23.2 C
Bengaluru
Thursday, January 23, 2025

ಡಿ.ಕೆ ರವಿ ಸಾವಿನ ರಹಸ್ಯ: ಆ ಕೊನೆಯ ಮೇಸೆಜ್ ನಲ್ಲಿ ಏನಿತ್ತು ? ಸಿಬಿಐ ವರದಿಯಿಂದ ಸ್ಫೋಟಕ ಸತ್ಯ ಬಯಲು:

ಬೆಂಗಳೂರು: ಫೆ-22;ಕರ್ನಾಟಕದಲ್ಲಿ ಜನ ಜನಿತವಾಗಿದ್ದ ಡೊಡ್ಡ ಕೋಪಲು ಕರಿಯಪ್ಪ ರವಿ ಅಥವಾ ಡಿ.ಕೆ ರವಿ ರವರು ಮಾರ್ಚ್ 16, 2015 ರಲ್ಲಿ ಕೋರಮಂಗಲದ ತಮ್ಮ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನಪ್ಪಿದ್ದರು. ಈ ಸಾವು 2015 ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ರವರ ಸರ್ಕಾರವನೇ ಅಲುಗಾಡಿಸಿ ಬಿಟ್ಟಿತ್ತು. ತೆರಿಗೆ ಅಧಿಕಾರಿಯಾಗಿದ್ದ ಡಿಕೆ ರವಿ.ಐಎಎಸ್ ರವರು ಅನುಮಾನಸ್ಪದ ರೀತಿಯಲ್ಲಿ ಮೃತ ಪಟ್ಟಿದ್ದರು. ಈ ಸಾವಿನ ವಿರುದ್ದ ಕೋಲಾರ ಜನತೆಯಲ್ಲಿ ಶುರುವಾದ ಹೋರಾಟದ ಕಿಡಿ ಕ್ರಮೇಣ ಇಡೀ ರಾಜ್ಯವನ್ನೆ ಅವರಿಸಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಪ್ರಭಾವಿ ಮಂತ್ರಿಯೊಬ್ಬರಿಗೆ ಸಂಬಂಧಿಸಿದ ಕಟ್ಟಡಗಳ ಮೇಲೆ ಐಟಿ ದಾಳಿ ಮಾಡಿ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ಅನುಮಾನ ಹುಟ್ಟಿಸಿತ್ತು.

ಈ ಸಾವಿನ ಬಗ್ಗೆ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದರೂ ಕೂಡ ಇದಕ್ಕೆ ಒಪ್ಪದ ಜನ ಹಾಗೂ ಪ್ರತಿ ಪಕ್ಷಗಳು ಸಿಬಿಐ ತನಿಖೆಗೆ ಒತ್ತಾಯಿಸಿದ್ದರಿಂದ ಸಿಬಿಐ ಗೆ ಪ್ರಕರಣವನ್ನು ವರ್ಗಾವಣೆ ಮಾಡಿ ತನಿಖೆ ನಡೆಸಲಾಗಿತ್ತು. ನ್ಯಾಯಾಲಯದ ಆದೇಶದಿಂದಾಗಿ ಸಿಬಿಐ ತನಿಖೆ ಮುಗಿದ ಮೇಲೆ ಡಿಕೆ ರವಿ ರವರು ವೈಯಕ್ತಿಕ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮಾತ್ರವೇ ಜನಕ್ಕೆ ತಿಳಿಸಲಾಗಿತ್ತು.
ರಿಪೋರ್ಟ್ ನ ಮುಖ್ಯಾಂಶಗಳ ಕನ್ನಡ ಭಾಷಾಂತರ:

1. ಮಹಿಳಾ ಐಎಎಸ್ ಅಧಿಕಾರಿ, ಡಿಕೆ ರವಿ ರವರ ಬ್ಯಾಚ್ಮೇಟ್ ಆಗಿದ್ದರು. ಜೊತೆಗೆ ಅವರ ಬಗ್ಗೆ ರವಿ ಅವರಿಗೆ ಅಕಾಡೆಮಿಯಿಂದಲೇ ಮೋಹ ಇತ್ತು. ಶ್ರೀ.ಶ್ರೀನಾಥ್ ಐಪಿಎಸ್ ಅವರು ಸಹ ಇದನ್ನ ಬಹಿರಂಗಪಡಿಸಿದ್ದಾರೆ.

