#DLF, #MS Bengaluru divinity LLP, #landscam, #UnderValuation,
ಬೆಂಗಳೂರು, ಮಾ. 13: ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ 75.9 ಎಕರೆ ಭೂಮಿ ಆಸ್ತಿಯ ಮೌಲ್ಯ ನಿರ್ಧರಿಸುವಲ್ಲಿ ಅಕ್ರಮ ಎಸಗಿರುವ ಜಯನಗರ ಜಿಲ್ಲಾ ನೋಂದಣಾಧಿಕಾರಿ ಎನ್. ಭಾರತಿ ಸರ್ಕಾರದ ಬೊಕ್ಕಸಕ್ಕೆ 6.63, 33, 080 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ.
1982 ರಲ್ಲಿಯೇ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಅಗಿರುವ 75.9 ಎಕರೆ ಭೂಮಿಯ ಮೌಲ್ಯ ನಿಗದಿ ಮಾಡುವಲ್ಲಿ ಭಾರೀ ಅಕ್ರಮ ಎಸಗಿದ್ದು, ದೆಹಲಿ ಮೂಲದ ಡಿಎಲ್‌ಎಫ್ ಕಂಪನಿ ಹಾಗೂ ಹೈದರಾಬಾದ್ ಮೂಲದ MS.Bengaluru divinity llP ಕಂಪನಿಗೆ ಲಾಭ ಮಾಡಿಕೊಟ್ಟಿದ್ದಾರೆ. ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಪ್ರಕರಣದಲ್ಲಿ ಭಾರೀ ಪ್ರಮಾಣದ ಕಿಕ್ ಬ್ಯಾಕ್ ಪಡೆದಿರುವ ಸಂಶಯ ವ್ಯಕ್ತವಾಗಿದೆ. ಆರು ಪ್ರತ್ಯೇಕ ಆಸ್ತಿ ವಹಿವಾಟಿನಲ್ಲಿ 6.63 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳದೇ ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಸಂಬಂಧ ಸಮಗ್ರ ದಾಖಲೆಗಳು Revenuefacts.com ಗೆ ಲಭ್ಯವಾಗಿವೆ.
DLF owned 73 Acre land Deal:
ದೆಹಲಿಯ ಪ್ರತಿಷ್ಠಿತ ವ್ಯಕ್ತಿಗಳಿಗೆ ಸೇರಿದ ಡಿಎಲ್‌ಎಫ್ ಕಂಪನಿಗೆ ಸೇರಿದ 300 ಕ್ಕೂ ಹೆಚ್ಚು ಎಕರೆ ಭೂಮಿ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಗಂಗೇನಹಳ್ಳಿ ಗ್ರಾಮದಲ್ಲಿದೆ. ಅದರಲ್ಲಿ 1982 ರಲ್ಲಿಯೇ ವಸತಿ ಉದ್ದೇಶಕ್ಕೆ ಪರಿವರ್ತನೆ ಅಗಿರುವ 73 ಎಕರೆ ಭೂಮಿಯನ್ನು ಡಿಎಲ್‌ಎಫ್ ಕಂಪನಿ ಹೈದರಾಬಾದ್ ಮೂಲದ ಮೆ. ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿ ಕಂಪನಿಗೆ ಮಾರಾಟ ಮಾಡಿದೆ. ಈ 73 ಎಕರೆ ಅಸ್ತಿಯ ನೋಂದಣಿ ಪ್ರಕ್ರಿಯೆಯಲ್ಲಿ ಅಸ್ತಿಯ ಮೌಲ್ಯವನ್ನು ಕಾನೂನು ಬಾಹಿರವಾಗಿ ಅಪಮೌಲ್ಯಗೊಳಸಿರುವ ಜಿಲ್ಲಾ ನೋಂದಣಾಧಿಕಾರಿ ಭಾರತಿ ಅವರು ಕಂದಾಯ ಇಲಾಖೆಗೆ ಭಾರೀ ಪ್ರಮಾಣದಲ್ಲಿ ನಷ್ಟವುಂಟು ಮಾಡಿದ್ದಾರೆ.
