22.9 C
Bengaluru
Friday, July 5, 2024

ನಾಳೆ “ಮತದಾನ” ‌ಮಾಡಲು ಮರೆಯದಿರಿ:ಇಂದು ಬರಿ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ!

ರಾಜ್ಯ ಚುನಾವಣಾ ಕಣ ಅಂತಿಮ ಹಂತಕ್ಕೆ ಬಂದಿದೆ. ಹೈ ವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ನಿನ್ನೆ ಅಧಿಕೃತ ತೆರೆ ಬಿದ್ದಿದೆ. ಇಂದು ಅಭ್ಯರ್ಥಿಗಳು ಮನೆ ಮನೆ ಮತ ಪ್ರಚಾರ ಮಾಡಬಹುದು.ಬೆಂಗಳೂರು: ರಾಜ್ಯದ ಮೂರು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತದಾರರ ಮನಗೆಲ್ಲಲು ಇಂದು ಅಂತಿಮ ಕಸರತ್ತು ನಡೆಸಲಿದ್ದಾರೆ.

ಮೇ 10ರ (ನಾಳೆ) ಚುನಾವಣಾ ಜಿದ್ದಾಜಿದ್ದಿನ ಬಹಿರಂಗ ಪ್ರಚಾರ ನಿನ್ನೆ (ಸೋಮವಾರ) ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಆ ಮೂಲಕ 40 ದಿನಗಳ ಅಬ್ಬರದ ಪ್ರಚಾರ ಮುಕ್ತಾಯ ಕಂಡಿದೆ. ಇಂದು ಅಭ್ಯರ್ಥಿಗಳಿಗೆ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ.

ನಾಳೆ ಮತದಾನ: ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೆ ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನವಾಗಿ 2 ದಿನಗಳ ಬಳಿಕ ಅಂದ್ರೆ ಮೇ 13 ರಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ.

48 ತಾಸು ಶೂನ್ಯ ವೇಳೆ: ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆ, ಬಹಿರಂಗ ಪ್ರಚಾರ ನಡೆಸುವುದನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮಾಧ್ಯಮಗಳಿಗೆ ನಿರ್ಬಂಧವಿದೆ.

144 ಸೆಕ್ಷನ್ ಜಾರಿ: ಚುನಾವಣೆ ಒಳಪಡುವ ಕ್ಷೇತ್ರಗಳಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್(ಸಿಆರ್ ‌ಪಿಸಿ) 1973 ಸೆಕ್ಷನ್ 144 ರ ಅಡಿಯಲ್ಲಿ ಮತದಾನ ಮುಕ್ತಾಯಕ್ಕೆ ಕೊನೆಗೊಳ್ಳುವ 48 ಗಂಟೆಗಳ ಕಾಲವಧಿಯಲ್ಲಿ ಕಾನೂನುಬಾಹಿರ ಸಭೆಗಳಿಗೆ ನಿಷೇಧವಿದೆ. ನಿಷೇಧಾಜ್ಞೆ ಆದೇಶದ ಅಡಿಯಲ್ಲಿ ನಿರ್ಬಂಧಿತ ಪ್ರದೇಶದಲ್ಲಿ 5 ಜನರಿಗಿಂತ ಹೆಚ್ಚು ವ್ಯಕ್ತಿಗಳು ಸೇರುವುದು, ಒಟ್ಟಿಗೆ ಸಂಚರಿಸಲು ಅನುಮತಿ ಇರುವುದಿಲ್ಲ. ಮನೆ-ಮನೆ ಪ್ರಚಾರಕ್ಕೆ ಸಂಬಂಧಿಸಿದ ಭೇಟಿಗೆ ನಿರ್ಬಂಧ ಇಲ್ಲ.

ಶೂನ್ಯ ವೇಳೆ ಎಂದರೇನು?: ಶೂನ್ಯ ವೇಳೆ ಅಂದರೆ ಬಹಿರಂಗ ಪ್ರಚಾರದ ಅವಧಿ ಮುಗಿದ ನಂತರದ 48 ಗಂಟೆಯಲ್ಲಿ ಹೊರಗಿನಿಂದ ಬಂದಿರುವ ಮತ್ತು ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಸೇರಿದಂತೆ ಮುಂತಾದವರು ಕ್ಷೇತ್ರದಲ್ಲಿ ಉಳಿಯಬಾರದು. ಅಂತಹ ವ್ಯಕ್ತಿಗಳು ಪ್ರಚಾರದ ಅವಧಿ ಮುಗಿದ ತಕ್ಷಣ ಕ್ಷೇತ್ರ ತೊರೆಯಬೇಕು. ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್‌ ಕ್ಷೇತ್ರದಲ್ಲಿ ಮತದಾರ ಅಲ್ಲದಿದ್ದರೆ ಈ ನಿರ್ಬಂಧ ಅನ್ವಯಿಸುವುದಿಲ್ಲ.

ಮದ್ಯ ಮಾರಾಟ ನಿಷೇಧ: ಮೇ 8 ರ ಸಂಜೆ 6 ಗಂಟೆಯಿಂದ ಮೇ 10ರವರೆಗೆ ರಾಜ್ಯದಲ್ಲಿ ಮದ್ಯಪಾನ ಮಾರಾಟ ನಿಷೇಧಿಸಲಾಗಿದೆ. ಮತದಾನ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿ ವರ್ಧಕಗಳನ್ನು ಬಳಸಲು ಅನುಮತಿ ಇರುವುದಿಲ್ಲ.

ಮಾಧ್ಯಮಗಳಿಗೆ ಮಾರ್ಗಸೂಚಿ: ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ರಾಜ್ಯ ಜಿಲ್ಲಾ ಮಟ್ಟದಲ್ಲಿ ಎಂಸಿಎಂಸಿ ಸಮಿತಿಯಿಂದ ಮುಂಚಿತವಾಗಿ ಪ್ರಮಾಣಿಕರಿಸಲ್ಪಟ್ಟಿದ್ದು, ಯಾವುದೇ ರಾಜಕೀಯ ಪಕ್ಷಗಳಾಗಲಿ, ಅಭ್ಯರ್ಥಿಗಳಾಗಲಿ, ಇತರೆ ಸಂಸ್ಥೆಗಳಾಗಲಿ/ಯಾವುದೇ ವ್ಯಕ್ತಿಗಳು ಯಾವುದೇ ತರಹದ ಜಾಹೀರಾತನ್ನು 2023ರ ಮೇ9 ಮತ್ತು 10 ರಂದು ಚುನಾವಣೆಗೆ ಒಂದು ದಿನ ಮೊದಲು ಮತ್ತು ಮತದಾನದ ದಿನದಂದು ಪ್ರಕಟಿಸಲು ಉದ್ದೇಶಿಸಿರುವ ಜಾಹೀರಾತಿನ ವಿಷಯಗಳನ್ನು ಹೊರತುಪಡಿಸಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ.

Related News

spot_img

Revenue Alerts

spot_img

News

spot_img