2. ಮಹಿಳಾ ಐಎಎಸ್ ಅಧಿಕಾರಿ ಜಿಲ್ಲಾ ಪರಿಷತ್ ಸಿಎಒ ಆಗಿ ನೇಮಕಗೊಂಡ ಮಂಡ್ಯಕ್ಕೆ ರವಿ ಆಗಾಗ ಭೇಟಿ ನೀಡುತ್ತಿದ್ರು, ಅವರೊಂದಿಗೆ ಔಟಿಂಗ್ ಕೂಡ ಹೋಗ್ತಿದ್ರು, ಕೊನೆಯ ಭೇಟಿ ಫೆಬ್ರವರಿ 25,2015 ರಂದು ಆಗಿತ್ತು.

3.ಮಾರ್ಚ್ ಮೊದಲ ವಾರದಲ್ಲಿ ರವಿಯವರು ಮಹಿಳಾ ಐಎಎಸ್ ಅಧಿಕಾರಿಯಿಂದ ಬೇರೆ ಇನ್ನೇನನ್ನೋ ನಿರೀಕ್ಷಿಸಿದ್ದಾರೆ. ಇದು ಮೆಸೇಜ್ ನ ಧಾಟಿಯಲ್ಲಿ ಗೋತ್ತಾಗುತ್ತೆ. ಅದಕ್ಕೆ ಅವ್ರು ಆಕ್ಷೇಪಿಸಿದ್ದಾರೆ.

4.ಮಹಿಳಾ ಐಎಎಸ್ ಅಧಿಕಾರಿ ಮಾರ್ಚ್ 13, 2015 ರಂದು ದೆಹಲಿಗೆ ಭೇಟಿ ನೀಡಿದ್ರ ಬಗ್ಗೆ ಮೀಡಿಯಾ ಮತ್ತು ಫೇಸ್ ಬುಕ್ ನಲ್ಲಿ ಪಬ್ಲಿಸಿಟಿ ಕೊಡಲು ರವಿ ಅಸಾಮಾನ್ಯ ಆಸಕ್ತಿ ತೋರಿಸಿರ್ತಾರೆ. ಇದು ಮಹಿಳಾ ಐಎಎಸ್ ಅಧಿಕಾರಿಯನ್ನು ಖುಷಿಪಡಿಸಲು ರವಿಗೆ ಇದ್ದ ಬಯಕೆಯನ್ನು ಬಹಿರಂಗ ಪಡಿಸುತ್ತೆ. ಜೊತೆಗೆ ಕೆಲಸದಾಕೆಯೊಬ್ಬರ ದೂರಿನ ಮೇರೆಗೆ ಮಹಿಳಾ ಐಎಎಸ್ ಅಧಿಕಾರಿ ವಿರುದ್ದ ಪತ್ರಿಕೆಗಳಲ್ಲಿ ಪ್ರಕಟವಾದ ವ್ಯತಿರಿಕ್ತ ಟೀಕೆಗಳನ್ನು ತೆಗೆದುಹಾಕಲ ರವಿ ರವರು ಬೆಂಗಳೂರು ಮಿರರ್ ನ ಚೇತನ್ ಅವರೊಂದಿಗೆ ಮಾತನಾಡಿದ್ದಾರೆ.

5.ಮಾರ್ಚ್ 05 ರ ನಂತರ ಕಳಿಸಿದ ಮೆಸೇಜ್ಗಳ ಧಾಟಿಯಲ್ಲಿ, ತುಂಬಾ ಆತುರ, ಪ್ರಬಲ ಅಪೇಕ್ಷೆ, ಹಂಬಲ, ಬೇಡಿಕೆ ಮತ್ತು ಹತಾಶೆ ಕಾಣಿಸುತ್ತೆ.