Land Value Under Valuation scam:ಆಸ್ತಿಯ ಅಪಮೌಲ್ಯ:
ಆಸ್ತಿಯ ಅಪಮೌಲ್ಯ ಕಾನೂನು ಬಾಹಿರ ಎಂಬುದು ಕಂದಾಯ ಇಲಾಖೆಯ ಧ್ಯೇಯ ವಾಖ್ಯೆ. ಆದ್ರೆ, ಜಿಲ್ಲಾ ನೋಂದಣಾಧಿಕಾರಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಲವತ್ತು ವರ್ಷದ ಹಿಂದೆಯೇ ಕೃಷಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಆಗಿರುವ ಜಮೀನಿನ ಮೌಲ್ಯ ನಿಗದಿ ಮಾಡುವಲ್ಲಿ ದೊಡ್ಡ ಅಕ್ರಮ ಎಸಗಿರುವುದು ದಾಖಲೆಗಳಿಂದ ಕಂಡು ಬಂದಿದೆ.
ಕರ್ನಾಟಕ ಮುದ್ರಾಂಕ ಕಾಯ್ದೆ ಕಲಂ 2 mm ಮಾರುಕಟ್ಟೆ ಬೆಲೆ ಬಗ್ಗೆ ವ್ಯಾಖ್ಯಾನಿಸಲಾಗಿದೆ. ಸ್ವತ್ತಿನ ಮಾರುಕಟ್ಟೆ ಬೆಲೆ ಎಂದರೆ ಯಾವುದೇ ಆಸ್ತಿಯು ಇಬ್ಬರು ವ್ಯಕ್ತಿಗಳು ಕೊಡುವರು ತೆಗೆದುಕೊಳ್ಳುವರು ಕುಳಿತು ಮಾತನಾಡಿ ತೀರ್ಮಾನಿಸಿರುವ ಬೆಲೆ ಅಥವಾ ಉಪ ನೋಂದಣಾಧಿಕಾರಿಗಳ ಬೆಲೆ ಕಮಿಟಿ ನಿಗದಿ ಪಡಿಸಿರುವ ಬೆಲೆಯಲ್ಲಿ ಯಾವುದು ಹೆಚ್ಚು ,ಅದಕ್ಕೆ ಸರ್ಕಾರ ನಿಗದಿ ಪಡಿಸಿರುವ ಮುದ್ರಾಂಕ ಶುಲ್ಕ ಶೇ. 5.65 ಮತ್ತು ನೋಂದಣಿ ಶುಲ್ಕ ಶೇ. 1 ರಷ್ಟು ಪಾವತಿಸಿ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ನಿಯಮ ಹೇಳುತ್ತದೆ.
ಒಂದು ವೇಳೆ ಪಾರ್ಟಿಗಳು ತಮ್ಮ ನಿಜವಾದ ಬೆಲೆಯನ್ನು ಹೇಳದೇ ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ದರ ಕಟ್ಟಿ ಗಿಂತ ಕಡಿಮೆ ಬರೆದುಕೊಂಡರೆ, ಅಂತಹ ಕ್ರಯ ಪತ್ರವನ್ನು ನೋಂದಣಿಯಿಂದ ಅಮಾನತು ಪಡಿಸಿ ಉಪ ನೋಂದಣಾಧಿಕಾರಿಗಳು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸರಿಯಾದ ಬೆಲೆ ನಿಗದಿ ಪಡಿಸಲು ಕರ್ನಾಟಕ ಮುದ್ರಾಂಕ ಕಾಯ್ದೆ ಕಲಂ 45 ಎ) ಅಡಿ ಪ್ರಸ್ತಾವನೆ ಸಲ್ಲಿಸಬಹುದು. ತದನಂತರ ಜಿಲ್ಲಾ ನೋಂದಣಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿ ಪಾರ್ಟಿಗಳಿಂದ ಲಿಖಿತ ಹೇಳಿಕೆ ಪಡೆದು ಸ್ಥಳ ತನಿಖೆಗೆ ಸಮಯ ನಿಗದಿ ಪಡಿಸಿ ಪರಿಶೀಲಿಸಬೇಕು. ಸ್ಥಳ ತನಿಖೆ ಮಾಡುವಾಗ ಅಕ್ಕ ಪಕ್ಕದ ದರ ಮತ್ತು ಭೂ ಪ್ರದೇಶದ ಅಂಶಗಳನ್ನು ಪರಿಗಣಿಸಿ ಸರ್ಕಾರದ ಮಾರ್ಗಸೂಚಿ ಅನ್ವಯ ಆಸ್ತಿಯ ಮೌಲ್ಯವನ್ನು ನಿಗದಿ ಪಡಿಸಬೇಕು.
