22.9 C
Bengaluru
Thursday, January 23, 2025

ಅಣ್ಣ ಗಳಿಸಿದ ಆಸ್ತಿಯಲ್ಲಿ ತಮ್ಮನಿಗೂ ಪಾಲು ಸಿಗುತ್ತದೆಯಾ..?

Distribution#property#brother#revenuefacts
ಬೆಂಗಳೂರು, ಏ. 11 : ಜಮೀನು ಇದ್ದವರು ಅಥವಾ ಯಾವುದೇ ರೀತಿಯ ಆಸ್ತಿಯನ್ನು ಹೊಂದಿದವರು ಮಿಸ್ ಮಾಡದೆಯೇ ಸಂಪೂರ್ಣವಾಗಿ ಈ ಲೇಖನವನ್ನು ಓದಬೇಕು. ಒಟ್ಟು ಕುಟುಂಬದಲ್ಲಿ ಆಸ್ತಿ ಪಾಲು ಹಂಚಿಕೆ ಹೇಗೆ ಆಗುತ್ತದೆ. ಅಣ್ಣ ಗಳಿಸಿದ ಆಸ್ತಿಯನ್ನು ಗಳಿಸಿದ ಆಸ್ತಿಗಳಲ್ಲಿ ತಮ್ಮನು ಕೂಡ ಪಾಲು ಕೇಳಬಹುದೇ..? ಕುಟುಂಬ ಸದಸ್ಯರು ಪ್ರತ್ಯೇಕವಾಗಿ ಗಳಿಸಿದ ಆಸ್ತಿಯಲ್ಲೂ ಕುಟುಂಬದವರು ಪಾಲು ಕೇಳಬಹುದೇ ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ.

ಕುಟುಂಬವರೆಲ್ಲರೂ ಸೇರಿ ಒಟ್ಟಾಗಿ ಖರೀದಿಸಿದ ಆಸ್ತಿ ಸೇರಿ ಪಡೆದ ಆಸ್ತಿಯನ್ನು ಒಟ್ಟು ಕುಟುಂಬದ ಆಸ್ತಿ ಎನ್ನಲಾಗುತ್ತದೆ. ಮತ್ತು ಪಿತ್ರಾರ್ಜಿತ ಆಸ್ತಿಯನ್ನು ಕೂಡ ಒಟ್ಟು ಕುಟುಂಬದ ಆಸ್ತಿ ಎಂದು ಕರೆಯಲಾಗುತ್ತದೆ. ಕುಟುಂಬದಲ್ಲಿ ತಮ್ಮ ಜಮೀನು ಉಳುಮೆ ಮಾಡುತ್ತಾ ಬದುಕಿದ್ದು, ಅಣ್ಣ ಆದವನು ಕುಟುಂಬದ ಭಾಗವೇ ಆಗಿದ್ದರೂ ಕೂಡ. ನಗರಕ್ಕೆ ಹೋಗಿ ಪ್ರತ್ಯೇಕವಾದ ಆಸ್ತಿಯನ್ನು ಗಳಿಸಿದ್ದರಿಂದ ತಮ್ಮನಿಗೆ ಅದರಲ್ಲಿ ಯಾವುದೇ ಪಾಲು ಬರುವುದಿಲ್ಲ. ಒಟ್ಟು ಕುಟುಂಬದ ಆಸ್ತಿಯಲ್ಲಿ ಸಮಾನಾಗಿ ಹಂಚಿಕೊಳ್ಳಬೇಕು. ಜೊತೆಗೆ ಇನ್ನು ಪೋಷಕರು ನೋಡಿಕೊಳ್ಳುವ ಜವಾಬ್ದಾರಿಯನ್ನು ಇಬ್ಬರೂ ಸಮನಾಗಿ ಹಂಚಿಕ್ಕೊಳ್ಳಬೇಕು.

