25 C
Bengaluru
Monday, December 23, 2024

ಪೋಸ್ಟ್ ಆಫೀಸ್‌ ಗೆ ಹೋಗುವ ಬದಲು ಮೊಬೈಲ್‌ ನಲ್ಲೇ ಇ-ಪಾಸ್‌ ಬುಕ್‌ ಸೇವೆ ಬಳಸುವುದು ಹೇಗೆ..?

ಬೆಂಗಳೂರು, ಡಿ. 29 : ಭಾರತದಲ್ಲಿ ಆಫೀಸ್‌ ಗ್ರಾಹಕರು ಮೂಲೆ ಮೂಲೆಗಳಲ್ಲೂ ಇದ್ದಾರೆ. ಅಂಚೆ ಕಚೇರಿಯಲ್ಲಿ ತೆರೆದಿರುವ ತಮ್ಮ ಉಳಿತಾಯ ಖಾತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಪಡೆಯಬೇಕೆಂದರೂ ಅವರು ಪದೇ ಪದೇ ಕಚೃಇಗೆ ತೆರಳಬೇಖು. ಸಾಲಿನಲ್ಲಿ ನಿಂತು ಮಾಹಿತಿ ತಿಳಿಯಬೇಕು. ಆದರೆ, ಪೋಸ್ಟ್‌ ಆಫೀಸ್‌ ಆನ್‌ ಲೈನ್‌ ಸೇವೆಯೂ ಲಭ್ಯವಿದೆ. ಇತರೆ ವ್ಯವಹಾರಗಳಂತೆ ಅಂಚೆ ಕಚೇರಿಯ ವ್ಯವಹಾರವನ್ನೂ ಆನ್‌ ಲೈನ್‌ ಮೂಲಕ ಮಾಡುಬಹುದಾಗಿದೆ. ಬ್ಯಾಂಕ್‌, ಇನ್ಷುರೆನ್ಸ್, ಬಿಲ್‌ ಪೇಮೆಂಟ್‌ ಗಳಳನ್ನು ಸಾಮಾನ್ಯವಾಗಿ ಈಗ ಎಲ್ಲರೂ ಆನ್‌ ಲೈನ್‌ ಮುಖಾಂತರವೇ ವ್ಯವಹರಿಸುವುದು.

ಅದರಂತೆಯೇ ಪೋಸ್ಟ್‌ ಆಫೀಸ್‌ ಯೋಜನೆಗಳಿಗೆ ಇ-ಪಾಸ್‌ ಬುಕ್‌ ಸೌಲಭ್ಯವನ್ನು ಅಂಚೆ ಕಚೇರಿ ಒದಗಿಸಿದೆ. ಅಂಚೆ ಕಚೇರಿ ಖಾತೆದಾರರು ತಮ್ಮ ನೋಂದಾಯಿತ ಮೊಬೈಲ್‌ ನಂಬರ್‌ ಮೂಲಕ ಇ-ಪಾಸ್‌ ಬುಕ್ ಸೌಲಭ್ಯವನ್ನು ಬಳಸಬಹುದಾಗಿದೆ. ಈ ಸೇವೆಯು ಉಚಿತವಾಗಿದೆ ಎಂದು ಕೂಡ ಅಂಚೆ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಗ್ರಾಹಕರು ಸುಲಭವಾಗಿ ತಮ್ಮ ಯೋಜನೆಯ ಸೇವೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಇದು ಸುಲಭವಾಗಿದ್ದು, ಗ್ರಾಹಕರು ಇ-ಪಾಸ್‌ ಬುಕ್‌ ಸೇವೆಯನ್ನು ಹೇಗೆ ಪಡೆಯುವುದು ಮತ್ತು ಯಾವೆಲ್ಲಾ ಮಾಹಿತಿ ಲಭ್ಯವಿದೆ ಗೊತ್ತೇ..?

ಬ್ಯಾಲೆನ್ಸ್‌ ಸ್ಟೇಟ್‌ʼಮೆಂಟ್: ಇ-ಪಾಸ್‌ ಬುಕ್‌ ಸೇವೆ ಮೂಲಕ ಪ್ರತಿಯೊಂದು ರಾಷ್ಟ್ರೀಯ ಉಳಿತಾಯ ಯೋಜನೆಯ ಮಾಹಿತಿಯನ್ನು ಪಡೆಯಬಹುದು. ನಿಮ್ಮ ಖಾತೆಯಲ್ಲಿ ಎಷ್ಟು ಹಣ ಬ್ಯಾಲೆನ್ಸ್‌ ಇದೆ ಎಂಬ ಬಗ್ಗೆ ಸ್ಟೇಟ್‌ ಮೆಂಟ್‌ ಕೂಡ ಸಿಗುತ್ತದೆ.