ಗಂಗೇನಹಳ್ಳಿ ಗ್ರಾಮದ ಸುತ್ತ ಮುತ್ತ ಇ ಖಾತಾ ಹೊಂದಿಲ್ಲದ ರೆವಿನ್ಯೂ ನಿವೇಶನ ಚದರಡಿ ರೂ. 2600 ಗೆ ಮಾರಾಟ ಅಗುತ್ತಿದೆ. ಇನ್ನು ಭೂ ಪರಿವರ್ತನೆ ಅಗಿರುವ ನಿವೇಶನ ಅಗಿದ್ದರೆ ಚದರಡಿ 4000 ಸಾವಿರ ರೂ.ಗೆ ಮಾರಾಟ ಅಗುತ್ತಿದೆ. ಮಾತ್ರವಲ್ಲ, ಇದೇ ಡಿಎಲ್‌ಎಫ್ ಸಂಸ್ಥೆಗೆ ಸೇರಿದ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡಿ ಚದರಡಿ 3000 ರೂ. ನಂತೆ ನೂರಾರು ನಿವೇಶನ ಮಾರಾಟ ಮಾಡಲಾಗಿದೆ. ಆದರೆ, ಜಿಲ್ಲಾ ನೋಂದಣಾಧಿಕಾರಿಗಳು ಡಿಎಲ್‌ಎಫ್ ಗೆ ಸೇರಿದ 73 ಎಕರೆ ಅಸ್ತಿಯ ಮಾರಾಟ ಪ್ರಕ್ರಿಯೆಯಲ್ಲಿ ಚದರಡಿಗೆ 114 ರೂ. ನಿಗದಿ ಪಡಿಸಿಇದಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ 6.65 ಸಂಗ್ರಹ ಮಾಡಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡಿದ್ದಾರೆ. ಬಿಲ್ಡರ್ ಕಂಪನಿಗಳಿಗೆ 6.33 ಕೋಟಿ ರೂ. ಲಾಭ ಮಾಡಿಕೊಟ್ಟಿದ್ದು, ದೊಡ್ಡ ಪ್ರಮಾಣದಲ್ಲಿ ಕಿಕ್ ಬ್ಯಾಕ್ ಪಡೆದಿರುವ ಅನುಮಾನ ಹುಟ್ಟುಹಾಕಿದೆ. ಜಿಲ್ಲಾ ನೋಂದಣಾಧಿಕಾರಿಗಳಿಗೆ ನೀಡಿರುವ ಅರೆ ನ್ಯಾಯಿಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು 6 ಲ್ಯಾಂಡ್ ಡೀಲ್ ಪ್ರಕರಣಗಳಲ್ಲಿ ಅಸ್ತಿಯ ಮೌಲ್ಯ ನಿಗದಿ ಮಾಡುವಲ್ಲಿ ಎಡವಟ್ಟು ಮಾಡಿ ಸರ್ಕಾರಕ್ಕೆ ವಂಚಿಸಿರುವುದು ಕಂಡು ಬಂದಿದೆ. ಅಚ್ಚರಿ ಏನೆಂದರೆ 2022 ಮಾರ್ಚ್ ನಲ್ಲಿ ಪ್ರಕರಣಗಳ ಮೌಲ್ಯ ನಿರ್ಣಯಿಸಿದ್ದು, ಹಲವಾರು ಪ್ರಕರಣಗಳಲ್ಲಿ ಇದೇ ರೀತಿ ಮಾಡಿರುವ ಅರೋಪ ಕೇಳಿ ಬಂದಿದೆ. ಈ ಆರು ಪ್ರಕರಣಗಳ ಸಮಗ್ರ ವಿವರ ಇಲ್ಲಿದೆ.
ಪ್ರಕರಣ 1:
ಡಾಕುಮೆಂಟ್ ನಂಬರ್ 1651/2022-23:
ಸ್ಥಳ: ಗಂಗೇನಹಳ್ಳಿ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು.
ಇ ಖಾತಾ ನಂಬರ್ : 150200300801600198
ಸರ್ವೆ ನಂಬರ್: 72, 78, 79, 81, 83/1
ಒಟ್ಟು ಭೂಮಿ: 18.12 ಎಕರೆ/ ಗುಂಟೆ
ಅಪ ಮೌಲ್ಯಗೊಳಸಿದ ಅಸ್ತಿ: 18.12 ಎಕರೆ/ ಗುಂಟೆ.