6.ರವಿ ಮಾಡಿದ ಮೆಸೇಜ್ ಗಳಿಗೆ ಮಹಿಳಾ ಐಎಎಸ್ ಅಧಿಕಾರಿ ರೆಸ್ಪಾಂಡ್ ಮಾಡದೇ ಇದ್ದಿದ್ರಿಂದ ಮಾರ್ಚ್ 15 ರಂದು ಹತಾಶೆ ಉತ್ತುಂಗ ತಲುಪುತ್ತದೆ ರವಿ ಮಾಡಿದ ಕಾಲ್ ಗಳಿಂದ ಇದು ಸ್ಪಷ್ಟವಾಗಿದೆ. ಬೆಳಿಗ್ಗೆ ರವಿ ಸುಮಾರು 53 ನಿಮಿಷಗಳ ಕಾಲ ಅವರೊಂದಿಗೆ ಮಾತಾಡಿದ್ದಾರೆ. ಸಂಜೆ 05 ಗಂಟೆಗೆ ಸುಮಾರಿಗೆ ಮಾಡಿದ ಮೆಸೇಜ್ಗಳು ರವಿ ರವರ ಮನಸ್ಸನ್ನ ಬಹಿರಂಗಪಡಿಸುತ್ತವೆ, ಅದರಲ್ಲಿ ಅವರು ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವುದಾಗಿ ಉಲ್ಲೇಖಿಸುತ್ತಾರೆ, ಇದು ಖಂಡಿತವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯ ಸ್ವರೂಪದಲ್ಲಿದೆ. ಇದು ಮಹಿಳಾ ಐಎಎಸ್ ಅಧಿಕಾರಿಯನ್ನ ತನ್ನ ದಾರಿಗೆ ಬರುವಂತೆ ಮಾಡೋದಕ್ಕೆ ಇರಬಹುದು. ಈ ಮೆಸೇಜ್ ನಂತರ ರವಿ ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ 40 ನಿಮಿಷಗಳ ಕಾಲ ಮಾತನಾಡುತ್ತಾರೆ. ಹರಿಕೃಷ್ಣ ಮತ್ತು ಚಂದ್ರಶೇಖರ್ ಅವರು ರವಿ ತುಂಬ ಅಸಮಾಧಾನಗೊಂಡಿದ್ರು ಕಾರಣ ಕೇಳಿದಾಗ ಹೇಳಲಿಲ್ಲ ಅಂತ ಹೇಳಿದರು. ರವಿ ಈ ರೀತಿ ಆಗೋದನ್ನ ಅವರಿಬ್ರು ಅನೇಕ ಬಾರಿ ನೋಡಿದ್ರು, ನವೆಂಬರ್ 27 ರಂದು ಕೂಡ ಇದೇ ರೀತಿ ಅವ್ರು ಖಿನ್ನತೆಗೆ ಒಳಗಾಗಿದ್ರು.

7. ದಿ:-16.03.2015 ರಂದು ಬೆಳಿಗ್ಗೆ 09.50 ಕ್ಕೆ ಮಹಿಳಾ ಐಎಎಸ್ ಅಧಿಕಾರಿ ಅವರಿಗೆ ರವಿ ಕಳಿಸಿದ ಮೆಸೇಜ್, ಆ ಮೆಸೇಜ್ ಬರೆಯೋವಾಗ ರವಿಯ ಮನಸ್ಥಿತಿಯನ್ನ ತೋರಿಸುತ್ತೆ. ಆಗ ರವಿ ತಾವು ಎಲ್ಲಾ ಕಡೆಗೂ ವೈಫಲ್ಯ ಮತ್ತು ಯಾರಿಗೂ ಒಳ್ಳೆಯದನ್ನ ಮಾಡೋಕಾಗದ ಹತಾಶೆಯನ್ನ ಸೂಚಿಸುತ್ತೆ. ರವಿ ಮಹಿಳಾ ಐಎಎಸ್ ಅಧಿಕಾರಿ ತನಗೆ ಭುಜವಾಗ್ತಾರೆ ಅಂತ ನೋಡಿದ್ರು ಆದ್ರೆ ಹಿಂಜರಿಕೆ ನೋಡಿ ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಂಡರು. ರವಿ ತಮ್ಮ ಜೀವನವನ್ನ ಕೊನೆಗೊಳಿಸಲು ಬಯಸಿದ್ದಾರೆ ಅನ್ನೋದನ್ನ ಸ್ಪಷ್ಟವಾಗಿ ಸೂಚಿಸೋ ಮೆಸೇಜ್ ಗೆ ಮಹಿಳಾ ಐಎಎಸ್ ಅಧಿಕಾರಿ ರೆಸ್ಪಾಂಡ್ ಮಾಡಿಲ್ಲ. ಕಳೆದ 15 ಗಂಟೆಯಲ್ಲಿ ಎರಡನೇ ಬಾರಿಗೆ ರವಿ ಅವರು ತಮ್ಮ ಉದ್ದೇಶವನ್ನ ತಿಳಿಸಿದ್ದರು.

