24.5 C
Bengaluru
Thursday, December 26, 2024

ಇ-ಪ್ಯಾನ್ ಕಾರ್ಡ್ ತಕ್ಷಣ ಪಡೆಯಲು ಹೀಗೆ ಮಾಡಿ..

ಪ್ಯಾನ್ ಕಾರ್ಡ್ ಇಂದು ಪ್ರಮುಖ ದಾಖಲೆಗಳಲ್ಲೊಂದು. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು, ಹೊಸ ಬ್ಯುಸಿನೆಸ್‌ ಆರಂಭಿಸುವುದು, ಆಸ್ತಿ ಖರೀದಿ ಮತ್ತು ಮಾರಾಟದವರೆಗೆ ಹೀಗೆ ಪ್ರತಿಯೊಂದು ಪ್ರಮುಖ ಹಣಕಾಸು ಚಟುವಟಿಕೆಗಳಿಗೆ ಈಗ ಪಾನ್‌ ಕಾರ್ಡ್‌(Pancard) ಅನಿವಾರ್ಯ. ಆಧಾರ್ ಸಂಖ್ಯೆ ಇದ್ದರೆ ಸಾಕು, ಇ-ಪ್ಯಾನ್ ಕಾರ್ಡ್ ಪಡೆಯೋದು ಬಲು ಸುಲಭ.ಪ್ಯಾನ್ ಕಾರ್ಡ್ ತಕ್ಷಣ ಪಡೆಯಲು ಹೀಗೆ ಮಾಡಿ. E-PAN ಅನ್ನು ಆನ್‌ಲೈನ್‌ನಲ್ಲಿ ತಕ್ಷಣವೇ ಡೌನ್‌ಲೋಡ್‌ ಮಾಡಬಹುದು. ಸುಲಭವಾಗಿ ಇ-ಪ್ಯಾನ್ ಪಡೆಯಲು ಆಧಾರ್ ಸಂಖ್ಯೆ ಮಾತ್ರ ಅಗತ್ಯವಿದೆ. ಆದಾಯ ತೆರಿಗೆ ಪೋರ್ಟಲ್ ಡಿಜಿಟಲ್ ಸಹಿ ಮಾಡಿದ ಇ-ಪ್ಯಾನ್ ಅನ್ನು ಉಚಿತವಾಗಿ ಪಡೆಯುವ ಸೌಲಭ್ಯವನ್ನು ಹೊಂದಿದೆ. ಅದಕ್ಕಾಗಿ, ಆದಾಯ ತೆರಿಗೆ ಇಲಾಖೆಯ(Incometax) ಇ-ಫೈಲಿಂಗ್ ಪೋರ್ಟಲ್ https://www .incometax.gov.in/iec/foportal/23e63 De ಮತ್ತು ಸೂಚನೆಗಳನ್ನು ಅನುಸರಿಸಿ, ನಿಮ್ಮ ಪ್ಯಾನ್ ಕಾರ್ಡ್(Pancard) ಪಡೆದುಕೊಳ್ಳಬಹುದು.ಇ-ಪ್ಯಾನ್ ಕಾರ್ಡ್ ಅನ್ನು ಪಿಡಿಎಫ್ ನಮೂನೆಯಲ್ಲಿ ಅರ್ಜಿದಾರರಿಗೆ ನೀಡಲಾಗುತ್ತದೆ. ಹಾಗೆಯೇ ಇದಕ್ಕೆ ಯಾವುದೇ ಶುಲ್ಕ ಕೂಡ ಪಾವತಿಸಬೇಕಾಗಿಲ್ಲ. ಇನ್ನು ಇ-ಪ್ಯಾನ್ ಡಿಜಿಟಲ್(Digital) ಸಹಿ ಹೊಂದಿರುವ ಪ್ಯಾನ್ ಕಾರ್ಡ್ ಆಗಿದ್ದು, ಆಧಾರ್ ಕಾರ್ಡ್ ಇ-ಕೆವೈಸಿ ಮಾಹಿತಿಗಳನ್ನು ಆಧರಿಸಿ .https://www.onlineservices.nsdl.com/paam/requestAndDownloadEPAN.html)ಗೆ ಹೋಗಿ ಲಾಗಿನ್ ಆಗಬೇಕು. ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಬೇಕು. ಇದಕ್ಕೆ ಪ್ರತ್ಯೇಕವಾಗಿ ದಾಖಲೆಗಳು ಬೇಕಾಗುವುದಿಲ್ಲ.

Related News

spot_img

Revenue Alerts

spot_img

News

spot_img