ಸರ್ಕಾರದ ಮಾರ್ಗಸೂಚಿ ಬೆಲೆ ಕೃಷಿ ಭೂಮಿ ಎಕರೆಗೆ 40 ಲಕ್ಷ ರೂ.
ವಾಸಯೋಗ್ಯ ಭೂ ಪರಿವರ್ತನೆ ಅಗಿದ್ದಲ್ಲಿ ಎಕರೆಗೆ 66 ಲಕ್ಷ ರೂ. ( ಅಭಿವೃದ್ಧಿಯಾಗದ ಭೂ ಪರಿವರ್ತಿತ ಭೂಮಿಗೆ)
ಭೂ ಪರಿವರ್ತನೆ ಆಗಿ, ನಿವೇಶನ ಮಾಡಿದಲ್ಲಿ ಪ್ರತಿ ಚದರ ಮೀಟರ್ ಗೆ ಸರ್ಕಾರದ ಮಾರ್ಗಸೂಚಿ ಬೆಲೆ 4500 ರೂ. ಆಗಿರುತ್ತದೆ.
ವಿವರ:
ಮೇಲಿನ ದಾಖಲೆಯಲ್ಲಿ ಒಟ್ಟು 18.12 ಎಕರೆ/ ಗುಂಟೆ ವಿಸ್ತಿರ್ಣವುಳ್ಳ ಭೂ ಪರಿವರ್ತಿತ, ಗ್ರಾಮ ಪಂಚಾಯಿತಿಯಲ್ಲಿ ಇ ಖಾತಾ ಹೊಂದಿರುವ ಭೂಮಿಯಾಗಿದ್ದು, ಈ ಜಮೀನಿಗೆ ರೂ. 9, 05,85,000 ರೂ. ಎಂದು ಬೆಲೆ ನಿಗದಿ ಪಡಿಸಿದ್ದು, ಇದರ ಪ್ರಕಾರ ಎಕರೆಗೆ ರೂ. 49. 5 ಲಕ್ಷ ರೂ. ಜಿಲ್ಲಾ ನೋಂದಣಾಧಿಕಾರಿಗಳು ನಿಗದಿ ಪಡಿಸಿದ್ದಾರೆ. ಇದೇ ಜಮೀನಿಗೆ ವಾಸಕ್ಕೆ ಭೂ ಪರಿವರ್ತನೆ ಅಗಿದ್ದಲ್ಲಿ ಶೇ. 65 ರಷ್ಟು ಹೆಚ್ಚಿಸಿ ಅಂದರೆ ಎಕರೆಗೆ 66 ಲಕ್ಷ ರೂ. ಅಗುತ್ತದೆ ( ಅಭಿವೃದ್ಧಿಯಾಗದ ಪರಿವರ್ತಿತ ಭೂಮಿಗೆ) ಇದರ ಪ್ರಕಾರ ಈ ಆಸ್ತಿಯ ಮೌಲ್ಯ 12, 07, 80,000 ರೂ. ಆಗುತ್ತದೆ. ಈ ಆಸ್ತಿ 40 ವರ್ಷಗಳ ಹಿಂದೆಯೇ ಭೂ ಪರಿವರ್ತನೆ ಅಗಿರುವುದರಿಂದ, ಸರ್ಕಾರದ ಮಾರ್ಗಸೂಚಿ ಬೆಲೆ ಚದರ ಮೀಟರ್ ಗೆ 4500 ರೂ. ನಂತೆ ರೂ. 33, 32, 55, 850 (33 ಕೋಟಿ ರೂ. ) ನಿಗದಿ ಮಾಡಬೇಕಿತ್ತು.