8. ಬೆಳಿಗ್ಗೆ 11.12 ಕ್ಕೆ ತಮ್ಮ ಫ್ಲಾಟ್ ನಿಂದ ರವಿ ಮಹಿಳಾ ಐಎಎಸ್ ಅಧಿಕಾರಿಗೆ ಕರೆ ಮಾಡ್ತಾರೆ. ಆದ್ರೆ ಅವರು ಕರೆಯನ್ನು ಸ್ವೀಕರಿಸಲ್ಲ. ಮೊಬೈಲ್ ನ್ನ ತಮ್ಮ ಪತಿಗೆ ಕೊಡ್ತಾರೆ. ಅಂದ್ಹಾಗೆ ಹಿಂದಿನ ದಿನವಷ್ಟೇ ರವಿ ತನ್ನ ಪ್ರೀತಿಯನ್ನ ಯಾರಿಗೂ ಹೇಳಬಾರದು ಅಂತ ಮಹಿಳಾ ಐಎಎಸ್ ಅಧಿಕಾರಿಗೆ ಮೆಸೇಜ್ ಮಾಡಿರ್ತಾರೆ.
9. ಮಹಿಳಾ ಐಎಎಸ್ ಅಧಿಕಾರಿ ಅವರು ತಮ್ಮ ಸಂಬಂಧವನ್ನ ಒಂದು ಹಂತ ಮೀರಿ ಬೆಳಸಲು ನಿರಾಕರಿಸಿದ್ದು ಅದು ಅವರ ಮೇಲೆ ಪರಿಣಾಮ ಬೀರಿರಬಹುದು.

