ಬೆಂಗಳೂರು, ಏ. 21 : ಮೊದಲೆಲ್ಲಾ ಉದ್ಯಮಿಗಳು ಅಲ್ಲೊಬ್ಬರು ಇಲ್ಲೊಬ್ಬರು ಎಂದು ಕಾಣುತ್ತಿದ್ದರು. ಆದರೆ, ಈಗ ಪ್ರತಿಯೊಬ್ಬರೂ ತಮ್ಮದೇ ಉದ್ಯಮಗಳನ್ನು ಪ್ರಾರಂಭಿಸಲು ಹವಹಣಿಸುತ್ತಾರೆ. ಇನ್ನು ಹಲವು ವರ್ಷಗಳಿಂದ ಉದ್ಯಮದಲ್ಲಿ ತೊಡಗಿದವರೆಲ್ಲಾ ಇಂದು ದೇಶದ ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಇದೀಗ ಮಲ್ಯ ಒಡೆತನದ ಬರ್ಜರ್ ಪೇಂಟ್ ಅನ್ನು ಕೇವಲ 16 ಕೋಟಿ ರೂಪಾಯಿಗೆ ಖರೀದಿ ಮಾಡಿದ ಧಿಂಗ್ರಾ ಸಹೋದರರು ಈಗ 55 ಸಾವಿರ ಕೋಟಿಗೂ ಅಧಿಕ ಲಾಭವನ್ನು ಪಡೆಯುತ್ತಿದ್ದಾರೆ.
ಪಂಜಾಬ್ ಮೂಲದ ಧೀಂಗ್ರಾ ಬದರ್ಸ್ ಓದಿದ್ದು, ದೆಹಲಿಯಲ್ಲಿ. ಆದರೆ, ಇವರ ತಾತ ಅಮೃತಸರದಲ್ಲಿ 1898ರಲ್ಲಿ ಪೇಂಟ್ ಅಂಗಡಿಯನ್ನು ಆರಂಭಿಸಿದ್ದರು. ಓದು ಮುಗಿಸಿದ ಧಿಂಗ್ರಾ ಸಹೀದರರು ತಾತನ ಉದ್ಯಮವನ್ನು ಮುಂದುವರಿಸಿದರು.80 ರ ದಶಕದಲ್ಲಿ ತಮ್ಮ ಪೇಂಟ್ ಉದ್ಯಮವನ್ನು ವಿಸ್ತರಿಸಿದ್ದರು. ಸೋವಿಯತ್ ಯೂನಿಯನ್ಗೆ ಅತಿ ಹೆಚ್ಚು ಪೇಂಟ್ ಅನ್ನು ರಫ್ತು ಮಾಡುತ್ತಿದ್ದರು. ನಂತರ ಬರ್ಜರ್ ಪೇಂಟ್ ಅನ್ನು ಖರೀದಿ ಮಾಡಲು ಕುಲದೀಪ್ ಸಿಂಗ್ ಧಿಂಗ್ರಾ ಹಾಗೂ ಗುರುಬಚನ್ ಸಿಂಗ್ ಧಿಂಗ್ರಾ ಖರೀದಿಸಲು ಮುಂದಾದರು.
ವಿಜಯ್ ಮಲ್ಯ ಅವರ ಯುಬಿ ಗ್ರೂಪ್ ಒಡೆತನದಲ್ಲಿ ಬರ್ಜರ್ ಪೇಂಟ್ಸ್ ಇತ್ತು. ಇದನ್ನು ಧೀಂಗ್ರಾ ಸಹೋದರರು ವ್ಯವಹಾರ ನಡೆಸಿ ತನ್ನ ಸುಪರ್ದಿಗೆ 1991ರಲ್ಲಿ ಪಡೆದರು. ಕೇವಲ 16 ಕೋಟಿ ರೂಪಾಯಿಗೆ ಬರ್ಜರ್ ಪೇಂಟ್ ಅನ್ನು ಖರೀದಿ ಮಾಡಿದರು. ಅಂದಿನಿಂದ ಸಹೋದರರು ಈ ಪೇಂಟ್ ಕಂಪನಿಯನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯದರು. ಈಗ ಬರ್ಜರ್ ಪೇಂಟ್ ಭಾರತದಲ್ಲಿ ಮಾತ್ರವಲ್ಲದೇ ರಷ್ಯಾ, ಪೋಲೆಂಡ್, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ವಿಸ್ಥರಣೆ ಮಾಡಲಾಗಿದೆ. ಕುಲದೀಪ್ ಛೇರ್ಮನ್ ಆಗಿದ್ದರೆ, ಸಹೋದರ ಗುರಬಚನ್ ವೈಸ್ ಛೇರ್ಮನ್ ಆಗಿದ್ದಾರೆ.
ಇನ್ನು ಬರ್ಜರ್ ಪೇಂಟ್ ಕಂಪನಿ ಬೆಳೆದದ್ದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.. 1923ರಲ್ಲಿ ಬ್ರಿಟನ್ ವ್ಯಕ್ತಿ ಕೊಲ್ಕತ್ತಾದಲ್ಲಿ ಆರಂಭಿಸಿದರು. ಬಳಿಕ ಇದನ್ನು 1947ರಲ್ಲಿ ಬ್ರಿಟಿಷ್ ಪೇಂಟ್ಸ್ ಸಂಸ್ಥೆ ಖರೀದಿ ಮಾಡಿತು. ನಂತರ ಪುನಃ 1969ರಲ್ಲಿ ಜೆನ್ಸನ್ ನಿಕೋಲ್ಸನ್ ಎಂಬ ಬ್ರಿಟನ್ ಕಂಪನಿ ಬರ್ಜರ್ ಪೇಂಟ್ಸ್ ಅನ್ನು ಖರೀದಿಸಿತು. 1973ರಲ್ಲಿ ಯುಬಿ ಗ್ರೂಪ್ ಈ ಬರ್ಜರ್ ಕಂಪನಿಯನ್ನು ಖರೀದಿ ಮಾಡಿತ್ತು. ಇದನ್ನು 16 ಕೋಟಿ ರೂ.ಗೆ 1991ರಲ್ಲಿ ಧಿಂಗ್ರಾ ಬ್ರದರ್ಸ್ ಖರೀದಿ ಮಾಡಿದರು.