ಇದರಲ್ಲಿ ಯಾವುದು ಹೆಚ್ಚು ಇರುತ್ತದೆಯೋ ಅದನ್ನು ಪರಿಗಣಿಸಿ ಅದಕ್ಕೆ ಶೇ. 5.65 ಮುದ್ರಾಂಕ ಶುಲ್ಕ ಮತ್ತು ಶೇ. 1 ರಷ್ಟು ನೋಂದಣಿ ಶುಲ್ಕವನ್ನು ಸಂಗ್ರಹ ಮಾಡಬೇಕಿತ್ತು. ಅದರೆ, ಜಿಲ್ಲಾ ನೋಂದಣಾಧಿಕಾರಿ ಎ. ಎನ್. ಭಾರತಿ ಅವರು 18.12 ಎಕರೆ/ ಗುಂಟೆ ಜಮೀನಿಗೆ ಒಟ್ಟು 9,05,85,000 ನಿಗದಿ ಮಾಡಿದ್ದು, 24, 26, 70, 850 ರೂ. (24 ಕೋಟಿ ರೂ.) ಮೊತ್ತಕ್ಕೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಸಂಗ್ರಹಿಸದೇ ಸರ್ಕಾರಕ್ಕೆ ಈ ಒಂದು ಪ್ರಕರಣದಲ್ಲಿ ರೂ. 1.61, 37,620 ( 1.61 ಕೋಟಿ ರೂ. ) ನಷ್ಟವುಂಟು ಮಾಡಿದ್ದಾರೆ.
ಇದೇ ಡಿಎಲ್‌ಎಫ್ ನವರು ಭೂ ಪರಿವರ್ತನೆ ಮಾಡಿ ಲೇಔಟ್ ನಿರ್ಮಾಣ ಮಾಡಿ ನಿವೇಶನ ಮಾರಾಟ ಮಾಡಿದ್ದು, ಚದರಡಿ 3000 ರೂ.ನಂತೆ ಮಾರಾಟ ಮಾಡಿದ್ದಾರೆ. ಇದರ ದಾಖಲೆಗಳನ್ನು ಪರಿಗಣಿಸದೇ ಭಾರತಿ ಅವರು ರಾಮ- ಕೃಷ್ಣನ ಲೆಕ್ಕ ತೋರಿಸಿ ಕೇವಲ ಚದರಡಿಗೆ ಸರಾಸರಿ 114 ರೂ. ನಿಗದಿ ಮಾಡಿ ಅದಕ್ಕಷ್ಟೇ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಸಂಗ್ರಹಿಸಿ ಕಂದಾಯ ಇಲಾಖೆಗೆ ಮೋಸ ಮಾಡಿದ್ದಾರೆ.
ಪ್ರಕರಣ 2:
ದಾಖಲೆ ನಂಬರ್ 1584/2022-23
ಸ್ಥಳ: ಗಂಗೇನಹಳ್ಳಿ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು.
ಇ ಖಾತಾ ನಂಬರ್: 150200300801600196
ಸರ್ವೆ ನಂಬರ್: 87/4, 109/3, 91, 76, 78, 90,
ಒಟ್ಟು ಭೂಮಿ: 17 ಎಕರೆ 26 ಗುಂಟೆ.
ಜಿಲ್ಲಾ ನೋಂದಣಾಧಿಕಾರಿ ಶ್ರೀ ಮತಿ ಭಾರತಿ ಇವರು ತೀರ್ಮಾನಿಸಿರುವ ಮಾರುಕಟ್ಟೆ ಮೌಲ್ಯ: ರೂ. 8,73,67,500 ರೂ.
ಅಭಿವೃದ್ಧಿ ಹೊಂದದ ವಾಸಕ್ಕೆ ಭೂ ಪರಿವರ್ತಿತ ಜಮೀನಿನ ಸರ್ಕಾರಿ ಮಾರ್ಗಸೂಚಿ ಬೆಲೆ : ಎಕೆರೆಗೆ 66 ಲಕ್ಷ ರೂ. ನಂತೆ,
11, 64,90,000 ಕೋಟಿ ರೂ. ಆಗುತ್ತದೆ.
ಇದು ಇ ಖಾತಾ ಅಗಿರುವುದರಿಂದ ಚದರ ಮೀಟರ್ ಗೆ ರೂ. 4500 ರೂ. ನಂತೆ ಒಟ್ಟು 32, 14, 18, 500 ಕೋಟಿ ರೂ. ಆಗಬೇಕಿರುತ್ತದೆ.
ಜಿಲ್ಲಾ ನೋಂದಣಾಧಿಕಾರಿಯವರು ಮಾಡಿರುವ ನಷ್ಟ : 23,40, 51, 000 ಕೋಟಿ ರೂ.ಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಡದೇ ಬಿಟ್ಟಿರುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು 1,55,64,400 ರೂ. (1.55 ಕೋಟಿ ರೂ. ) ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ನಷ್ಟವುಂಟು ಮಾಡಲಾಗಿದೆ.
