22.9 C
Bengaluru
Thursday, January 23, 2025

ಹಣ ವರ್ಗಾವಣೆ ಮಾಡುವಾಗ ತಪ್ಪಾದ ಖಾತೆ ಟ್ರಾನ್ಸ್ʼಫರ್ ಆಯ್ತಾ..? ಡೋಂಟ್ ವರಿ.. ಹೀಗೆ ಮಾಡಿ..

ಬೆಂಗಳೂರು, ಡಿ. 26: ಕೆಲವರಿಗೆ ಬ್ಯಾಂಕ್ ವ್ಯವಹಾರಗಳು ತೀರಾ ಕಷ್ಟ ಎನಿಸುತ್ತೆ. ಯಾಕೆಂದರೆ, ಹಣ ವರ್ಗಾವಣೆ ಮಾಡುವ ಒಂದು ಸಂಖ್ಯೆ ಹೆಚ್ಚು ಕಡಿಮೆಯಾದರೂ ಕುತ್ತಿಗೆಗೆ ಬರುವುದು ಗ್ಯಾರೆಂಟಿ. ಚಲನ್ ತುಂಬುವಾಗ ಆಗಲೀ, ಅಥವಾ ಆನ್ ಲೈನ್ ವರ್ಗಾವಣೆಯೇ ಇರಲಿ, ಅಕೌಂಟ್ ನಂಬರ್, ಐಎಫ್ʼಎಸ್ʼಸಿ ಕೋಡ್, ಮೊತ್ತ, ಹೆಸರು ಸೇರಿದಮತೆ ಎಲ್ಲವೂ ಸರಿಯಾಗಿ ಇರಬೇಕು. ಹಣ ವರ್ಗಾವಣೆ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಹಣ ಹೋದಂತೆಯೇ ಲೆಕ್ಕ. ಖಾತೆ ಸಂಖ್ಯೆಯಲ್ಲಿ ಒಂದು ನಂಬರ್ ಬೇರೆಯಾದರೂ ಕಷ್ಟ ಕಷ್ಟ. ಬೇರೆಯವರ ಖಾತೆಗೆ ಕ್ಷಣಾರ್ಧದಲ್ಲಿವಾಪಸ್ ಹಣ ವರ್ಗಾವಣೆ ಆಗಿ ಬಿಡುತ್ತದೆ.

ಮತ್ತೆ ಆ ಹಣವನ್ನು ವಾಪಸ್ ಪಡೆಯಲು ಹರಸಾಹಸ ಪಡಬೇಕಅಗುತ್ತದೆ. ಇನ್ನೂ ಕೆಲವರಿಗೆ ಆ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬುದೇ ಗೊತ್ತಿರುವುದಿಲ್ಲ. ಇನ್ನು ಈಗಂತೂ ಎಲ್ಲಾ ವರ್ಗಾವಣೆಗಳು ಬೆರಳ ತುದಿಯಲ್ಲೇ ನಡೆಯುತ್ತದೆ. ನೆಟ್ ಬ್ಯಾಂಕಿಂಗ್, ಯುಪಿಐ, ಫೋನ್ ಪೇ, ಗೂಗಲ್ ಪೇ, ಪೇಟಿಎಂ ಗಳಲ್ಲಿ ಈಸಿಯಾಗಿ ಹಣ ವರ್ಗಾವಣೆಯನ್ನು ಮಾಡಬಹುದು. ಈಸಿ ಎಂದು ಆತುರದಲ್ಲಿ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದರೆ, ಅದನ್ನು ಹೇಗೆ ಹಿಂಪಡೆಯುದು..? ಬೇರೆಯವರ ಖಾತೆಗೆ ಹಣ ಹೋದರೆ ಏನು ಮಾಡಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಅಕಸ್ಮಾತ್ ಆಗಿ ಹಣ ವರ್ಗಾವಣೆ ಮಾಡುವಾಗ ಬೇರೆ ಅವರ ಖಾತೆಗೆ ಹಣ ಹೋದರೆ, ಟೆಂಷನ್ ಮಾಡಿಕೊಳ್ಳಬೇಡಿ. ಮೊದಲು ಬ್ಯಾಮಕ್ ಗೆ ವರದಿ ಮಾಡಿ. ಇಲ್ಲವೇ ಕಸ್ಟಮರ್ ಕೇರೆ ಕೂಡಲೇ ಕರೆ ಮಾಡಿ ಸಂಪೂರ್ಣ ವಿವರನ್ನು ತಿಳಿಸಿ. ಬ್ಯಾಂಕ್ ಮೇಲ್ ಮಾಡಲು ಸೂಚಿಸುತ್ತದೆ. ಆಗ, ಏನಾಯ್ತು.? ಯಾವ ಅಕೌಂಟ್ ನಿಂದ ಯಾವ ಅಕೌಂಟ್ ಗೆ ಹೋಗಿದೆ. ಯಾವಾಗ, ಸಮಯವೇಣು, ದಿನಾಂಕ ಯಾವುದು, ಅಕೌಂಟ್ ಡೀಟೇಲ್ಸ್, ಫೋನ್ ನಂಬರ್, ಎಷ್ಟು ಹಣ ಎಲ್ಲವನ್ನೂ ವಿವಿವರವಾಗಿ ಬರೆದು ಇ-ಮೇಲ್ ಮಾಡಿ. ಆಗ ಐಎಫ್ʼಎಸ್ʼಸಿ ಕೋಡ್ ಅಥವಾ ಖಾತೆ ಸಂಖ್ಯೆ ತಪ್ಪಾಗಿದ್ದರೆ, ನಿಮ್ಮ ಹಣ ನಿಮಗೆ ವಾಪಸ್ ಕ್ರೆಡಿಟ್ ಆಗುತ್ತದೆ.