ಈ ಮೇಲಿನದರಿಂದ, ಅನೇಕ ಅಂಶಗಳು ರವಿ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿವೆ ಎಂಬುದು ಸ್ಪಷ್ಟವಾಗಿದೆ, ಆದರೆ ಇಮೀಡಿಯಟ್ ಟ್ರಿಗರ್ ಆಗಿರೊದು ಮಹಿಳಾ ಐಎಎಸ್ ಅಧಿಕಾರಿ ಅವರ ನಿರಾಕರಣೆ ಅಲ್ಲದೇ ಬೇರೆನೂ ಅಲ್ಲ. ಬೆಳಿಗ್ಗೆ 11.12ಕ್ಕೆ ಅವರನ್ನು ಸಂಪರ್ಕಿಸಲು ರವಿ ಮಾಡಿದ ಕೊನೆಯ ಹತಾಶ ಪ್ರಯತ್ನ ಮಹಿಳಾ ಐಎಎಸ್ ಅಧಿಕಾರಿ ಅವರ ಮೆಸೇಜ್ ಗೆ ರೆಸ್ಪಾಂಡ್ ಮಾಡದೇ ಫೋನ್ ನ ತಮ್ಮ ಒತಿಗೆ ಕೊಡುವುದರ ಮೂಲಕ ನಿರಾಶೆಯಲ್ಲಿ ಕೊನೆಗೊಂಡಿದೆ. ಇದು ಕೊನೆಯ ಕಡ್ಡಿಯಾಗಿದೆ. ಮಹಿಳಾ ಐಎಎಸ್ ಅಧಿಕಾರಿ ಮತ್ತು ಅವರ ಪತಿ ಇನ್ನೇನು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸ್ತಾರೋ ಇದ್ರಿಂದ ಎಲ್ಲಿ ಅವರ ಪ್ರತಿಷ್ಠೆಗೆ ಧಕ್ಕೆ ಬಂದು ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತೋ ಅನ್ನೊದು ಅವ್ರು ಇನ್ನಷ್ಟು ಖಿನ್ನ ಮತ್ತು ಹತಾಶೆಗೆ ಕಾರಣವಾಗಿದೆ. ಇದು ರವಿ ಅವರು ತಮ್ಮ ಜೀವನವನ್ನು ಕೊನೆಗೊಳಿಸಲು ಟಿಗರಿಂಗ್ ಪಾಯಿಂಟ್ ಆಗಿದೆ.
ಸಾಂದರ್ಭಿಕ, ವೈಜ್ಞಾನಿಕ ಸಾಕ್ಷಿಗಳು, ವಿಧಿವಿಜ್ಞಾನ ಮತ್ತು ವೈದ್ಯರ ಅಭಿಪ್ರಾಯಗಳು ಜೊತೆಗೆ ಈ ಸಮಯದಲ್ಲಿ ಹೊರಹೊಮ್ಮಿದ ವಿವಿಧ ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ಎಲ್ಲ ಪುರಾವೆಗಳನ್ನು ಗಣನೆಗೆ ತೆಗೆದುಕೊಂಡು ಡಿಕೆ ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆ ವೇಳೆ ಸಾಬೀತಾಗಿದೆ. ಎಂದು ಪಿ.ಚಕ್ರವರ್ತಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಕೇಂದ್ರಿಯ ತನಿಖಾ ದಳ (ಸಿ.ಬಿ.ಐ) ರವರು ಡಿ.ಕೆ ರವಿ ರವರ ಸಾವಿನ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಡಿಕೆ ರವಿ ರವರು ಮಹಿಳಾ ಐಎಎಸ್ ಅಧಿಕಾರಿಗೆ ಕಳುಹಿಸಿದ ಕೊನೆಯ ಮೆಸೇಜ್ ನಲ್ಲಿ ಏನಿತ್ತು ?
