20.5 C
Bengaluru
Tuesday, July 9, 2024

ಮಹಾರಾಷ್ಟ್ರದಲ್ಲಿ ಆಸ್ತಿಗಳ ಇ– ಪ್ರಾಪರ್ಟಿ ನೋಂದಣಿ

ಮಹಾರಾಷ್ಟ್ರ ಸರ್ಕಾರವು ಈ ಹಿಂದೆ ಘೋಷಣೆ ಮಾಡಿದಂತೆ ರಿಯಾಲ್ಟಿ ಡೆವಲಪರ್‌ಗಳು ಮಾರಾಟ ಮಾಡುವ ಆಸ್ತಿಗಳ ಇ– ನೋಂದಣಿ ಪ್ರಕ್ರಿಯೆಯನ್ನು ರಾಜ್ಯದಲ್ಲಿ ಆರಂಭಿಸಿದೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರವು ಆಸ್ತಿಗಳ ಇ – ನೋಂದಣಿ ಪ್ರಾರಂಭಿಸಿದ ಮೊದಲ ರಾಜ್ಯವಾಗಿದೆ. ಆರಂಭದಲ್ಲಿ ಈ ಸೌಲಭ್ಯವು ಮೊದಲ ಮಾರಾಟದ ಒಪ್ಪಂದದ ಇ– ನೋಂದಣಿಗೆ ಸಕ್ರಿಯವಾಗಿರುತ್ತದೆ. ಮರು ಮಾರಾಟ ವಹಿವಾಟುಗಳು ಇದರ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಪೂರ್ಣ ರಿಯಲ್ ಎಸ್ಟೇಟ್ ವಹಿವಾಟು ಪ್ರಕ್ರಿಯೆಯನ್ನು ಪ್ರಾರಂಭದಿಂದ ಅಂತ್ಯದವರೆಗೆ ಸುಗಮಗೊಳಿಸುವ ಉದ್ದೇಶದಿಂದ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಸದ್ಯದಲ್ಲೇ ಆರಂಭಿಸಲಿದೆ.
ಡಿಜಿಟಲ್‌ ವಿಧಾನದ ಮೂಲಕ ನೋಂದಾಯಿಸಲಾದ ಪ್ರಾಪರ್ಟಿ ಒಪ್ಪಂದಗಳನ್ನು ಅಕ್ರಮವಾಗಿ ಬದಲಾಯಿಸುವುದನ್ನು ತಪ್ಪಿಸಲು ಸರ್ಕಾರ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಪರಿಚಯಿಸಲು ಯೋಜಿಸುತ್ತಿದೆ. ಮೂಲ ದಾಖಲೆಗಳ ಪರಿಶೀಲನೆ ಹಾಗೂ ಮನೆ ಖರೀದಿದಾರರು ಹಾಗೂ ಅಡಮಾನ ಸಾಲದಾರರ ಆಸಕ್ತಿಯನ್ನು ರಕ್ಷಿಸುವ ಉದ್ದೇಶ ಇದರದು.

ಬ್ಲಾಕ್‌ಚೈನ್‌ ತಂತ್ರಜ್ಞಾನ ಆರಂಭದ ಕುರಿತು ಸರ್ಕಾರವು ಇಂಡಿಯನ್‌ ಬ್ಯಾಂಕರ್ಸ್‌ ಅಸೋಸಿಯೇಷನ್‌ ಸೇರಿದಂತೆ ಬ್ಯಾಂಕರ್‌ಗಳು ಹಾಗೂ ಸಾಲ ನೀಡುವ ಕಂಪೆನಿಗಳ ಜೊತೆ ಮಾತುಕತೆ ಆರಂಭಿಸಿದ್ದು, ಇದರ ಬಗ್ಗೆ ಗಮನ ಸೆಳೆದಿವೆ. ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಪರಿಚಯಿಸುವ ಪೈಲಟ್‌ ಯೋಜನೆ ಈಗಾಗಲೇ ಆರಂಭವಾಗಿದೆ.

