22.9 C
Bengaluru
Friday, July 5, 2024

ಹಣ ಪಡೆದು ಲೇಔಟ್ ಡೆವಲಪ್ ಮಾಡದೇ ಸೈಟ್ ಕೊಡದ ಡೆವಲಪರ್ ಗೆ ಬಿತ್ತು ದಂಡ

ಬೆಂಗಳೂರು, ಮೇ. 04 : ಧಾರಾವಾಡ ಜಿಲ್ಲೆಯ ಮಾಳಾಪುರದ ಅಜಾದ ನಗರವಾಸಿ ಸಲೀಮ್ ಬೇಗ್ ಎಂಬುವರು ಸೈಟ್ ಖರೀದಿಸುವ ಆಸೆಯಲ್ಲಿ ಡೆವಲಪರ್ ಗೆ ಹಣ ಕೊಟ್ಟಿದ್ದರು. ಆದರೆ, ಐದು ವರ್ಷವಾದರೂ ಹಣವೂ ನೀಡದೇ, ಸೈಟ್ ಕೊಡದೇ ಮೋಸ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದ ಸಲೀಮ್ ಬೇಗ್ ಅವರು ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದು, ಇದೀಗ ತೀರ್ಪು ಹೊರ ಬಂದಿದೆ. ಅದರ ಪ್ರಕಾರ ಡೆವಲಪರ್ ಮಾಡಿದ ತಪ್ಪಿಗೆ ದಂಡ ವಿಧಿಸಿದ್ದು, ಸಲೀಮ್ ಬೇಗ್ ಅವರಿಗೆ ಪರಿಹಾರವನ್ನು ಕೊಡಿಸಿದೆ.

ಗುಲಗಂಜಿ ಕೊಪ್ಪದಲ್ಲಿ ನಿಜಾಮುದ್ದಿನ್ ತಂಬೋಲಿ ಎಂಬ ಡೆವಲಪರ್ ಲೇಔಟ್ ನಿರ್ಮಾಣದ ಹೊಣೆ ಹೊತ್ತಿದ್ದು, ಸರ್ವೇ ನಂ. 46ರಲ್ಲಿ 2702 ಚದರ ಅಡಿಯ ಫ್ಲಾಟ್ ಗಳನ್ನು ನಿರ್ಮಾಣ ಮಾಡುತ್ತಿದ್ದರು. 2018ರಲ್ಲಿ ನವೆಂಬರ್ 13 ರಂದು ಸಲೀಮ್ ಬೇಗ್ ಅವರು 16 ಲಕ್ಷ 87 ಸಾವಿರದ ಸೈಟ್ ಖರೀದಿಗೆ ಮುಂದಾಗಿದ್ದು. ಅದೇ ದಿನ ಅರ್ಧ ಹಣವನ್ನು ಪಾವತಿಸಿದ್ದಾರೆ. ತಂಬೋಲಿ ಅವರಿಗೆ 7 ಲಕ್ಷದ 50 ಸಾವಿರ ರೂಪಾಯಿ ಅನ್ನು ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.

ಒಂದು ವರ್ಷದಲ್ಲಿ ಲೇಔಟ್ ಡವಲಪ್ ಮಾಡಿ ಸೈಟ್ ಕೊಡುವುದಾಗಿ ತಂಬೋಲಿ ತಿಳಿಸಿದ್ದರು. ಆದರೆ ವರ್ಷಗಳೇ ಕಳೆದರೂ ಲೇಔಟ್ ಅನ್ನು ಡೆವಲಪ್ ಮಾಡದೇ, ಅಗ್ರಿಮೆಂಟ್ ಪ್ರಕಾರವಾಗಿ ಸೈಟ್ ಅನ್ನು ನೀಡದ ಕಾರಣ ಸಲೀಮ್ ಬೇಗ್ ಅವರು ನ್ಯಾಯ ಕೇಳಿ ಗ್ರಾಹಕ ಆಯೋಗದ ಮೊರೆ ಹೋಗಿದ್ದಾರೆ. ಇದೀಗ ತೀರ್ಪು ಹೊರ ಬಿದ್ದಿದ್ದು, ಸಲೀಮ್ ಅವರಿಗೆ ಹಣವನ್ನೂ ಕೊಡದೇ, ಸೈಟ್ ನೀಡದೇ ಇರುವುದಕ್ಕೆ ದಂಡವನ್ನು ವಿಧಿಸಿದೆ. ಸಲೀಮ್ ಬೇಗ್ ಅವರಿಗೆ ಇನ್ನು ಒಂದು ತಿಂಗಳಿನಲ್ಲಿ 8 ಲಕ್ಷದ 10 ಸಾವಿರ ರೂಪಾಯಿ ದಂಡವನ್ನು ಪಾವತಿಸುವಂತೆ ಹೇಳಿದೆ.

ಗ್ರಾಹಕ ರಕ್ಷಣಾ ಕಾಯ್ದೆ ಅಡಿಯಲ್ಲಿ ತೀರ್ಪು ನಿಡಲಾಗಿದೆ. ಇದರಲ್ಲಿ 7 ಲಕ್ಷದ 50 ಸಾವಿರ ರೂಪಾಯಿ ಸಲೀಮ್ ಅವರು ಸೈಟ್ ಖರೀದಿಗೆ ಮುಂಗಡವಾಗಿ ನೀಡಿದ್ದ ಹಣ ಹಾಗೂ ಉಳಿದ ಹಣವನ್ನು ದಂಡವೆಂದು ವಿಧಿಸಿದೆ. 50 ಸಾವಿರ ರೂಪಾಯಿ ಅನ್ನು ಸಲೀಮ್ ಅವರಿಗೆ ಪರಿಹಾರವಾಗಿ ನೀಡಲು ತಿಳಿಸಿದೆ. 10 ಸಾವಿರ ರೂಪಾಯಿ ಸಲೀಮ್ ಅವರು ನ್ಯಾಯಕ್ಕಾಗಿ ಓಡಾಡಿ ಮಾಡಿದ ಕರ್ಚು ವೆಚ್ಚವನ್ನು ಭರಿಸಲು ತಿಂಗಳ ಒಳಗೆ ನೀಡಲು ತಿಳಿಸಿದೆ.

Related News

spot_img

Revenue Alerts

spot_img

News

spot_img