” ಹೇ ಬೇಬಿ, ಇದು ನನ್ನಿಂದ ಬಂದ ಕೊನೆಯ ಮೆಸೇಜ್ ಎಂದು ನಾನು ಭಾವಿಸುತ್ತೇನೆ. ನಿನ್ನ ಮನಸ್ಸನ್ನ ಸ್ಪಷ್ಟಪಡಿಸಲು ನಾನು ಇದನ್ನ ನಿನಗೆ ಕಳಿಸ್ತಾ ಇದ್ದೇನೆ. ನಾನು ಸ್ವಾರ್ಥಿ ಅಲ್ಲ, ಸುಳ್ಳೂ ಹೇಳುವುದಿಲ್ಲ. ನನ್ನ ಇಡೀ ಜೀವನವನ್ನು ನಾನು Cause ಗಾಗಿ ಗುರಿಗಳಿಗಾಗಿ ಮತ್ತು ಸಾಧನೆಗಳಿಗಾಗಿ ಕಳೆದಿದ್ದೇನೆ. ನಾನು ಯಾವುದರ ಬಗ್ಗೆಯೂ ಅಥವಾ ಯಾವ ಬಗ್ಗೆಯೂ ಕೇರ್ ಮಾಡದೇ ದಂತಕಥೆಯಂತೆ ಬದುಕಿದೆ. ಬಡತನ ಮತ್ತು ಹಳ್ಳಿಯ ಹಿನ್ನಲೆಯಿಂದ ಇಲ್ಲಿಯವರೆಗೆ ಬೆಳೆದೆ. ಆದ್ರೆ ಈಗ ನಾನು ನನ್ನ ಜೀವನದಲ್ಲಿ ವಿಫಲನಾಗಿದ್ದೇನೆ ಮುಂದೆ ಬದುಕಲುಯಾವುದೇ ಆಕಾಂಕ್ಷೆಗಳು ಕಾಣ್ತಿಲ್ಲ. ನಾನು ಯಾರಿಗೂ ಒಳ್ಳೆಯವನಾಗಿ ಇರಲು ಸಾಧ್ಯವಾಗಲಿಲ್ಲ. ಕಳೆದ ಕೆಲವು ವರ್ಷಗಳಿಂದ ನೀನು ನಿಜವಾಗಿಯೂ ನನ್ನ ಸ್ಪೂರ್ತಿ ಮತ್ತು ಉತ್ಸಾಹವಾಗಿ ನನಗೆ ಮಾರ್ಗದರ್ಶನ ಮಾಡಿರುವೆ. ನಾನು ನಿನ್ನನ್ನ ತುಂಬಾ ಪ್ರೀತಿಸುತ್ತಿದ್ದೆ. ನಿನ್ನ ಮೇಲಿನ ನನ್ನ ಪ್ರೀತಿಯನ್ನು ನೀನು ಅನುಮಾನಿಸಬಾರದು ಕೇವಲ ನಿನ್ನ ಸೌಂದರ್ಯಕ್ಕಾಗಿ ನಾನು ನಿನ್ನನ್ನು ಬಯಸಿದ್ದರೆ, ನಿನಗಿಂತ ಹೆಚ್ಚು ಸುಂದರವಾದ ಮಹಿಳೆಯರು ಇದ್ರು. ನಾನು ಯಾರೊಂದಿಗಾದರೂ ತೃಪ್ತಿ ಹೊಂದಬಹುದಿತ್ತು. ಆದ್ರೆ ನನಗೆ ನಿನ್ನ ಮೇಲೆ ಮತ್ತು ನಿನ್ನ ಮೇಲಿರೋ ನನ್ನ ಪ್ರೀತಿ ಮೇಲೆ ಬಹಳ ಗೌರವವಿದೆ. ನಿನ್ನನ್ನ ಪ್ರೀತಿಸಿದ ನಂತರವೂ ನಾನು ಯಾಕೆ ಮದುವೆಯಾದೆ ಅಂತ ನೀನು ಕೇಳುವುದು ಸರಿಯಾಗಿದೆ ಇದೆ. ನಾನು ನಿನ್ನ ಮರೆಯಲು ಬಯಸಿದ್ದೆ, ಹುಚ್ಚ ಆಗಬಾರದು ಅಂದ್ಕೊಂಡಿದ್ದೆ ಆದರೆ ನಾನು ತಪ್ಪು ಮಾಡಿದ್ದೇನೆ ಅಂತ ನಂತರ ಗೊತ್ತಾಯ್ತು. ನಿನ್ನನ್ನ ಪಡೆಯದ ಹೊರತು ನಾನು ಶಾಂತಿಯಿಂದಿರಲು ಸಾಧ್ಯವಿಲ್ಲ. ನೀನು ನನಗೆ ವಾಸ್ತವವನ್ನು ತೋರಿಸಿದೆ. ಸುಸಂಸ್ಕೃತ ಮಾರ್ಗಗಳನ್ನ ಕಲಿಸಿದೆ, ನನ್ನನ್ನ ಹೀರೋ ಮಾಡಿದೆ. ನೀನು ನನಗೆ ನಿಜವಾದ ಲಕ್ಕಿ ಲೇಡಿ. ಸರಿ… ಸತ್ಯ ಗೊತ್ತಾದ ನಂತರವೂ ನಾನು ಈ ವಿಷಯವನ್ನು ಮತ್ತಷ್ಟು ಎಳೆಯಲು ಸಾಧ್ಯವಿಲ್ಲ, ನೀನು ಸಂತೋಷದ ವೈವಾಹಿಕ ಜೀವನವನ್ನ ನಡೆಸಲು ಮತ್ತು ನಾನು ಶಾಂತಿಯಿಂದ ವಿಶ್ರಾಂತಿ ಪಡೆಯಲು ಒಂದು ಅಂತ್ಯವಿರುತ್ತದೆ. ಈ ಗುರಿಯನ್ನು ಸಾಧಿಸಲು ಎರಡು ಮಾರ್ಗಗಳಿವೆ, ಒಂದೋ ನಾನು ಸಾಯಬೇಕು ಅಥವಾ ನಿನ್ನನ್ನ ಪ್ರೀತಿಸೋದನ್ನನಿಲ್ಲಿಸಬೇಕು . ಆದ್ರೆ ಎರಡನೇದನ್ನ ಮಾಡಲು ನನಗೆ ಸಾಧ್ಯವಿಲ್ಲ ಮತ್ತು ನಿನ್ನ ಮೇಲಿನ ನನ್ನ ಪ್ರೀತಿ ಎಂದೆಂದಿಗೂ ಸತ್ಯ ಮತ್ತು ಚಿರವಾಗಿರಬೇಕು ಅಂತ ನಾನು ಬಯಸುತ್ತೇನೆ. ಆದ್ದರಿಂದ ಸಾವು ಪರಿಹಾರವಾಗಿದೆ….

