ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ನೆನ್ನೆ ಹಾಸನದ ಸಕಲೇಶಪುರ ಬಳಿ ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆಯಲ್ಲಿ ಮೃತಪಟ್ಟಿತ್ತು.ಇದು ಇಡೀ ರಾಜ್ಯಕ್ಕೆ ಬರ ಸಿಡಿಲು ಬಡೆದಂತೆ ಅಪ್ಪಳಿಸಿತ್ತು. ಹಲವಾರು ಒಂಟಿ ಸಲಗಗಳನ್ನು ಹಿಡಿಯುವಲ್ಲಿ ನಿಸ್ಸೀಮನಾಗಿದ್ದ ಅರ್ಜುನ ಈ ಬಾರಿ ಯಾಕೆ ಸಾವನ್ನಪ್ಪಿದ ಎಂಬುದು ಯಕ್ಷ ಪ್ರಶ್ನೆಯಾಗಿದೆ..
ಅರಣ್ಯ ಇಲಾಖೆ ಅಧಿಕಾರಿಗಳ ಉದ್ಧಟತನದಿಂದ ಅರ್ಜುನ ಸಾವಿಗೀಡಾದನೆ.?
5 ಸಾಕಾನೆಗಳೊಂದಿಗೆ ಮದಗಜವನ್ನ ಹಿಡಿಯಲು ಹೋಗಿದ್ದ ಅರಣ್ಯ ಇಲಾಖೆ ತಂಡ ಅರವಳಿಕೆ ಮದ್ದನ್ನ ಯಾವ ಆನೆಗೆ ನೀಡಬೇಕು ಎಂಬಷ್ಟು ಪರಿಜ್ಞಾನವಿಲ್ಲದೆ ವರ್ತಿಸಿದೆ. ಯಾಕೆಂದರೆ ಗುರಿ ತಪ್ಪಿ, ಸಾಕಾನೆ ಪ್ರಶಾಂತನಿಗೆ ಅರವಳಿಕೆ ಮದ್ದಿನ ಸೂಜಿ ಹೊಡೆದು ಅದಕ್ಕೆ ಘಾಸಿಯಾಗುವಂತಹ ಹೀನಾಯ ಕೃತ್ಯವನ್ನ ಅರಣ್ಯ ಇಲಾಖೆ ಮಾಡಿತ್ತು.ತದನಂತರ ಅದರಿಗೆ ಶುಶ್ರೂಷೆ ಮಾಡಿ ಅದನ್ನ ಎಚ್ಚರಗೊಳಿಸಲಾಗಿತ್ತು..ಈ ವಿಚಾರವನ್ನ ಖುದ್ದು ಸ್ಥಳೀಯರೇ ಬಾಯ್ಬಿಟ್ಟಿದ್ದಾರೆ.
ಸರಿಯಾದಂತಹ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳದೆ ಒಂಟಿ ಸಲಗಕ್ಕೆ ಹೊಡೆಯಬೇಕಾದ ಗುಂಡೇಟನ್ನು ಅಚಾನಕ್ಕಾಗಿ ಅರ್ಜುನನಿಗೆ ಹೊಡೆದ ಪರಿಣಾಮವಾಗಿ ನೆಲಕ್ಕುರುಳಿದ್ದಾನೆ.ಹೀಗಾಗಿ ಒಂಟಿ ಗಜ ತನ್ನ ಚೂಪಾದ ದಂತದಿಂದ ಸುಸ್ತಾಗಿದ್ದ, ಪ್ರಜ್ಞಾ ಹೀನವಾಗುತ್ತಿದ್ದ ಅರ್ಜುನನಿಗೆ ತಿವಿದು ಸಾಯಿಸಿದೆ, ಪರಿಣಾಮವಾಗಿ ಅರ್ಜುನ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ ಎನ್ನುವ ಹೇಳಿಕೆಗಳು ವೈರಲ್ ಆಗುತ್ತಿವೆ. ಇನ್ನು ಅರ್ಜುನನ್ನ ಕಳೆದುಕೊಂಡು ಮೌನ ಶೋಕದ ಸಾಗರದಲ್ಲಿ ಮುಳುಗಿರುವ ರಾಜ್ಯದ ಜನತೆ ಮುಂದೆ ಯಾವೆಲ್ಲಾ ಮಾಹಿತಿ ಹೊರಬೀಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ..
ಅಭಿಜಿತ್ ರೆವಿನ್ಯೂ, ಪ್ಯಾಕ್ಟ್ ನ್ಯೂಸ್