26.7 C
Bengaluru
Sunday, December 22, 2024

ಕೃಷಿ ಜಮೀನಿನ ವರ್ಗಾವಣೆ ಪತ್ರಗಳ ನೋಂದಣಿ ಸಮಯದಲ್ಲಿ ನೀಡಬೇಕಾದ ದಾಖಲೆಗಳು ಈಗಿವೆ.

ಬೆಂಗಳೂರು ಜುಲೈ 02: ಇತ್ತೀಚೆಗೆ ಅದರಲ್ಲಿಯೂ ಕೋವಿಡ್ ಬಂದಮೇಲಂತು ಜನರು ಬೆಂಗಳೂರಿನಲ್ಲಿ ಎಷ್ಟೇ ಆಡಂಬರದಿಂದ ಇದ್ದರೂ, ಕ್ವಾರಂಟೇನ್ ಹಾಗೂ ಊರಿನಲ್ಲಿ ತುಂಬಾ ದಿನಗಳ ಕಾಲ ಕಳೆದ ಪರಿಣಾಮ ಎಲ್ಲರಿಗೂ ತಮ್ಮ ತಮ್ಮ ಊರುಗಳಲ್ಲಿನ ಜಮೀನಿನ ಬೆಲೆ ಆಗ ತಿಳಿಯಿತು, ಯಾರ ಯಾರ ಹೆಸರಲ್ಲೊ ಇದ್ದ ಎಷ್ಟೋ ಜಮೀನುಗಳ ಖಾತೆ ಮಾಡಿಸಿಕೊಳ್ಳುವ ಕೆಲಸವು ಸಹ ಚುರುಕಾಗಿತು. ಹಾಗೆ ಕೃಷಿ ಜಮೀನುಗಳ ವರ್ಗಾವಣೆ ಪತ್ರಗಳ ನೋಂದಣಿ ಸಮಯದಲ್ಲಿ ಯಾವ ಯಾವ ದಾಖಲೆಗಳು ಮುಖ್ಯವಾಗುತ್ತವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

1.ಅನುಬಂಧ-II ರಂತೆ ಪ್ರಮಾಣ ಪತ್ರ.

2. ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು,1977ರ ನಿಯಮ 3ರಲ್ಲಿ ನಿಗದಿಪಡಿಸಿರುವ ನಮೂನೆ 1.

3.ಜಮೀನಿನ (RTC) ಪಹಣಿ ಪತ್ರ (ಪತ್ರವನ್ನು ನೋಂದಣಿಗೆ ಹಾಜರುಪಡಿಸಿದ ದಿನಾಂಕದ ಹಿಂದಿನ 15 ದಿನಗಳ ಒಳಗೆ ನೀಡಲ್ಪಟ್ಟಿರುವ RTC).

4.ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರ ಕಲಂ 81-ಎರಡಿ ಘೋಷಣಾ ಪತ್ರ.

5.ಕರ್ನಾಟಕ ಪರಿಶಿಷ್ಠ ಜಾತಿಗಳ ಮತ್ತು ಪರಿಶಿಷ್ಠ ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ, 1978ರಡಿ (ಕಲಂ 6ರನ್ವಯ) ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ನಿರಾಕ್ಷೇಪಣ ಪತ್ರ ಅಥವಾ ಅನುಮತಿ ಪತ್ರ.

6.ಜಮೀನಿನ ಸರ್ವೆ ನಕ್ಷೆ (ಸ್ಕೆಚ್) – ನಮೂನೆ 11-ಇ (ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 131(ಸಿ) ಹಾಗೂ ಕರ್ನಾಟಕ ಭೂ ಕಂದಾಯ ನಿಯಮಗಳು,1966, ನಿಯಮ 46-ಎಚ್ ರಡಿ ವಿಧಿಸಿರುವಂತೆ).

7.ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ 60 ಅಥವಾ 61ರಲ್ಲಿ ಘೋಷಣೆ.

Related News

spot_img

Revenue Alerts

spot_img

News

spot_img