ನಾನು ಜೀವನದಲ್ಲಿ ವಿಫಲನಾಗಿದ್ದೇನೆ ಅನ್ನೋದನ್ನ ತಿಳಿದು ಯಾವುದೇ ಉತ್ಸಾಹ ಅಥವಾ ಗುರಿಯಿಲ್ಲದೆ ಪ್ರಾಣಿಯಂತೆ ಬದುಕುತ್ತಿದ್ದೇನೆ. ನಾನು ತುಂಬಾ ಪ್ರೀತಿಸುತ್ತಿದ್ದ ಮಹಿಳೆಯನ್ನು ಅಕ್ಷರಶ: ಹೊಂದಲು ಸಾಧ್ಯಾವಿಲ್ಲ ಎಂಬ ಸತ್ಯವನ್ನು ತಿಳಿದ ನಂತರವೂ, ಮುಂದೆ ಬದುಕುವುದರಲ್ಲಿ ಏನು ಅರ್ಥವಿದೆ? ನೀನು ಹೇಳಿದಂತೆ ಸಾವು ನಾವು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ಒಮ್ಮೆ ನನ್ನ ಜೀವನದ ಉದ್ದೇಶವು ಯಶಸ್ವಿಯಾಗಲು ಸಾಧ್ಯವಾಗದಿದ್ದರೆ, ನಿನ್ನ ಮೇಲೆ ಹೊರೆಯಾಗಿ ಇರೋದಕ್ಕಿಂತ ಸಾವನ್ನ ಆನಂದಿಸೋದು ಸುಲಭವಾಗುತ್ತೆ. ಬೇಬಿ, ನನಗಿಂತ ನಿನಗೆ ಚೆನ್ನಾಗಿ ಗೊತ್ತಿದೆ. ಈ ಇಡೀ ಜಗತ್ತು ಅವರವರ ಇಚ್ಚೆಯಂತೆ ನಡೆಯುತ್ತೆ, ಬೇರೆಯವರಿಗಾಗಿ ಯಾರೂ ಬದುಕುವುದಿಲ್ಲ, ಆದ್ದರಿಂದ ನಾನು ಸತ್ತರೆ, ನನ್ನೊಂದಿಗೆ ಯಾರು ಸಾಯುವುದಿಲ್ಲ. ನನ್ನನ್ನ ಬಲ್ಲವರೆಲ್ಲ ಒಂದೆರಡು ದಿನ ಅಳ್ತಾರೆ ಅಷ್ಟೆ. ಆದರೆ ನೀನು ಖುಷಿಯಿಂದ ಇರ್ತೀಯಾ ಜೊತೆಗೆ ನನ್ನ ಪ್ರೀತಿ ನನ್ನ ಆತ್ಮದೊಂದಿಗೆ ಶಾಶ್ವತವಾಗಿ ಶಾಂತಿಯಿಂದ ಉಳಿಯುತ್ತೆ.

