ಬೆಂಗಳೂರು ಜುಲೈ 14:ನೋಂದಣಿ ಸಮಯದಲ್ಲಿ ನಗರಸಭೆ ವ್ಯಾಪ್ತಿಯ ವರ್ಗಾವಣೆ ದಸ್ತಾವೇಜುಗಳ ಜೊತೆಗೆ ಹಾಜರುಪಡಿಸಬೇಕಾದ ದೃಢೀಕೃತ ದಾಖಲೆಗಳು ಯಾವುವೆಂದರೆ, ಪಟ್ಟಣ ಪಂಚಾಯತಿ/ಪುರಸಭೆ/ನಗರ ಸಭೆ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಪಟ್ಟಂತೆ ಈ ಕೆಳಕಂಡಂತಿವೆ.
1.ಅನುಬಂಧ-IIರಂತೆ ಪ್ರಮಾಣ ಪತ್ರ,
2.ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು, 1977ರ ನಿಯಮ 3ರಲ್ಲಿ ನಿಗದಿಪಡಿಸಿರುವಂತೆ ನಮೂನೆ 1.
3.ಪಟ್ಟಣ ಪಂಚಾಯತಿ/ಪುರಸಭೆ/ನಗರ ಸಭೆ ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಸ್ವತ್ತಿನ ಖಾತೆ ಮತ್ತುಅಸೆಸ್ ಮೆಂಟ್ ವಹಿಯ ಉದ್ಭತ ಭಾಗ.
4. ಸ್ವತ್ತುಗಳು ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ನಮೂನೆ 1 ಮತ್ತು 12ರ ಜೊತೆಗೆ ಪಟ್ಟಣ ಪಂಚಾಯತಿ/ಪುರಸಭೆ/ನಗರ ಸಭೆ/ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.
5.ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ/ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರೆ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.
6. ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ 60 ಅಥವಾ 61ರಲ್ಲಿ ಘೋಷಣೆ.
ಈ ದೃಢೀಕೃತ ದಾಖಲೆಗಳೊಂದಿಗೆ ನಿಮ್ಮ ಜಮೀನಿನ ವ್ಯಾಪ್ತಿಯ ನೋಂದಣಿ ಕಛೇರಿಯಲ್ಲಿ ನೋಂದಣಿ ಮಾಡಿಸಬಹುದು.