19.9 C
Bengaluru
Friday, November 22, 2024

ದಕ್ಷಿಣ ದಿಕ್ಕು ಅಶುಭ ಎಂದು ಭಾವಿಸಿದ್ದೀರಾ? ಹಾಗಾದರೆ ಈ ಅಂಶಗಳನ್ನು ತಿಳಿದುಕೊಳ್ಳಿ..

ದಕ್ಷಿಣ ದಿಕ್ಕು ಭೂ ತತ್ವದಿಂದ ಪ್ರಾಪ್ತವಾಗಿರುತ್ತದೆ. ಯಮನ ಒಡೆತನದ ಈ ದಿಕ್ಕನ್ನು ಮುಕ್ತಿ ಕಾರಕ ಎಂದು ಹೇಳಲಾಗಿದೆ. ದಕ್ಷಿಣಾಭಿಮುಖವಾದ ಮನೆಯ ಯಜಮಾನ ಧೈರ್ಯ ಹಾಗೂ ಸ್ಥಿರತೆಯ ಪ್ರವೃತ್ತಿಯನ್ನು ಹೊಂದಿರುತ್ತಾನೆ. ವಾಸ್ತು ನಿಯಮದ ಪ್ರಕಾರ ದಕ್ಷಿಣ ದಿಕ್ಕು ಏನನ್ನು ಸೂಚಿಸುತ್ತದೆ ಹಾಗೂ ದೋಷ ಯಾವುದು ಎಂದು ಈ ಕೆಳಕಂಡಂತೆ ವಿವರಿಸಲಾಗಿದೆ.

ಸಾಮಾನ್ಯವಾಗಿ ಸಾಮಾನ್ಯವಾಗಿ ಜನರು ದಕ್ಷಿಣ ದಿಕ್ಕನ್ನು ಅಶುಭ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಇದು ಯಮನ ನಿವಾಸ. ಮೃತ್ಯು ದೇವತೆ. ಆದ್ದರಿಂದ ಇದನ್ನು ಮೃತ್ಯು ದಿಕ್ಕು ಎಂದು ಭಾವಿಸುತ್ತಾರೆ. ಆದರೆ, ಕೆಲವು ವಿದ್ವಾಂಸರು ಇದನ್ನು ಸಮೃದ್ಧ ಶಾಲಿ ದಿಕ್ಕು ಎಂದು ಅಭಿಪ್ರಾಯ ಪಡುತ್ತಾರೆ.

ಧೈರ್ಯ ಹಾಗೂ ಸ್ಥಿರತೆಯ ಪ್ರತೀಕ ದಕ್ಷಿಣ ದಿಕ್ಕು. ಕೆಟ್ಟದ್ದನ್ನೆಲ್ಲಾ ನಷ್ಟಗೊಳಿಸುತ್ತದೆ ಎಂದು ಪಂಡಿತರ ಅಭಿಪ್ರಾಯಪಡುತ್ತಾರೆ. ತಿರುಪತಿ ವೆಂಕಟೇಶ್ವರನ ದೇವಸ್ಥಾನ ಈ ಅಭಿಪ್ರಾಯಕ್ಕೆ ಪ್ರತೀಕ. ಇದು ಪ್ರಸಿದ್ಧಿ ಹಾಗೂ ಸಮೃದ್ಧಿ ಹೊಂದಲು ಬೇರೆ ಇನ್ನಿತರ ಕಾರಣಗಳು ಇದ್ದರೂ ಸಹ ಭಾರತ ದೇಶದ ದಕ್ಷಿಣ ದಿಕ್ಕಿನಲ್ಲಿ ಇರುವ ಈ ದೇವಸ್ಥಾನ ಜಗತ್‌ಪ್ರಸಿದ್ಧವಾಗಿದೆ. ಆದ್ದರಿಂದ ಹೆಚ್ಚು ಜನರು ಹೇಳುವಂತೆ ಕೆಟ್ಟದಾದ ದಿಕ್ಕು ಏನಲ್ಲ.