ನನ್ನ ಅತ್ಯತ್ತಮ ಸ್ನೇಹಿತೆಯಾಗಿದ್ದಕ್ಕಾಗಿ ನಾನು ನಿನಗೆ ಧನ್ಯವಾದ ಹೇಳ್ತೀನಿ. ನನ್ನನ್ನು ಉತ್ತಮ ಸ್ನೇಹಿತನಾಗಿ ಸ್ವೀಕರಿಸಿದ್ದಕ್ಕೂ ಧನ್ಯವಾದ ಹೇಳ್ತೀನಿ, ನನ್ನನ್ನ ಒಬ್ಬ ಮನುಷ್ಯನಾಗಿ ಮಾಡಿದಕ್ಕೆ ಧನ್ಯವಾದ ಹೇಳ್ತೀನಿ, ನೀನು ನನ್ನೊಂದಿಗೆ ಹಂಚಿಕೊಂಡ ಎಲ್ಲದಕ್ಕೂ ಧನ್ಯವಾದ ಹೇಳ್ತೀನಿ, ನನಗೆ ಏನು ಬೇಕು, ನನ್ನ ಉತ್ಸಾಹ, ನನ್ನ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು.

ನೀನು ತುಂಬಾ ವರಿ ಮಾಡ್ಕೋತಾ ಇರಬಹುದು, ಅದ್ರೆ ಅದರ ಬಗ್ಗೆನೂ ವರಿ ಮಾಡ್ಕೋಬೇಡ… ನಾನು ನಿನ್ನನ್ನು ಪ್ರೀತಿಸುತ್ತಿದ್ದೆ, ಅಂದ್ರೆ, ನನ್ನ ಸಾವಿನ ನಂತರವೂ ನಿನಗೆ ಒಳ್ಳೆಯದಾಗಬೇಕು ಅಂತ ಬಯಸ್ತೇನೆ. ಆ ಕಾರಣಕ್ಕಾಗಿಯೇ ನಾನು ನನ್ನ ಮೊಬೈಲ್ ನಲ್ಲಿರುವ ನಿನ್ನ ಎಲ್ಲಾ ಫೋಟೋಗಳು, ಎಲ್ಲಾ ಮೆಸೇಜ್ಗಳು ಮತ್ತು ನಿನಗೆ ಸಂಬಂಧಿಸಿದ ಎಲ್ಲವನ್ನ ಡಿಲೀಟ್ ಮಾಡಿದ್ದೇನೆ. ನಿನ್ನ ಯಶಸ್ಸಿಗೆ Help ಮಾಡಲು, ನಿನ್ನ ಯಶಸ್ಸನ್ನ ನೋಡಲು ನನ್ನ ಆತ್ಮ ನಿನ್ನೊಂದಿಗೆ ಇರುತ್ತೆ. ನೀನು ಶಾಶ್ವತವಾಗಿ ನನ್ನ ನೋಡಬಯಸದಿದ್ದರೆ, ನನ್ನ ಸಾವಿನ ನಂತರ ನನ್ನ ಆತ್ಮ ನಿನ್ನನ್ನ ನೋಡಲ್ಲ.

Let’s rest in Peace. ನಿನ್ನನ್ನ ನೋಡ್ಬೇಕು ಮತ್ತು ಚುಂಬಿಸಬೇಕು ಅನ್ನೋದು ನನ್ನ ಕೊನೆಯ ಆಸೆಯಾಗಿತ್ತು. ಆದರೆ ಅದು ಈಡೇರುವುದಿಲ್ಲ.. ಆದ್ದರಿಂದ ನನ್ನ ಸಾವಿನ ಸುದ್ದಿ ಕೇಳಿದ ತಕ್ಷಣ ನೀನು ಬಂದು ನನ್ನನ್ನು ನೋಡಬೇಕು ಅಂತ ನಾನು ನಿರೀಕ್ಷಿಸುತ್ತೇನೆ, ಸಾಧ್ಯವಾದರೆ ನನ್ನನ್ನು ತಬ್ಬಿಕೊಂಡು ಚುಂಬಿಸು, ಹಾಗೆ ನನಗೆ ಶಾಂತಿಯನ್ನು ನೀಡುವಂತೆ ಶಿವನನ್ನು ಪ್ರಾರ್ಥಿಸು !!!

Related News

spot_img

Revenue Alerts

spot_img

News

spot_img