ಮಿನಿ ಸ್ಟೇಟ್‌ ಮೆಂಟ್: ನೀವು ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧೀ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ, ಉಳಿತಾಯ ಖಾತೆ ಸೇರಿದಂತೆ ವಿವಿಧ ಯೋಜನೆಗಳ ಹಣ ವರ್ಗಾವಣೆಯ ಬಗ್ಗೆ ಮಾಹಿತಿ ಪಡೆಯಬಹುದು. ನಿಮಗೆ ಬ್ಯಾಂಕಿಂಗ್‌ ವ್ಯವಹಾರ ಮಾಡಿದಂತೆಯೇ ಇದರಲ್ಲೂ ಮಿನಿ ಸ್ಟೇಟ್‌ ಮೆಂಟ್‌ ಅನ್ನು ಪಡಯಬಹುದು. ಕಳೆದ ಹತ್ತು ವಹಿವಾಟಿನ ಮಾಹಿತಿಯನ್ನು ಪಿಡಿಎಫ್‌ ರೂಪದಲ್ಲಿ ಡೌನ್‌ ಲೋಡ್‌ ಮಾಡಿಕೊಳ್ಳಲು ಕೂಡ ಅವಕಾಶವಿದೆ.

ವಹಿವಾಟಿನ ಸಂಪೂರ್ಣ ಮಾಹಿತಿ: ಇನ್ನು ಕೇವಲ ಕಳೆದ ಹತ್ತು ವಹಿವಾಉಗಳ ಮಾಹಿತಿ ಅಲ್ಲದೇ, ಇದರಲ್ಲಿ ನಿಮ್ಮ ಖಾತೆಯ ಸಂಪೂರ್ಣ ವಹಿವಾಟಿನ ಮಾಹಿತಿಯನ್ನೂ ತಿಳಿಯಬಹುದು. ನಿರ್ದಿಷ್ಟ ಸಮಯದ ವಹಿವಾಟನ್ನು ಡೌನ್‌ ಲೋಡ್‌ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಹಾಗಾದರೆ ಬನ್ನಿ, ಇದರ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಮತ್ತು ಸ್ಟೇಟ್‌ ಮೆಂಟ್‌ ಅನ್ನು ಹೇಗೆ ಪಡೆಯಬಹುದು ಎಂದು ತಿಳಿದುಕೊಳ್ಳೋಣ. ಮೊದಲಿಗೆ ನೀವು ನಿಮ್ಮ ಮೊಬೈಲ್‌ ನಿಂದ www.indiapost.gov.in or www.ippbonline.com ವೆಬ್‌ ಸೈಟ್ ಗೆ ಭೇಟಿ ಕೊಡಿ. ಇದರಲ್ಲಿ ಇ-ಪಾಸ್ ಬುಕ್ ಎಂದು ಇರುವುದರ ಮೇಲೆ ಕ್ಲಿಕ್ ಮಾಡಿ. ನಂತರ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಕ್ಯಾಪ್ಚ ಬರುತ್ತದೆ. ಅದರಲ್ಲಿ ಲಾಗ್ ಇನ್‌ ಆಗಿ. ಒಟಿಪಿಯನ್ನು ನಮೂದಿಸಿ ಸಬ್‌ ಮಿಟ್‌ ಮಾಡಿ. ಅಲ್ಲಿ ನೀವು ಇ-ಪಾಸ್ ಬುಕ್ (e-Passbook) ಎಂದು ಆಯ್ಕೆ ಮಾಡಿ. ನಿಮ್ಮ ಯೋಜನೆಯ ವಿಧವನ್ನು ಆಯ್ಕೆ ಮಾಡಿ.

 

ಅಲ್ಲಿ ನಿಮ್ಮ ಅಂಚೆ ಕಚೇರಿಯ ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಬಳಿಕ ಮತ್ತೆ ಕಾಪ್ಚ ನಮೂದಿಸಿ. ಆ ನಂತರ Continue ಮೇಲೆ ಕ್ಲಿಕ್ ಮಾಡಿ. OTP ಬಂದ ಕೂಡಲೇ ನಮೂದಿಸಿ. ಬಳಿಕ ವೆರಿಫೈ ಮೇಲೆ ಕ್ಲಿಕ್‌ ಮಾಡಿ. ನಂತರ ನಿಮಗೆ ಒಂದಷ್ಟು ಆಯ್ಕೆಗಳನ್ನು ನೀಡಲಾಗುತ್ತದೆ.
(a)ಬ್ಯಾಲೆನ್ಸ್ ತನಿಖೆ
(b)ಮಿನಿ ಸ್ಟೇಟ್ಮೆಂಟ್
(c)ಫುಲ್ ಸ್ಟೇಟ್ಮೆಂಟ್
ಇದರಲ್ಲಿ ನಿಮಗೆ ಯಾವ ಮಾಹಿತಿ ಬೇಕೋ ಅದನ್ನು ಆಯ್ಕೆ ಮಾಡಿದರೆ ಮುಗಿಯಿತು.

Related News

spot_img

Revenue Alerts

spot_img

News

spot_img