ಪ್ರಕರಣ- 03
ದಾಖಲೆ ನಂಬರ್ : 1579/2022-23
ಸ್ಥಳ: ಗಂಗೇನಹಳ್ಳಿ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು
ಇ ಖಾತಾ ನಂಬರ್ : 150200300801600195
ಸರ್ವೆ ನಂಬರ್: `13/2, 19, 20, 29, 30, 50,
ಒಟ್ಟು ಭೂಮಿ 18 ಎಕರೆ 20 ಗುಂಟೆ.
ಈ ಪ್ರಕರಣದಲ್ಲಿ ಜಿಲ್ಲಾ ನೋಂದಣಾಧಿಕಾರಿ ಎ. ಎನ್. ಭಾರತಿ ಅವರು ಒಟ್ಟು ಭೂಮಿ 18 ಎಕರೆ 20 ಗುಂಟೆ ಜಮೀನಿಗೆ ತೀರ್ಮಾನಿಸಿರುವ ಮಾರುಕಟ್ಟೆ ಮೌಲ್ಯ: ರೂ. 9,15,75,000 ರೂ. ಅಗಿರುತ್ತದೆ. ಅಭಿವೃದ್ಧಿ ಹೊಂದದ ವಾಸಕ್ಕೆ ಭೂ ಪರಿವರ್ತಿತ ಜಮೀನಿನ ಸರ್ಕಾರಿ ಮಾರ್ಗಸೂಚಿ ಬೆಲೆ ಎಕೆರೆಗೆ 66 ಲಕ್ಷ ರೂ. ನಂತೆ, 12, 21,00,000 ಕೋಟಿ ರೂ. ಆಗಲಿದೆ. ಇದು ಇ ಖಾತಾ ಅಗಿರುವುದರಿಂದ ಚದರ ಮೀಟರ್ ಗೆ ರೂ. 4500 ರೂ. ನಂತೆ ಒಟ್ಟು ರೂ. 33, 68, 97 000 (33 ಕೋಟಿ) ರೂ. ನಿಗದಿ ಪಡಿಸಬೇಕಿತ್ತು. ಜಿಲ್ಲಾ ನೋಂದಣಾಧಿಕಾರಿ ಅವರು, ಕಡಿಮೆ ಬೆಲೆ ನಿಗದಿ ಮಾಡಿ ರೂ. 24,53, 22, 000 ಕೋಟಿ ರೂ.ಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಡದೇ ಅಕ್ರಮ ಎಸಗಿರುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟುರೂ. 1,63,13, 920 .(1.63 ಕೋಟಿ ರೂ.) ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ನಷ್ಟವುಂಟು ಮಾಡಿರುತ್ತಾರೆ.
ಪ್ರಕರಣ – 04:
ದಾಖಲೆ ನಂಬರ್ 1696/2022-23
ಸ್ಥಳ: ಗಂಗೇನಹಳ್ಳಿ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು
ಇ ಖಾತಾ ನಂಬರ್ : 150200300801600207
ಸರ್ವೆ ನಂಬರ್: 04,
ಒಟ್ಟು ಭೂಮ: 06ಎಕರೆ 15 ಗುಂಟೆ
ಈ ಪ್ರಕರಣದಲ್ಲಿ ಜಿಲ್ಲಾ ನೋಂದಣಾಧಿಕಾರಿ ಎ. ಎನ್. ಭಾರತಿ ಅವರು ತೀರ್ಮಾನಿಸಿರುವ ಮಾರುಕಟ್ಟೆ ಮೌಲ್ಯ ಕೇವಲ ರೂ. 3,15,56,250 ಅಗಿರುತ್ತದೆ.