ಇಲ್ಲದೇ ಹೋದಲ್ಲಿ ಬ್ಯಾಂಕ್ ಮ್ಯಾನೇಜರ್ ಗೆ ತಿಲೀಸಿ, ಹಣ ಯಾವ ಖಾತೆಗೆ ಹೋಗಿದೆ ಎಂಬ ಬಗ್ಗೆ ಮಾಹಿತಿಯನ್ನು ಪಡೆಯಿರಿ. ನಿಮ್ಮ ಅಕೌಂಟ್ ಇರುವ ಬ್ಯಾಂಕ್ ಶಾಖೆಯಲ್ಲಿ ಹಣ ವರ್ಗಾಯಿಸಿದ್ದರೆ, ಅದು ಬಹಳ ಸುಲಭವಾಗಿ ನಿಮಗೆ ಹಣ ಬರುತ್ತದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಹಣ ವರ್ಗಾವಣೆ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಹೋದಲ್ಲಿ ಸಮಸ್ಯೆಗಳು ಎದುರಾಗುತ್ತವೆ.

ರಿಸರ್ವ್ ಬ್ಯಾಂಕ್ ನಿಯಮದಂತೆ ಹಣ ವರ್ಗಾವಣೆ ಮಾಡುವುದಿದ್ದರೆ, ಚಲನ್ ತುಂಬುವಾಗ ಅಥವಾ ಮೊಬೈಲ್ ನಲ್ಲಿ ಬೆನಿಫಿಷಿಯರಿ ಅವರ ದಾಖಲೆಗಳನ್ನು ತುಂಬುವಾಗ ಎರಡೆರಡು ಬಾರಿ ಪರಿಶೀಲಿಸಬೇಕು. ಅಕಸ್ಮಾತ್ ಆಗಿ ತಪ್ಪಾದ ಅಕೌಂಟ್ ಗೆ ಹಣ ವರ್ಗಾವಣೆ ಆದರೆ, ಆ ಖಾತೆಯನ್ನು ಹೊಂದಿರುವ ವ್ಯಕ್ತಿಯ ಒಪ್ಪಿಗೆ ಇಲ್ಲದೇ ಅವರ ಖಾತೆಯಿಂದ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ ಹಣವನ್ನು ಹಿಂದಿರುಗಿಸಲು ಒಪ್ಪಿಗೆ ಕೊಟ್ಟರೆ, ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ಇಲ್ಲವೇ ಆ ವ್ಯಕ್ತಿ ಹಣವನ್ನು ಹಿಂದಿರುಗಿಸಲು ಒಪ್ಪದೇ ಇದ್ದರೆ, ನೀವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಹಣ ಹಿಂದಿರುಗಿಸಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ ಕೋರ್ಟ್‌ ನಲ್ಲಿ ಪ್ರಕರಣವನ್ನು ದಾಖಲಿಸಬೇಕು. ಹಾಗಾಗಿ ಹಣ ವರ್ಗಾವಣೆ ಮಾಡುವಾಗ ಕೊಂಚ ಎಚ್ಚರವಿರಲಿ.

Related News

spot_img

Revenue Alerts

spot_img

News

spot_img