28.3 C
Bengaluru
Friday, June 28, 2024

ಜನವರಿಯಲ್ಲಿ ಯುವ ನಿಧಿ ಯುವ ನಿಧಿ ನಿರುದ್ಯೋಗ ಭತ್ಯೆ ಪಡೆಯಲು ಅವಶ್ಯಕ ದಾಖಲೆಗಳು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಡಿಪ್ಲೋಮಾ, ಪದವೀಧರರಿಗೆ ಜನವರಿಯಲ್ಲಿ ‘ಯುವನಿಧಿ’ ಜಾರಿಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ.ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ 83ಕ್ಕೆ ಆದೇಶ ಹೊರಡಿಸಿ , ಜಾರಿಗೊಳಿಸಲಾಗುತ್ತಿದೆ ಮತ್ತು 4 ಗ್ಯಾರಂಟಿ ಯೋಜನೆಗಳು ಈಗಾಗಲೇ ಜಾರಿಯಾಗಿವೆ, ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗಿದೆ.ಇದೀಗ 2024 ರ ಜನವರಿಯಲ್ಲಿ ಡಿಪ್ಲೋಮಾ, ಪದವೀಧರರಿಗೆ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ಧತೆಗಲನ್ನು ನಡೆಸಲಾಗಿದೆ.ಆಧಾರ್ ಕಾರ್ಡ್,ಆದಾಯ ಪ್ರಮಾಣ ಪತ್ರ,ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ,ಬ್ಯಾಂಕ ಖಾತೆಯ ವಿವರ,ಇ-ಮೇಲ್ ಐಡಿ,ಮೊಬೈಲ್ ಸಂಖ್ಯೆ,ಭಾವಚಿತ್ರ.ಪದವಿ ಹಾಗೂ ಡಿಪ್ಲಮೋ ಮುಗಿಸಿದವರ ಕೊನೆಯ ವರ್ಷದ ಅಂಕಪಟ್ಟಿ.ದಾಖಲೆಗಳು ಯುವ ನಿಧಿ ನಿರುದ್ಯೋಗ ಭತ್ಯೆ ಪಡೆಯಲು ಅವಶ್ಯ.

Related News

spot_img

Revenue Alerts

spot_img

News

spot_img