ಅಭಿವೃದ್ಧಿ ಹೊಂದದ ವಾಸಕ್ಕೆ ಭೂ ಪರಿವರ್ತಿತ ಜಮೀನಿನ ಸರ್ಕಾರಿ ಮಾರ್ಗಸೂಚಿ ಬೆಲೆ ಎಕೆರೆಗೆ 66 ಲಕ್ಷ ರೂ. ನಂತೆ ಪರಿಗಣಿಸಿದಲ್ಲಿ, 04, 20,75,000 ಕೋಟಿ ರೂ. ಆಗುತ್ತದೆ. ಇದು ಇ ಖಾತಾ ಅಗಿರುವುದರಿಂದ ಚದರ ಮೀಟರ್ ಗೆ ರೂ. 4500 ರೂ. ನಂತೆ ಒಟ್ಟು 11, 60, 93, 225 ಕೋಟಿ ರೂ. ನಿಗದಿ ಮಾಡಬೇಕಿತ್ತು. ಕಡಿಮೆ ಮೌಲ್ಯ ನಿಗದಿ ಮಾಡಿದ್ದು, 8,45, 36, 975 ಕೋಟಿ ರೂ.ಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಡದೇ ಬಿಟ್ಟಿರುತ್ತಾರೆ.
ಇದರಿಂದ ಕಂದಾಯ ಇಲಾಖೆಗೆ ರೂ. 56, 21,708 ರೂ. ನಷ್ಟಆಗಿದೆ.
ಪ್ರಕರಣ -05
ದಾಖಲೆ ನಂಬರ್ : 1619/2022-23
ಸ್ಥಳ: ಗಂಗೇನಹಳ್ಳಿ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು
ಇ ಖಾತಾ ನಂಬರ್ : 150200300801600197
ಸರ್ವೆ ನಂಬರ್: 61, 60, 62, 22, 23,
ಒಟ್ಟು ಭೂಮಿ 10 ಎಕರೆ 07 ಗುಂಟೆ.
ಜಿಲ್ಲಾ ನೋಂದಣಾಧಿಕಾರಿ ಭಾರತಿ ತೀರ್ಮಾನಿಸಿರುವ ಮಾರುಕಟ್ಟೆ ಮೌಲ್ಯ: ರೂ. 5,03,66,250 ರೂ. ಆಗಿರುತ್ತದೆ. ಅಭಿವೃದ್ಧಿ ಹೊಂದದ ವಾಸಕ್ಕೆ ಭೂ ಪರಿವರ್ತಿತ ಜಮೀನಿನ ಸರ್ಕಾರಿ ಮಾರ್ಗಸೂಚಿ ಬೆಲೆ ಎಕೆರೆಗೆ 66 ಲಕ್ಷ ರೂ. ಅಂತ ಪರಿಗಣಿಸಿದರೂ ಈ ಆಸ್ತಿಯ ಮೌಲ್ಯ 06, 71,55,000 ಕೋಟಿ ರೂ. ಆಗುತ್ತದೆ. ಇದು ಇ- ಖಾತಾ ಅಗಿರುವುದರಿಂದ ಚದರ ಮೀಟರ್ ಗೆ ರೂ. 4500 ರೂ. ನಂತೆ ಒಟ್ಟು 18, 52, 93,500 ಕೋಟಿ ರೂ. ನಿಗದಿ ಮಾಡಬೇಕಿತ್ತು. ಅದರೆ ಕಡಿಮೆ ಬೆಲೆ ನಿಗದಿ ಮಾಡಿ ಜಿಲ್ಲಾ ನೋಂದಣಾಧಿಕಾರಿ ರೂ. 13,49, 27, 250 ಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಡದೇ ಬಿಟ್ಟಿರುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು ರೂ. 89,72, 602 ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ನಷ್ಟವುಂಟು ಆಗಿರುವುದು ದಾಖಲೆಗಳಿಂದ ಕಂಡು ಬಂದಿದೆ.
ಪ್ರಕರಣ- 06
ದಾಖಲೆ ನಂಬರ್ 1694/2022-23
ಸ್ಥಳ: ಗಂಗೇನಹಳ್ಳಿಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು.
ಇ ಖಾತಾ ನಂಬರ್ 150200300801600194
ಸರ್ವೆ ನಂಬರ್. 72, 76,
ಒಟ್ಟು ಭೂಮಿ: 04 ಎಕರೆ 09 ಗುಂಟೆ.
