‘ಕಿಚ್ಚ’ ಸುದೀಪ್ ಅವರು ಈ ವಾರ ಬಿಗ್ ಬಾಸ್ ಮನೆಗೆ ಆಗಮಿಸಿರಲಿಲ್ಲ. ಕಿಚ್ಚನ ಬದಲಿಗೆ ಶುಭಾ ಪೂಂಜಾ ಹಾಗು ಶೈನ್ ಶೆಟ್ಟಿ ಅವರು ಆಗಮಿಸಿದ್ದರು. ಈ ವಾರ ‘ಡ್ರೋನ್’ ಪ್ರತಾಪ್, ವರ್ತೂರು ಸಂತೋಷ್, ಮೈಕಲ್ ಅಜಯ್,ಸಂಗೀತಾ ಶೃಂಗೇರಿ, ಸಿರಿ ಮತ್ತು ಅವಿನಾಶ್ ಶೆಟ್ಟಿ ಅವರು ನಾಮಿನೇಟ್ ಆಗಿದ್ದರು. ಇ ನಾಮಿನೇಟ್ ಅದಾವರಲ್ಲಿ ಎಲ್ಲರೂ ಸೇಫ್ ಆಗಿ ಅವಿನಾಶ್ ಶೆಟ್ಟಿ ಮತ್ತು ಮೈಕಲ್ ಅಜಯ್, ಮಾತ್ರ ಎಲಿಮಿನೇಟ್ ಅಂಗಳದಲ್ಲಿ ಉಳಿದುಕೊಂಡರು. ಅವರಿಬ್ಬರಲ್ಲಿ ಒಬ್ಬರು ಸೇಫ್ ಆಗಬಹುದೆಂಬ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಕೇಕ್ ತಿಂದು ಸೇಫ್ ಆದ ಸಿರಿ..!
ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ನಾಮಿನೇಟ್ ಆದವರಲ್ಲಿ ಎಲ್ಲರೂ ಸೇಫ್ ಆಗಿ ಕೊನೆಗೆ ಮೈಕಲ್, ಸಿರಿ, ಅವಿನಾಶ್ ಶೆಟ್ಟಿ ಇದ್ದರು. ಆಗ ಬಿಗ್ ಬಾಸ್ ಮನೆಯೊಳಗೆ ಮೂರು ಕೇಕ್ಗಳನ್ನು ತರಿಸಲಾಯಿತು. ಅದರೊಳಗೆ ಕೆಳಗೆ ಸೇಫ್ ಆಗುವ ಸ್ಪರ್ಧಿಯ ಹೆಸರನ್ನು ಬರೆಯಲಾಗಿತ್ತು. ಪೂರ್ತಿ ಕೇಕ ತಿಂದಾಗ ಹೆಸರು ಇದೆಯೋ, ಇಲ್ಲವೋ ಎಂಬುದು ಗೊತ್ತಾಗುತ್ತದೆ. ಸಿರಿ, ಮೈಕಲ್, ಅವಿನಾಶ್ ಕೇಕ್ ತಿನ್ನಲು ಆರಂಭಿಸಿದರು. ಅಂತಿಮವಾಗಿ ಮೈಕಲ್ ಮತ್ತು ಅವಿನಾಶ್ ಕೇಕ್ ತಿಂದು ಮುಗಿಸಿದರು. ಆದರೆ ಅವರ ಕೇಕ್ ನ ಕೆಳಗೆ ಹೆಸರು ಇರಲಿಲ್ಲ. ಆದರೆ ಸಿರಿ ತಿಂದ ಕೇಕ್ ನಲ್ಲಿ ಅವರ ಹೆಸರು ಇತ್ತು. ಹಾಗಾಗಿ ಸಿರಿ ಬಚಾವ್ ಆದ್ರು. ಮೈಕಲ್ ಮತ್ತು ಅವಿನಾಶ್ ಶೆಟ್ಟಿ ಎಲಿಮಿನೇಷನ್ ಇನ್ನು ಸಹ ಈ ವೇಳೆ ಆತಂಕದಲ್ಲಿದ್ದರು.
ಮಧ್ಯರಾತ್ರಿಯಲ್ಲಿ ಮನೆಗೆ ಬಂತು ಎರಡು ಕಾರು
ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಇರಲಿದೆ ಎಂಬ ಸೂಚನೆ ಸಿಕ್ಕಿತ್ತು. ಜಿಯೋ ಸಿನಿಮಾ ರಿಲೀಸ್ ಮಾಡಿದ್ದ ಪ್ರೋಮೋಗಳಲ್ಲಿ ಅದರ ಬಗ್ಗೆಯೂ ಸಹ ಹೇಳಲಾಗಿತ್ತು. ಮನೆಯೊಳಗೆ ಎರಡು ಕಾರುಗಳು ಬಂದು, ಇಬ್ಬರು ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಹೋಗಲಿವೆ ಎನ್ನಲಾಗಿತ್ತು. ಅಂತೆಯೇ, ಮಧ್ಯರಾತ್ರಿ ಮನೆಯೊಳಗೆ ಎರಡು ಕಾರುಗಳು ಬಂದಿದ್ದವು. ಮೈಕಲ್ ಮತ್ತು ಅವಿನಾಶ್ ಒಂದೊಂದು ಕಾರುಗಳಲ್ಲಿ ಹತ್ತಿಕೊಂಡರು. ಕಾರುಗಳು ಕೆಲಹೊತ್ತು ಮನೆಯ ಗಾರ್ಡನ್ ಏರಿಯಾದಲ್ಲಿ ರೌಂಡ್ ಹೊಡೆದು, ಕೊನೆಗೆ ಎರಡೂ ಕಾರುಗಳು ಮನೆಯಿಂದ ಹೊರಗೆ ಹೋದವು. ಇಲ್ಲಿ ಡಬಲ್ ಎಲಿಮಿನೇಶನ್ ಆಗಿದ್ಯಾ ಅಥವಾ ಮೈಕೆಲ್ ಹೊರಬರ್ತಾರ , ಅವಿನಾಶ್ ಹೊರಬರ್ತಾರ ಅಂತ ಕಾದು ನೋಡಬೇಕಿದೆ.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು