21.1 C
Bengaluru
Monday, December 23, 2024

ಐಷಾರಾಮಿ ಹೋಟೆಲ್ ನಲ್ಲಿ ತಂಗುವ ಆಸೆ ಇದ್ದರೆ, ಈ ಪ್ಯಾಲೆಸ್ ಗೆ ಬನ್ನಿ.. ಆದರೆ ನಿಮ್ಮ ಜೇಬಿನಲ್ಲಿ 29ಲಕ್ಷ ಹಣವಿರಲಿ..

ಬೆಂಗಳೂರು, ಮೇ. 16 : ಪ್ರತಿಯೊಬ್ಬರಿಗೂ ತಾನೊಬ್ಬ ಹೀರೋ ಆಗಿರಬೇಕು. ತನ್ನನ್ನು ನಾಲಕು ಜನ ಮೆಚ್ಚಬೇಕು. ತಾನೂ ಆಡಳಿತ ನಡೆಸಬೇಕು ಎಂಬ ಆಸೆ ಇರುತ್ತದೆ. ಆದರೆ, ಇದೆಲ್ಲಾ ಅಷ್ಟು ಸುಲಭವಲ್ಲ. ಆದರೆ, ಜೀವನದಲ್ಲಿ ರಾಜನಂತೆ ಒಂದು ದಿನವಾದರೂ ಬದುಕಬೇಕು ಎಂದು ಆಸೆ ಇದ್ದವರು, ಅದನ್ನು ಪೂರೈಸಿಕೊಳ್ಳಬಹುದು. ಅದು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದೀರಾ.. ಬಹಳ ಸುಲಭ ಆದರೆ ನಿಮ್ಮ ಬಳಿ ಲಕ್ಷಾಂತರ ರೂಪಾಯಿ ಹಣ ಒಂದಿದ್ದರೆ ಸಾಕು.

ಹೌದು ಇಲ್ಲೊಂದು ಐಷಾರಾಮಿ ಹೋಟೆಲ್ ಇದೆ. ಇಲ್ಲಿ ನಿಮಗೆ ರಾಜಾಥಿತ್ಯ ದೊರಕುತ್ತದೆ. ನಿಮಗೆಂದೇ ಈಜುಕೊಳ, ಉದ್ಯಾನವನ, ಚಿನ್ನವನ್ನು ಹೊದಿಸಿದ ಕಂಪಗಳು, ಗೋಡೆಗಳು, ನಿಮಗಾಗಿಯೇ ಪ್ರತ್ಯೇಕವಾದ ಅಡುಗೆ, ಜೋತಿಷಿಗಳು, ಬಂಗಾರದಲ್ಲಿ ನಿರ್ಮಿತವಾದ ಪೀಠೋಪಕರಣಗು, ಸ್ಪಾ, ಮ್ಯೂಸಿಯಮ್ ಹೀಗೆ ಎಲ್ಲವೂ ಇಲ್ಲಿ ಸಿಗುತ್ತದೆ. ಈ ಹೋಟೆಲ್ ನಲ್ಲಿ ನೀವು ತಂಗಿದರೆ, ಮಹಾರಾಜನ ಸತ್ಕಾರ್ಯವನ್ನು ಅನುಭವಿಸಬಹುದು. ಆದರೆ, ಇದಕ್ಕೆ ಹಣವಂತೂ ಕರ್ಚಾಗುತ್ತದೆ.

ಈ ಹೋಟೆಲ್ ಈಗ ವಿದೇಶಿಗರ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಇದು ಮಹಾರಾಜಾಸ್ ಪೆವಿಲಿಯನ್ ಸೂಟ್. ರಾಜಸ್ಥಾನದ ಜೈಪುರದಲ್ಲಿದೆ. ಮಹರಾಜರು ಇದ್ದ ಈ ಪ್ಲಾಲೆಸ್ ಗೆ 300 ವರ್ಷಗಳ ಇತಿಹಾಸವಿದೆ. ಇದರಲ್ಲಿ ತಂಗಲು ಒಂದು ದಿನಕ್ಕೆ ಬರೋಬ್ಬರಿ 29 ಲಕ್ಷ ರೂಪಾಯಿಯನ್ನು ಪಾವತಿಸಬೇಕು. ಇಲ್ಲಿ ರಾಜರಿಗೆ ನೀಡುತ್ತಿದ್ದ ವೈಭವೋಪೇತ ಸತ್ಕಾರ್ಯಗಳನ್ನು ನೀಡಲಅಗುತ್ತದೆ. ಡೈನಿಂಗ್ ಹಾಲ್ ನಲ್ಲಿ ತರಹೇವಾರಿ ತಿನಿಸುಗಳು, ಅದ್ಧೂರಿ ವೈಭೋಗವನ್ನು ಅನುಭವಿಸಲು ಈ ಹೋಟೆಲ್ ನಲ್ಲಿ ಅವಕಾಶವಿದೆ.

ಒಂದು ದಿನವಾದರೂ ರಾಜನಂತೆ ಮೆರೆಯಬೇಕು. ರಾಜನಿಗೆ ಇರುತ್ತಿದ್ದ ಸೌಕರ್ಯಗಳನ್ನು ಅನುಭವಿಸಬೇಕು ಎಂದು ಏನಾದರೂ ಇದ್ದರೆ, ನೀವು ಧಾರಾಳವಾಗಿ ಈ ಹೋಟೆಲ್ ಗೆ ಹೋಗಬಹುದು. ನೋಡಿ ನೀವು ಯೋಚಿಸಿ, ರಾಜಾತಿಥ್ಯವನ್ನು ಅನುಭವಿಸುವ ಆಸೆ ಅಥವಾ ಕನಸಿದ್ದರೆ, ಈ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿಕೊಳ್ಳಿ.

Related News

spot_img

Revenue Alerts

spot_img

News

spot_img