27.5 C
Bengaluru
Wednesday, November 6, 2024

ನಿಮ್ಮ ಮನೆಗೆ ಬಳಸುತ್ತಿರೊ M-Sand ಹೇಗಿದೆ ಅಂತ ಚೆಕ್ ಮಾಡ್ಬೇಕ ಹೀಗೆ ಮಾಡಿ?

ಬೆಂಗಳೂರು ಜೂನ್ 26: ಜೀವನದಲ್ಲಿ ಒಂದಾದರು ಮನೆ ಕಟ್ಟಬೇಕು ಅಥವಾ ಸ್ವಂತ ಮನೆಯನ್ನು ಹೊಂದಬೇಕು ಎಂದು ತುಂಬಾ ಜನ ಹಾತೊರೆಯುತ್ತಿರುವುದು ಸರ್ವೇ ಸಾಮಾನ್ಯ. ಅದರಲ್ಲಿಯು ಹಳ್ಳಿಯಿಂದ ಬೆಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ವರ್ಷಾನು ವರ್ಷ ಜೀವನ ಕಳೆದು ಬಾಡಿಗೆ ಕಟ್ಟಿ, ಬೇಸತ್ತಿರುವವರು ಸ್ವಂತ ಮನೆ ಇರಬೇಕಪ್ಪ ಎಂದು ಅಂದುಕೊಂಡಿರುತ್ತಾರೆ.

ಮನೆಯನ್ನು ಕಟ್ಟಲು ಕೈ ಹಾಕಿದಾಗ ಯಾವು ಬೆಸ್ಟ್ ಯಾವುದು worst ಅಂತ ತುಂಬಾ ಜನರಿಗೆ ತಿಳಿದಿರುವುದಿಲ್ಲ ಅದನ್ನು ತಿಳಿಸುವ ಒಂದು ಪ್ರಯತ್ನ ನಿಮ್ಮ ಬೆಂಬಲ ಇರಲಿ

M-Sand ಅಲ್ಲಿ ಮೂರು ವಿಧಗಳಿವೆ :
1.ಪ್ಲಾಸ್ಟರಿಂಗ್ ಸ್ಯಾಂಡ್ (Plastering Sand) P-Sand
2.ಕಾಂಕ್ರೆಟ್ ಸ್ಯಾಂಡ್
3. Regular M-Sand

1.ಪ್ಲಾಸ್ಟರಿಂಗ್ ಸ್ಯಾಂಡ್ (Plastering Sand) P-Sand:- ಇದನ್ನು ಬರಿ ಪ್ಲಾಸ್ಟರಿಂಗ್ ಗೆ ಹೆಚ್ಚಾಗಿ ಬಳಸುತ್ತಾರೆ.

2.ಕಾಂಕ್ರೆಟ್ ಸ್ಯಾಂಡ್:– ಕಾಂಕ್ರೆಟಿಂಗ್ ಮಾಡುವ ಸಮಯದಲ್ಲಿ ಬಳಸುತ್ತಾರೆ.

3. ರೆಗುಲರ್ M-Sand:- ಕಟ್ಟಡ ಕಟ್ಟಲು ಬಳಸಲಾಗುತ್ತದೆ.

ಮೋಸ ಹೇಗೆ ನಡೆಯುತ್ತದೆ?

ಪ್ಲಾಸ್ಟರಿಂಗ್ ಸಮಯದಲ್ಲಿ ಬೀಚ್ ಸ್ಯಾಂಡ್ ಎಂದು ಹೇಳಿ ನಿಮಗೆ ರೆಗುಲರ್ M-Sand ಅನ್ನೆ ತಂದು ಹಾಕುವ ಸಾಧ್ಯತೆ ಇರುತ್ತದೆ.ಆದ್ದರಿಂದ ಬೀಚ್ ಸ್ಯಾಂಡ್,ಕಾಂಕ್ರೆಟ್ ಸ್ಯಾಂಡ್,ರೆಗುಲರ್ M-Sand ಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ, ಇಲ್ಲದಿದ್ದರೆ ತಿಳಿದಿರುವವರನ್ನು ಸಂಪರ್ಕಿಸಿ.

M-Sand ಗಳ ಈಗಿನ ಬೆಲೆ ಎಷ್ಟಿದೆ?
ರೆಗುಲರ್ M-Sand:- 650 to 700/ Load ನಿಮ್ಮ ಹತ್ತಿರ ಇರುವ ಸ್ಥಳವಾದರೆ ಇನ್ನು ಒಳ್ಳೆಯದು.

ಕಾಂಕ್ರೆಟ್ ಸಾಂಡ್: 700 to 750/Load

ಪ್ಲಾಸ್ಟರಿಂಗ್ ಸಾಂಡ್ (Plastering Sand) P-Sand:- 1200 to 1300rs/Load

M-Sand ಗಳ ಬಳಕೆ ಹೆಚ್ಚುತ್ತಿರುವ ಕಾರಣ:-

ಕರ್ನಾಟಕದಲ್ಲಿಮರಳು ಮೇಲೆ ನಿಷೇಧವಿರುವುದರಿಂದ ಸರ್ಕಾರವೆ ಸಮ್ಮತಿಸಿ ಇತಿಂತ ಕೆಲಸಗಳಿಗೆ ಉಪಯೋಗವಾಗುವಂತ M-Sand ಅನ್ನು ಪಟ್ಟಿಮಾಡಿದೆ ಅದನ್ನು ಮೇಲೆ ಈಗಾಗಲೆ ಓದಿದ್ದೀರ.

M-Sand ಗಳ Quality ಚೆಕ್ ಮಾಡುವುದು ಹೇಗೆ?

(Plastering Sand) P-Sand:-

ಇದು ಮೊದಲೇ water wash(ನೀರಿನಿಂದ ತೊಳೆಯಲಾಗಿರುತ್ತದೆ) ಆದ್ದರಿಂದ ಧೂಳು ಬರುವುದಿಲ್ಲ ಬಂದರೆ ಇದು ಮಿಶ್ರಿತ ಅಥವಾ ಗುಣಮಟ್ಟ ಕಡಿಮೆ ಇದೆ ಎಂದು ಅರ್ಥ.
ಇದು ಕೈಯಲ್ಲಿ ಹಿಡಿದುಕೊಂಡರೆ ಹಗುರವಾಗಿರುತ್ತದೆ. ಕಲ್ಲುಗಳು ಇರುವುದಿಲ್ಲ.

Concrete Sand: ಇದು Air wash ಆಗಿರುತ್ತದೆ. ಆದ್ದರಿಂದ ಧೂಳು ಬರುವುದಿಲ್ಲ ಮತ್ತು ದಪ್ಪ ದಪ್ಪ ಕಲ್ಲುಗಳು ಇರುತ್ತವೆ. ಕಟ್ಟಡದ ಬಳಕೆಗೆ ಉತ್ತಮ.

ರೆಗುಲರ್ M-Sand:- ಜಾಸ್ತಿ ಧೂಳು ಇರುವುದಿಲ್ಲ.

Related News

spot_img

Revenue Alerts

spot_img

News

spot_img