20 C
Bengaluru
Wednesday, January 22, 2025

ನೋಂದಣಿ ಸಮಯದಲ್ಲಿ ವರ್ಗಾವಣೆ ದಸ್ತಾವೇಜುಗಳ ಜೊತೆಗೆ ಹಾಜರುಪಡಿಸಬೇಕಾದ ದೃಢೀಕೃತ ದಾಖಲೆಗಳು ಇಲ್ಲಿವೆ ನೋಡಿ.

ಬೆಂಗಳೂರು ಜುಲೈ 01:ನೋಂದಣಿ ಸಮಯದಲ್ಲಿ ವರ್ಗಾವಣೆ ದಸ್ತಾವೇಜುಗಳ ಜೊತೆಗೆ ಹಾಜರುಪಡಿಸಬೇಕಾದ ದೃಢೀಕೃತ ದಾಖಲೆಗಳು :-

ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವತ್ತುಗಳಿಗೆ:
1.ಅನುಬಂಧ-IIರಂತೆ ಪ್ರಮಾಣ ಪತ್ರ,
2.ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು, 1977ರ ನಿಯಮ 3ರಲ್ಲಿ ನಿಗದಿಪಡಿಸಿರುವಂತೆ ನಮೂನೆ 1.

3.ಗ್ರಾಮ ಪಂಚಾಯತಿ ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಸ್ವತ್ತಿನ ಖಾತೆ ಮತ್ತುಅಸೆಸ್ ‌ಮೆಂಟ್ ವಹಿಯ ಉದ್ಭತ ಭಾಗ ನಮೂನೆ 1 ಮತ್ತು 12.

4. ಸ್ವತ್ತುಗಳು ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ನಮೂನೆ 1 ಮತ್ತು 12ರ ಜೊತೆಗೆ ಗ್ರಾಮ ಪಂಚಾಯತಿ/ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

5.ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ/ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರೆ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

6. ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ 60 ಅಥವಾ 61ರಲ್ಲಿ ಘೋಷಣೆ.

ಪಟ್ಟಣ ಪಂಚಾಯತಿ/ಪುರಸಭೆ/ನಗರ ಸಭೆ ವ್ಯಾಪ್ತಿಯ ಸ್ವತ್ತುಗಳಿಗೆ:-
1. ಅನುಬಂಧ-IIರಂತೆ ಪ್ರಮಾಣ ಪತ್ರ.

2. ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು, 1977ರ ನಿಯಮ 3ರಲ್ಲಿ ನಿಗದಿಪಡಿಸಿರುವ ನಮೂನೆ 1.

3. ಪಟ್ಟಣ ಪಂಚಾಯತಿ/ಪುರಸಭೆ/ನಗರಸಭೆಯ ಸಕ್ಷಮ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉದ್ಭತ ಭಾಗ,

4.ಸ್ವತ್ತುಗಳು ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉಧೃತ ಭಾಗದ ಜೊತೆಗೆ ಪಟ್ಟಣ ಪಂಚಾಯತಿ/ಪುರಸಭೆ/ನಗರಸಭೆ/ಸಕ್ಷಮ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

5.ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ/ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

6. ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ 60 ಅಥವಾ 61ರಲ್ಲಿ ಘೋಷಣೆ.

ಸಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ/ಮಹಾನಗರ ಪಲಿಕೆ ವ್ಯಾಪ್ತಿಯ ಸ್ವತ್ತುಗಳಿಗೆ;-
1.ಅನುಬಂಧ-IIರಂತೆ ಪ್ರಮಾಣ ಪತ್ರ,

2. ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು, 1977ರ ನಿಯಮ 3ರಲ್ಲಿ ನಿಗದಿಪಡಿಸಿರುವ ನಮೂನೆ 1.

3. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ/ಮಹಾನಗರ ಪಾಲಿಕೆ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉದ್ಭತ ಭಾಗ.

4. ಸ್ವತ್ತುಗಳು ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉದ್ಭತ ಭಾಗದ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ/ಮಹಾನಗರ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

5. ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ/ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

6. ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ 60 ಅಥವಾ 61ರಲ್ಲಿ ಘೋಷಣೆ.

Related News

spot_img

Revenue Alerts

spot_img

News

spot_img