ಹೆಚ್ಚು ತೂಕದ ವಸ್ತು ಅಥವಾ ಗೋಡೆಯನ್ನು ನಿರ್ಮಿಸಬೇಕು:
ಮನೆ ಕಟ್ಟುವಾಗ ದಕ್ಷಿಣ ದಿಕ್ಕನ್ನು ಸಂಪೂರ್ಣ ಮುಚ್ಚಿಬಿಡಬೇಕು. ನಿರ್ಮಾಣದ ಸಮಯ ಸರ್ವ ಪ್ರಥಮವಾಗಿ ದಕ್ಷಿಣ ಭಾಗವನ್ನು ಮುಚ್ಚಬೇಕು. ಇಲ್ಲಿ ಹೆಚ್ಚು ಹೆಚ್ಚು ತೂಕದ ವಸ್ತು ಅಥವಾ ಗೋಡೆಯನ್ನು ನಿರ್ಮಿಸಬೇಕು. ಒಂದು ವೇಳೆ ದಿಕ್ಕು ದೋಷಿತವಾಗಿದ್ದರೆ ಅಥವಾ ಬಯಲಾಗಿ ಬಿಟ್ಟಿದ್ದರೆ ಶತೃಭಯ ಹಾಗೂ ರೋಗ ರುಜಿನಗಳಿಗೆ ಕಾರಣವಾಗತ್ತದೆ. ದಕ್ಷಿಣ ದಿಕ್ಕಿನಲ್ಲಿ ಹೆಚ್ಚು ಖಾಲಿ ಸ್ಥಳವಿದ್ದರೆ ಧನಹಾನಿ, ವಿನಾಕಾರಣ ಜಗಳ, ಸ್ತ್ರೀಯರ ಮನಸ್ಸಿನಲ್ಲಿ ಅಶಾಂತಿ ತಂಬಿರುತ್ತದೆ. ಮನೆಯ ದಕ್ಷಿಣ ಭಾಗದಲ್ಲಿ ಪುಸ್ತಕಗಳನ್ನು ಇರಿಸಿದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟಾಗುತ್ತದೆ.

ದೋಷಗಳೇನು?:
ದಕ್ಷಿಣ ಭಾಗದ ದ್ವಾರ ಆಗ್ನೇಯ ಕೋನದಲ್ಲಿ ಇದ್ದರೆ ಕಳ್ಳತನ, ಕೋರ್ಟ್‌ ವ್ಯಾಜ್ಯ, ಅಗ್ನಿಭಯ ಸದಾಕಾಲ ಕಾಡಿಸುತ್ತದೆ. ಒಂದು ವೇಳೆ ದ್ವಾರದ ಯಾವುದಾದರೂ ಗೋಡೆ, ಮನೆ ಇತ್ಯಾದಿ ನಿರ್ಮಾಣಗೊಂಡಿದ್ದರೆ ಶುಭಫಲವನ್ನು ನೀಡುತ್ತದೆ. ದ್ವಾರದ ಎದುರಿಗೆ ಯಾವುದಾದರೂ ತಗ್ಗು, ಬಯಲು ಪ್ರದೇಶ ಅಥವಾ ಕತ್ತಲೆ ಇದ್ದರೆ ಇಂತಹ ಮನೆಯ ಯಜನಮಾನನ ಸಕಲ ಸಹೋದರರು ತುಂಬಾ ಕಷ್ಟ ಅನುಭವಿಸುತ್ತಾರೆ.

