20.8 C
Bengaluru
Saturday, July 27, 2024

ಬೆಂಗಳೂರು ಕಂಬಳಕ್ಕೆ ಸಿದ್ಧತೆಗಳು ಹೇಗಿದೆ ಗೊತ್ತಾ..?

#know how # preparations # Bangalore #Kambala

ಬೆಂಗಳೂರು: ಕಂಬಳಕ್ಕೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರು ಕಂಬಳವನ್ನ ಕಣ್ತುಂಬಿಕೊಳ್ಳಲು ಜನ ತುದಿಗಾಲಿನಲ್ಲಿ ತವಕದಿಂದ ಕಾಯುತ್ತಿದ್ದಾರೆ.ಹೌದು , ಬಹು ನಿರೀಕ್ಷಿತ ಬೆಂಗಳೂರು ಕಂಬಳ ಇದೇ ನವೆಂಬರ್ 25, 26 ರಂದು ಅರಮನೆ ಮೈದಾನದಲ್ಲಿ ರಂಗೇರಲಿದೆ.

ಇನ್ನು ಬೆಂಗಳೂರು ಕೋಣಗಳ ಓಟದ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಸಹ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗುತ್ತಿದೆ.ಇನ್ನು ಕಾಂಗ್ರೆಸ್ ಸರ್ಕಾದ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿದ್ದು ಒಂದು ರೀತಿ ಪ್ರತಿಷ್ಠಿತ ಸ್ಪರ್ಧೆ ಇದಾಗಿದೆ ಎಂದರೆ ತಪ್ಪಾಗಲಾರದು,

ಇನ್ನು ವಿಶೇಷ ಏನಂದ್ರೆ ಅರಮನೆ ಮೈದಾನದ 55 ಎಕರೆ ಪ್ರದೇಶದಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ.
155 ಮೀಟರ್ ಕಂಬಳ ಕೆರೆ ನಿರ್ಮಾಣ ಮಾಡಿದ್ದು, ಅದರ ಮೇಲೆ ಕೇಸರಿ, ಬಿಳಿ, ಹಸಿರು ಪಟ್ಟಿಯನ್ನ ಬಳಿಯಲಾಗಿದ್ದು, ಒಂದೆಡೆ ಇದು ಕಾಂಗ್ರೆಸ್ ಪಕ್ಷವನ್ನ ಹೋಲುವಂತಿದೆ ಅಂತ ಹಲವರು ವಾದ ಮಾಡತೊಡಗಿದ್ದಾರೆ.

ಇನ್ನು ಕಂಬಳದ ಸಭಾ ಕಾರ್ಯಕ್ರಮ ವೇದಿಕೆಗೆ ಪುನೀತ್ ರಾಜಕುಮಾರ್ ಎಂದು ನಾಮಕರಣ ಸಹ ಮಾಡಲಾಗಿದೆ. ಸರಿ ಸುಮಾರು‌ 200ಕ್ಕೂ ಹೆಚ್ಚು‌ ಜೋಡಿ ಕೋಣಗಳು ಕಂಬಳದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. 8 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿ ಸಹ ನಿರ್ಮಾಣ ಮಾಡಲಾಗಿದ್ದು, ಕಂಬಳದಲ್ಲಿ 8 ಲಕ್ಷ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ.

ಕಂಬಳದ ಕೋಣಗಳ ಬಹುಮಾನ ಎಷ್ಟು ಗೊತ್ತಾ..?

ಕಂಬಳದಲ್ಲಿ‌ ೩ ಬಹುಮಾನ ಇಡಲಾಗಿದೆ.
ಪ್ರಥಮ ಬಹುಮಾನ: 16 ಗ್ರಾಂ ಚಿನ್ನ, 1 ಲಕ್ಷ ನಗದು
ದ್ವಿತೀಯ ‌ಬಹುಮಾನ :8 ಗ್ರಾಂ ಚಿನ್ನ, 50 ಸಾವಿರ ನಗದು
ತೃತೀಯ ಬಹುಮಾನ:25 ಸಾವಿರ ನಗದು

ಇನ್ನು ಬೆಂಗಳೂರು ಕಂಬಳದಲ್ಲಿ ಜಾನಪದ ನೃತ್ಯಗಳ ಸೊಬಗು ಸಹ ಈ ಬಾರಿ ಭರ್ಜರಿಯಾಗಿರಲಿದೆ. ಯಕ್ಷಗಾನ, ಕರಂಗೋಲು ನೃತ್ಯ, ಆಟಿ‌ಕಳಂಜ, ಹುಲಿ ವೇಷ ಪ್ರದರ್ಶನ ಇರಲಿವೆ. ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಕಂಬಳವನ್ನ ಕಣ್ತುಂಬಿಕೊಳ್ಳಲು ಜನ ಮುಗಿ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದಾಗಿದೆ.

ಅಭಿಜಿತ್ , ರೆವಿನ್ಯೂ ಫ್ಯಾಕ್ಟ್ ನ್ಯೂಸ್ ಬೆಂಗಳೂರು

Related News

spot_img

Revenue Alerts

spot_img

News

spot_img