ಅಣ್ಣ ಆದವನು ವಿಲ್ ಬರೆಯದೆಯೇ ಅಕಸ್ಮಾತ್ ಆಗಿ ಸಾವನ್ನಪ್ಪಿದರೆ, ಅವನ ಆಸ್ತಿಯಲ್ಲಿ ತಂದೆ ಹಾಗೂ ತಾಯಿಗೆ ಹಕ್ಕು ಇರುತ್ತದೆ. ಆತನಿಗೆ ಮದುವೆಯಾಗಿದ್ದಲ್ಲಿ ಹೆಂಡತಿ ಮಕ್ಕಳಿಗೂ ಪಾಲು ಇರುತ್ತದೆ. ಹಾಗೆಯೇ ಒಟ್ಟು ಕುಟುಂಬದ ಆಸ್ತಿಯಲ್ಲಿ ಎಲ್ಲರಿಗೂ ಸಮ ಪಾಲು ಇರುತ್ತದೆ. ಅಕಸ್ಮಾತ್ ಆಗಿ ಕುಟುಂಬದ ಆಸ್ತಿಯಲ್ಲಿ ಯಾವುದಾದರೂ ಸಾಲ ಅಥವಾ ಋಣಗಳು ಇದ್ದಿದ್ದೇ ಆದರೆ, ಅದನ್ನು ಕೂಡ ಸಮವಾಗಿ ಹಂಚಿಕೊಳ್ಳಬೇಕಾಗುತ್ತದೆ.

ತಮ್ಮನಾದವನು ಅವಶ್ಯಕತೆ ಇದ್ದಲ್ಲಿ, ಅಣ್ಣನಿಗೆ ಸೇರಬೇಕಿರುವ ಪಾಲಿನ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳುವ ಅವಕಾಶವಿದೆ. ಆದರೆ, ಯಾವುದೇ ಕಾರಣಕ್ಕೂ ಅಣ್ಣನ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ. ನೈತಿಕತೆಯ ಆಧಾರದ ಮೇಲೆ ಅಣ್ಣ ಬೇಖಿದ್ದರೆ, ತಮ್ಮನಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಲನ್ನು ನೀಡಬಹುದು. ಇನ್ನು ತಮ್ಮ ಉಳುಮೆ ಮಾಡುತ್ತಿದ್ದಲ್ಲಿ. ತಂದೆ-ತಾಯಿ ಉಳುಮೆ ಮಾಡುವ ಮಗನಿಗೆ ತಮ್ಮ ಪಾಲಿನ ಆಸ್ತಿಯನ್ನು ಕೂಡ ನೀಡಬಹುದು.

ಅಣ್ಣನಿಗೆ ಸಹಾಯ ಮಾಡಿದ್ದಲ್ಲಿ, ಅದರ ದಾಖಲೆಗಳು ಇದ್ದರೆ , ಅವನ್ನೆಲ್ಲಾ ತೋರಿಸಿ ತಮ್ಮ ಅಣ್ಣನ ಆಸ್ತಿಯಲ್ಲಿ ಪಾಲನ್ನು ಕೇಳಬಹುದು. ಅಣ್ಣ ಆದವನು ತಾನಿ ಗಳಿಸಿದ ಆಸ್ತಿ ಬಗ್ಗೆ ತಾನೇ ಸಂಪಅದಿಸಿದ್ದು ಎಂದು ದಾಖಲೆಗಳನ್ನು ಇಟ್ಟುಕೊಳ್ಳಬಹುದು. ಇನ್ನು ಪ್ರತಿಯೊಬ್ಬರ ಆಸ್ತಿ ಹಂಚಿಕೆ ವಿಚಾರದಲ್ಲಿ ಬೇರೆ ಬೇರೆಯಾದ ಹೊಣೆಗಾರಿಕೆಗಳಿರುವುದರಿಂದ ಅವರ ವಿವೇಚನೆಗೆ ಬಿಟ್ಟಿದ್ದು.

Related News

spot_img

Revenue Alerts

spot_img

News

spot_img