20.5 C
Bengaluru
Tuesday, July 9, 2024

ದಸ್ತಾವೇಜು ನೋಂದಣಿ ಹೆಬ್ಬೆಟ್ಟು, ಭಾವಚಿತ್ರ ಕೇಂದ್ರೀಕೃತ ಸರ್ವರ್‌ಗೆ ರವಾನೆ

ಬೆಂಗಳೂರು: ದಸ್ತಾವೇಜುಗಳ ನೋಂದಣಿ ಸಮಯದಲ್ಲಿ ಪಡೆಯಲಾಗುವ ಹೆಬ್ಬೆಟ್ಟಿನ ಗುರುತು ಮತ್ತು ಭಾವಚಿತ್ರ ಮಾಹಿತಿಯನ್ನು ರಾಜ್ಯ ದತ್ತ ಕೇಂದ್ರದ ಕೇಂದ್ರೀಕೃತ ಸರ್ವರ್‌ನಲ್ಲಿ ಸಂಗ್ರಹಿಸಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.

ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ದಸ್ತಾವೇಜುಗಳ ನೋಂದಣಿ ಸಮದಲ್ಲಿ ಅರ್ಜಿದಾರರ ಹೆಬ್ಬೆಟ್ಟಿನ ಗುರುತು ಹಾಗೂ ಭಾವಚಿತ್ರದ ಮಾಹಿತಿಗಳನ್ನು ಈ ಹಿಂದೆ ಸಿ.ಡಿ. ಗಳಲ್ಲಿ ಸಣಗ್ರಹಿಸಲಾಗುತ್ತಿತ್ತು. ಉಪನೋಂದಣಿ ಕಚೇರಿಗಳಲ್ಲಿ ಕಳೆದ ಜೂನ್ 16ರಂದು ಅಳವಡಿಸಿರುವ ಕಾವೇರಿ ಸರ್ವೀಸ್ ಪ್ಯಾಕ್‌ (Kaveri Service Pack) ಅನ್ವಯ ಈ ಮಾಹಿತಿಯನ್ನು ಕೇಂದ್ರೀಕೃತವಾಗಿ ರಾಜ್ಯ ದತ್ತ ಕೇಂದ್ರದಲ್ಲಿ ಸಂಗ್ರಹವಾಗುವಂತೆ ಕಾವೇರಿ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗಿದೆ.

ಈ ಹಿಂದೆ ಸಿಡಿಗಳಲ್ಲಿ ಸಂಗ್ರಹಿಸಿರುವ ಹೆಬ್ಬೆಟ್ಟಿನ ಗುರುತು ಮತ್ತು ಭಾವಚಿತ್ರಗಳನ್ನು ರಾಜ್ಯ ದತ್ತ ಕೇಂದ್ರದ ಕೇಂದ್ರೀಕೃತ ಸರ್ವರ್‌ನಲ್ಲಿ ಸಂಗ್ರಹಿಸುವ ಸಂಬಂಧ ಕಾವೇರಿ ತಂತ್ರಾಂಶದ ‘Kaveri Scan Archival’ ನಲ್ಲಿ ”Upload Photo/ Thumb” ಆಯ್ಕೆ ನೀಡಲಾಗಿರುತ್ತದೆ. ಈ ಆಯ್ಕೆಯನ್ನು ಉಪಯೋಗಿಸಿ ಸಿಡಿಗಳಲ್ಲಿರುವ ಹೆಬ್ಬೆಟ್ಟಿನ ಗುರುತು ಹಾಗೂ ಭಾವಚಿತ್ರವನ್ನು ಕೇಂದ್ರೀಕೃತ ಸರ್ವರ್‌ಗೆ ರವಾನಿಸಬೇಕು ಎಂದು ಸೂಚಿಸಲಾಗಿದೆ.

ಈ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲು ಉಪನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಜನವರಿ 2019ರಿಂದ ಉಪನೋಂದಣಿ ಕಚೇರಿಗಳಲ್ಲಿ ಪ್ರತಿದಿನ ಸಿ.ಡಿ. ರೈಟ್ ಮಾಡುತ್ತಿರುವುದರಿಂದ ಇಂತಹ ಸಿಡಿಗಳಲ್ಲಿ ಹೆಬ್ಬೆಟ್ಟಿನ ಗುರುತು ಮತ್ತು ಭಾವಚಿತ್ರ ಮಾಹಿತಿಯನ್ನು ಮೊದಲನೇ ಹಂತದಲ್ಲಿ ಕಚೇರಿಯ ಅವಧಿಯಲ್ಲಿ ಪೂರ್ಣಗೊಳಿಸಬೇಕು.

2003-04ರಿಂದ ಜನವರಿ 2019ರವರೆಗಿನ ಸಿಡಿಗಳಲ್ಲಿರುವ ಹೆಬ್ಬೆಟ್ಟಿನ ಗುರುತು ಮತ್ತು ಭಾವಚಿತ್ರಗಳ ಮಾಹಿತಿಯನ್ನು ‘ಎರಡನೇ ಹಂತದಲ್ಲಿ’ ಕಚೇರಿಯ ಅವಧಿಯ ನಂತರ ಅಥವಾ ರಜಾ ದಿನಗಳಲ್ಲಿ ಕೇಂದ್ರೀಕೃತ ಸರ್ವರ್‌ಗೆ ರವಾನಿಸಬಹುದು.

ಕೇಂದ್ರೀಕೃತ ಸರ್ವರ್‌ಗೆ ಹೆಬ್ಬೆಟ್ಟಿನ ಗುರುತು ಮತ್ತು ಭಾವಚಿತ್ರಗಳ ಮಾಹಿತಿಯನ್ನು ರವಾನಿಸುವ ಪ್ರಗತಿಯ ಕುರಿತು ವರದಿಯನ್ನು ಜಿಲ್ಲಾ ನೋಂದಣಾಧಿಕಾರಿಗಳು ಪ್ರತಿ ತಿಂಗಳು ಕೇಂದ್ರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

Related News

spot_img

Revenue Alerts

spot_img

News

spot_img