ವಿವರ: ಜಿಲ್ಲಾ ನೋಂದಣಾಧಿಕಾರಿ ಭಾರತಿ ತೀರ್ಮಾನಿಸಿರುವ ಮಾರುಕಟ್ಟೆಮೌಲ್ಯ ಕೇವಲ ರೂ. 2,09,13 750 ಆಗಿರುತ್ತದೆ. ಅಭಿವೃದ್ಧಿ ಹೊಂದದ ವಾಸಕ್ಕೆ ಭೂ ಪರಿವರ್ತಿತ ಜಮೀನಿನ ಸರ್ಕಾರಿ ಮಾರ್ಗಸೂಚಿ ಬೆಲೆ ಎಕೆರೆಗೆ 66 ಲಕ್ಷ ರೂ. ನಂತೆ, 27, 88,5,000 ಕೋಟಿ ರೂ. ಈ ಆಸ್ತಿಯ ಮೌಲ್ಯ ಆಗುತ್ತದೆ. ಇದು ನಾಲ್ಕು ದಶಕದ ಹಿಂದೆಯೇ ಭೂ ಪರಿವರ್ತನೆ ಆಗಿದ್ದು, ಇ ಖಾತಾ ಹೊಂದಿದ್ದು, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಚದರ ಮೀಟರ್ ಭೂಮಿಗೆ ರೂ. 4500 ರೂ. ನಂತೆ ಒಟ್ಟು 7,69, 68,820 ಕೋಟಿ ರೂ. ನಿಗದಿ ಪಡಿಸಬೇಕಿತ್ತು. ಇದಕ್ಕೆ ಶೇ. 6.65 ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳಬೇಕಿತ್ತು. ಆದರೆ ಜಿಲ್ಲಾ ನೋಂದಣಾಧಿಕಾರಿಯವರು ಮೇಲೆ ಉಲ್ಲೇಖಿಸಿದ ಮೊತ್ತಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಂಡು 5,60, 55,070 ರೂ.ಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಡದೇ ಬಿಟ್ಟಿರುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು 37, 27, 670 ರೂ. ನಷ್ಟ ಆಗಿದೆ.
ಜಯನಗರ ಜಿಲ್ಲಾ ನೋಂದಣಾಧಿಕಾರಿ ಭಾರತಿ ಎ.ಎನ್. ಬೆಂಗಳೂರಿನ ಹೃದಯ ಭಾಗದಲ್ಲಿ ಅಪಾರ್ಟ್ ಮೆಂಟ್ ಕಟ್ಟಿರುವ ಜಾಗಗಳಿಗೂ ಬಿಲ್ಡರ್ ಗಳ ಜತೆ ಶಾಮೀಲಾಗಿ ಅಸ್ತಿಯ ಮೌಲ್ಯ ಅಪಮೌಲ್ಯಗೊಳಿಸಿ ಸರ್ಕಾರಕ್ಕೆ ದೊಡ್ಡ ಮೊತ್ತವನ್ನು ನಷ್ಟವುಂಟು ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಭಾರತಿ ಅವರು ಅಸ್ತಿಯ ಮೌಲ್ಯ ನಿರ್ಣಯ ಪ್ರಕರಣಗಳ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ರೆವಿನ್ಯೂಫ್ಯಾಕ್ಟ್ ಕೇಳಿದರೂ ಈವರೆಗೂ ಕೊಟ್ಟಿಲ್ಲ ಎಂಬುದು ಗಮನಾರ್ಹ.
ಪ್ರತಿಕ್ರಿಯೆ:
ದೊಡ್ಡ ಆಸ್ತಿಯ ಮೌಲ್ಯ ನಿಗದಿ ಮಾಡುವಾಗ ಡಿಅರ್ ಗೆ ಕೊಟ್ಟಿರುವ ಅಧಿಕಾರ ಬಳಿಸಿ ನಾನು ಮಾಡಿದ್ದೇನೆ. ಡಿಎಲ್‌ಎಫ್ ಆಸ್ತಿ ಸದ್ಯ ಇನ್ನೂ ಲೇಔಟ್ ಅಗಿಲ್ಲ. ಲೇಔಟ್ ಅಪ್ರೂವಲ್ ಸಹ ತಗೊಂಡಿಲ್ಲ. ನನ್ನ ಅಧಿಕಾರ ಬಳಿಸಿ ನಾನು ಆಸ್ತಿಯ ಮೌಲ್ಯ ನಿರ್ಧರಿಸಿದ್ದೇನೆ ಎಂದು ಎ.ಎನ್. ಭಾರತಿ ಅವರು ರೆವಿನ್ಯೂ ಫ್ಯಾಕ್ಟ್ಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.