ಪ್ರತಿವರ್ಷ ಮಹಾರಾಷ್ಟ್ರದಲ್ಲಿ 30 ಲಕ್ಷ ಪ್ರಾಪರ್ಟಿ ರಿಜಿಸ್ಟ್ರೇಷನ್‌ಗಳು ಆಗುತ್ತವೆ. ಇದರಲ್ಲಿ 3–4 ಲಕ್ಷ ಒಪ್ಪಂದಗಳು ಮೊದಲ ಮಾರಾಟದವು. ಹಾಗಾಗಿ ಶೇಕಡ 100ರಷ್ಟು ಇಂತಹ ಡೀಲ್‌ಗಳು ಇ– ನೋಂದಣಿಯಾಗುತ್ತವೆ ಎಂದು ರಿಜಿಸ್ಟ್ರೇಷನ್‌ ಹಾಗೂ ಸ್ಟ್ಯಾಂಪ್ಸ್‌ ಆಫ್ ದ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಇ– ನೋಂದಣಿ ಪರಿಚಯಿಸುವುದರಿಂದ ರಿಯಾಲ್ಟಿ ಡೆವಲಪರ್‌ಗಳಿಂದ ಆಸ್ತಿ ಖರೀದಿಸ ಬಯಸುವ ಗ್ರಾಹಕರು ಸ್ಟ್ಯಾಂಪ್‌ ಡ್ಯೂಟಿ ಹಾಗೂ ರಿಜಿಸ್ಟ್ರೇಷನ್‌ ಆಫೀಸ್‌ಗಳಿಗೆ ಭೇಟಿ ನೀಡಬೇಕಾಗಿಲ್ಲ. ರಜೆ ಹಾಗೂ ಪರವಾನಗಿ ಒಪ್ಪಂದ ಕುರಿತಾದ ಇ– ನೋಂದಣಿಯನ್ನು ರಾಜ್ಯ ಸರ್ಕಾರವು 2014ರಲ್ಲಿ ಆರಂಭಿಸಿತು.

ಇ-ನೋಂದಣಿಗಾಗಿ ಪ್ರಾರಂಭಿಸಲಾದ ಪೋರ್ಟಲನ್ನು ಸೆಲ್ಫ್ ಹೆಲ್ಪ್ ಪೋರ್ಟಲ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಡೆವಲಪರ್‌ಗಳು ಮತ್ತು ಮನೆ ಖರೀದಿದಾರರು ಒಪ್ಪಂದಕ್ಕಾಗಿ ತಮ್ಮದೇ ಆದ ಟೆಂಪ್ಲೇಟ್ ಅನ್ನು ಅಪ್‌ಲೋಡ್ ಮಾಡಬಹುದು. ಒಂದು ಬಾರಿ ಅನುಮೋದನೆ ಸಿಕ್ಕ ನಂತರ ಈ ಟೆಂಪ್ಲೆಟ್‌ ಅನ್ನು ಅಂತಹ ಹಲವಾರು ವಹಿವಾಟುಗಳಿಗೆ ಬಳಸಬಹುದು.

ಪ್ರಕ್ರಿಯೆಯ ನೋಂದಣಿ ಸಮಯದಲ್ಲಿ ಸಾಕ್ಷಿಗಳ ಅಗತ್ಯವೂ ಇರುವುದಿಲ್ಲ. ಭೌತಿಕ ನೋಂದಣಿಯಲ್ಲಿ ಇಬ್ಬರು ಸಾಕ್ಷಿಗಳು ಹಾಜರಿರಬೇಕು ಮತ್ತು ನೋಂದಣಿಯನ್ನು ತೀರ್ಮಾನಿಸಲು ಅವರು ಸಹಿ ಮಾಡಬೇಕಾಗುತ್ತದೆ.

Related News

spot_img

Revenue Alerts

spot_img

News

spot_img