ದಕ್ಷಿಣ ದಕ್ಕಿನಲ್ಲಿ ಪೂಜಾ ಕೋಣೆ ಇದ್ದರೆ ಅಥವಾ ಬೆಡ್‌ರೂಮ್ ಇದ್ದರೆ ಆ ಮನೆಯ ಯಜಮಾನ ಕೇವಲ ತೋರಿಕೆಗಾಗಿ ಪೂಜೆ ಪಠಣ ಮಾಡುತ್ತಾನೆ. ಶ್ರದ್ಧೆಯೊಡನೆ ಆತನಿಗೆ ಯಾವುದೇ ಸಂಬಂಧ ಇರುವುದಿಲ್ಲ. ದಕ್ಷಿಣ ಭಾಗದಲ್ಲಿ ಭಾವಿ ಇದ್ದರೆ ದುರ್ಘಟನೆಯನ್ನು ಸೂಚಿಸುತ್ತದೆ. ದಕ್ಷಿಣ ದಿಕ್ಕು ಅಥವಾ ನೈರುತ್ಯ ಕೋನದ ಮಧ್ಯದ ಸ್ಥಾನ ಸ್ನಾನದ ಕೋಣೆಗೆ ತುಂಬಾ ಉಪಕಾರಿಯಾಗಿದೆ. ಮುಖ್ಯಬಾಗಿಲು ದಕ್ಷಿಣ ದಿಕ್ಕಿಗೆ ಅಭಿಮುಖವಾಗಿದ್ದರೆ ಮನೆಯ ಬಾಲ್ಕನಿಯನ್ನುಪೂರ್ವ ದಿಕ್ಕಿನಲ್ಲಿ ನಿರ್ಮಿಸಬೇಕು.

ಜಮೀನಿನ ಮುಖ ದಕ್ಷಿಣ ದಿಕ್ಕಿಗೆ ಇದ್ದರೆ ಮುಖ್ಯ ದ್ವಾರವನ್ನು ದಕ್ಷಿಣ ದಿಕ್ಕಿನ ನಡುವೆ ಅಥವಾ ಆಗ್ನೇಯ ದಿಕ್ಕಿನಲ್ಲಿ ಕೂಡಿಸಬೇಕು. ವ್ಯಕ್ತಿಗಳು ಪರಿಸರ ಪ್ರೇಮಿಗಳಾಗಿದ್ದು, ಮನೆಯ ಸುತ್ತಮುತ್ತ ಗಿಡ ಮರಗಳನ್ನುಬೆಳೆಸಬೇಕು ಎಂದಿದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಬೆಳೆಸಬಹುದು.

ವಿದ್ಯಾರ್ಥಿಗಳು ಸದಾ ಕಾಲ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನತ್ತ ತಲೆಮಾಡಿ ಮಲಗಬೇಕು. ಮನೆಯ ಜನಮಾನನ ಮಲಗುವ ಕೋಣೆ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಇರಬೇಕು. ಅಂದಾಗ ಮಾತ್ರ ಆತನಿಗೆ ಸುಖನಿದ್ರೆ ಬರುತ್ತದೆ.

ಪರಿಹಾರ:
ದಕ್ಷಿಣ ದಿಕ್ಕಿನ ದೋಷಗಳು ಇದ್ದರೆ ಪರಿಹಾರವಾಗಿ ಮನೆಯ ಯಜಮಾನನು ಮಂಗಳ ವ್ರತ ಮಾಡಬೇಕು. ಅಥವಾ ಕಾಲಭೈರವನ ಆರಾಧನೆ ಮಾಡಬೇಕು. ಹನುಮಾನ ಚಾಲೀಸ ಹೇಳಬೇಕು. ಗಣಪತಿಯ ಮೂರ್ತಿಯನ್ನು ಮನೆಯೊಳಗೆ ಇರಿಸಬೇಕು. ದಕ್ಷಿಣ ದ್ವಾರಕ್ಕೆ ಮಂಗಳನ ಯಂತ್ರವನ್ನು ಕಟ್ಟಬೇಕು. ಮುಖ್ಯ ದ್ವಾರಕ್ಕೆ ಗಣಪತಿ ಫೋಟೊ ಅಂಟಿಸಬೇಕು. ದಿಕ್ಕು ದೋಷ ಯಂತ್ರವನ್ನು ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸಬೇಕು. ಮಂಗಳ ಪರಿಮಿಡ್ ಸಹ ಪ್ರತಿಷ್ಠಾಪಿಸಬಹುದು.

Related News

spot_img

Revenue Alerts

spot_img

News

spot_img