ಬೆಂಗಳೂರು: ಬಹಳಷ್ಟು ಕಾತುರತೆಯಿಂದ ಕಾಯುತ್ತಿದ್ದ ಬೆಂಗಳೂರು ಕಂಬಳಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನಪ್ರಿಯತೆ ಸಿಕ್ಕಿದೆ ಎಂದರೆ ತಪ್ಪಾಗಲಾರದು. ನೆನ್ನೆ ಬೆಂಗಳೂರು ಶುರುವಾಗಿದ್ದ ಕಂಬಳದಲ್ಲಿ ಸರಿ ಸುಮಾರು 175 ಜೋಡಿ ಕೋಣಗಳು ಕರಾವಳಿ ತೀರದ ವಿವಿಧ ಭಾಗಗಳಿಂದ ಆಗಮಿಸಿದ್ದವು. ಈ ಕೋಣಗಳ ಜೋಡಿ ಪೈಕಿ ಬಹಳಷ್ಟು ಕೋಣಗಳು ಕರಾವಳಿಯ ಹಲವು ಕಂಬಳಗಳಲ್ಲಿ ಹೆಸರು ಮಾಡಿದಂತಹ ಕೋಣಗಳಾಗಿವೆ. ನೇಗಿಲು ಕಿರಿಯ, ನೇಗಿಲು ಅಗ್ರ ಕಿರಿಯ , ನೇಗಿಲು ಹಿರಿಯ ಎನ್ನುವ ವಿಭಾಗಗಳಲ್ಲಿ ಸ್ಪರ್ಧೆ ಇಡಲಾಗಿದ್ದು, ಇದರಲ್ಲಿ ಈಗಾಗಲೇ ಕೆಲವು ಕೋಣಗಳು ಗೆದ್ದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಗೆ ಅವಕಾಶಗಿಟ್ಟಿಸಿವೆ. ಇನ್ನು ಕಂಬಳದಲ್ಲಿ ಇದಿಷ್ಟೇ ಅಲ್ಲದೆ ಕರಾವಳಿ ತೀರದ ಆಹಾರಮೇಳ ಸಹ ಆಯೋಜನೆ ಮಾಡಲಾಗಿದೆ. ಜೊತೆಗೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಜಾನಪದ ಕಲೆಗಳನ್ನು ಸಹ ಪ್ರದರ್ಶನ ಮಾಡಲಾಯಿತು. ಬೆಂಗಳೂರು ಕಂಬಳದ ಫೈನಲ್ ನಲ್ಲಿ ಯಾವ ಕೋಣಗಳು ಗೆದ್ದು ದಾಖಲೆ ನಿರ್ಮಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ..
ಅಭಿಜಿತ್ ,ರೆವಿನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು