್ಲಿ ಸಾಕಷ್ಟಿದ್ದಾಗ ಸುಮ್ಮನೆ ಹೊಸ ಬಟ್ಟೆಯನ್ನು ಖರೀದಿಸಬೇಕಾ ಎಂದು ಯೋಚಿಸಿ. ಹೋಟೆಲ್ ಗೆ ಹೋಗುವುದಿದ್ದರೆ, ಮನೆಯಲ್ಲೇ ಅಡುಗೆ ಮಾಡಿ ತಿನ್ನುವುದು ಉತ್ತಮ. ಹೋಟೆಲ್ ನಲ್ಲಿ ಖರ್ಚು ಮಾಡುವ ಬದಲು ಮನೆಯಲ್ಲಿರುವುದರಲ್ಲೇ ವೀಕೆಂಡ್ ಎಂಜಾಯ್ ಮಾಡಬಹುದು. ಇನ್ನು ಹಣಣು- ತರಕಾರಿಗಳನ್ನು ಖರೀದಿಸುವಾಗ ನಾಲ್ಕು ಕಡೆ ವಿಚಾರಿಸಿ. ಎಲ್ಲಿ ಕಡಿಮೆ ಇರುತ್ತದೆಯೋ ಅಲ್ಲೇ ಖರೀದಿಸಿ.
ಅದರಿಂದ 10 ರೂಪಾಯಿ ಉಳಿದರೂ ಅದು ನಿಮ್ಮ ಉಳಿತಾಯವೇ. ಇನ್ನು ಹೊರಗೆ ಹೋಗುವಅಗ ಸದಾ ಆಟೋ, ಕ್ಯಾಬ್ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸಿ. ಬಸ್, ಮೆಟ್ರೋದಲ್ಲಿ ಹೋಗಬಹುದು ಎಂದಾದರೆ, ಟ್ರೈ ಮಾಡಿ. ದಿನ ಕಳೆದಂತೆ ಉಳಿತಾಯ ಮಾಡುವುದು ಸುಲಭವಾಗಿ ರೂಢಿ ಆಗುತ್ತದೆ.