26.7 C
Bengaluru
Sunday, December 22, 2024

ಈ ಐಷಾರಾಮಿ ಹೋಟೆಲ್ ನಲ್ಲಿ ತಂಗಲು ಒಂದು ದಿನಕ್ಕೆ ಎಷ್ಟು ಖರ್ಚು ಮಾಡಬೇಕು ಗೊತ್ತಾ..?

ಬೆಂಗಳೂರು, ಜೂ. 23 : ಈಗಾಗಲೇ ನೀವು ಸಾಕಷ್ಟು ಐಷಾರಾಮಿ ಹೋಟೆಲ್ ಗಳ ಬಗ್ಗೆ ಕೇಳಿರಬಹುದು. ಒಂದು ದಿನ ತಂಗಲು ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಂತಹದ್ದೇ ಮತ್ತೊಂದು ಹೋಟೆಲ್ ನ ಪರಿಚಯವನ್ನು ನಾವು ಇಂದು ನಿಮಗೆ ಮಾಡಿ ಕೊಡಲಿದ್ದೇವೆ. ಇಲ್ಲಿ ನೀವು ಒಂದು ದಿನ ತಂಗುವ ಬದಲು, ನಿಮಗೆ ಬೇಕಾಂದಂತಹ ಐಷಾರಾಮಿ ಮನೆಯನ್ನೇ ಖರೀದಿಸಿ ಜೀವನ ಪೂರ್ತಿ ವಾಸ ಮಾಡಬಹುದು. ಅಂತಹ ಹೋಟೆಲ್ ಎಲ್ಲಿದೆ.? ಅದರಲ್ಲಿನ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಆ ಹೋಟೆಲ್ ಹೆಸರು ದಿ ಲವರ್ಸ್ ಡೀಪ್ ಎಂದು ಕರೆಯಲಾಗುತ್ತದೆ. ಇದು ಕೆರಿಬಿಯನ್ ಸ್ವೀಪದ ರಾಷ್ಟ್ರವಾದ ಸೇಂಟ್ ಲೂಸಿಯಾದಲ್ಲಿ ಇದೆ. ಅದೂ ಕೂಡ ಜಲಾಂತರ್ಗಾಮಿ ನೌಕೆಯಲ್ಲಿ ಈ ಹೋಟೆಲ್ ಇದೆ. ಇದರೊಳಗೆ ಹೋದರೆ ನಿಮಗೆ ಸಮುದ್ರದ ಒಳಗೆ ಇದ್ದಂತೆ ಆಗುತ್ತದೆ. ಅಲ್ಲದೇ ಇದನ್ನು ವಿಶೇಷವಾಗಿ ಕಪಲ್ಸ್ ಗಳಿಗಾಗಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ರೊಮ್ಯಾಮಟಿಕ್ ಅನುಭವ ನೀಡುವಂತೆ ಈ ಹೋಟೆಲ್ ಅನ್ನು ನಿರ್ಮಾಣ ಮಾಡಲಾಗಿದೆ.

ಇನ್ನು ಈ ಹೋಟೆಲ್‌ ನಲ್ಲಿ ನಿಮಗಾಗಿ ಪ್ರತ್ಯೇಕವಾಗಿ ಸಿಬ್ಬಂದಿ ಅನ್ನು ನೀಡಲಾಗುತ್ತದೆ. ಚೆಫ್‌ ಕೂಡ ನಿಮಗಾಗಿ ಇರುತ್ತಾರೆ. ನೀವು ಯಾವ ರೀತಿಯ ಅಡುಗೆಯನ್ನು ಕೇಳುತ್ತೀರೋ ಅದನ್ನು ತಯಾರಿಸಿ ನೀಡುತ್ತಾರೆ. ಈ ಹೋಟೆಲ್‌ ನಲ್ಲಿ ಇದ್ದರೆ, ನಿಮಗೆ ಹೊರಗಿನ ಪ್ರಪಂಚದ ಅರಿವು ಕೂಡ ಇರುವುದಿಲ್ಲ. ಸಮುದ್ರದ ಒಳಗಿನ ಅನುಭವ ಪಡೆಯಲು ನೀವು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಒಂದು ದಿನಕ್ಕೆ ಬರೋಬ್ಬರಿ 292,000 ಯುಎಸ್ ಡಾಲರ್ ಅನ್ನು ನೀಡಬೇಕು ಅಂದರೆ, 2,17,34,450 ರೂಪಾಯಿಗಳು. ಇಷ್ಟು ಹಣವಿದ್ದರೆ, ನೀವು ಮನೆ ಖರೀದಿಸಲು ಬಯಸುತ್ತಿದ್ದಿರಿ ಅಲ್ವೇ..?

Related News

spot_img

Revenue Alerts

spot_img

News

spot_img