ಬೆಂಗಳೂರು: ಪುಣ್ಯಕೋಟಿ ದತ್ತು ಯೋಜನೆಯಡಿ ಸರ್ಕಾರಿ ನೌಕರರು ಎಷ್ಟು ವಂತಿಗೆ ಕೊಡಬೇಕು ಎಂಬುದನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದಂತೆ ಪುಣ್ಯಕೋಟಿ ದತ್ತು ಯೋಜನೆಯ ಸುಗಮ ಅನುಷ್ಠಾನಕ್ಕೆ ಸರ್ಕಾರಿ ನೌಕರರು ವಂತಿಗೆ ನೀಡಬೇಕು ಎಂದು ಆದೇಶಿಸಲಾಗಿದೆ. ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ರಾಜ್ಯದ ಎಲ್ಲಾ ನೌಕರರು ಜೊತೆಗೆ ನಿಗಮ, ಮಂಡಳಿಗಳು, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರು ಸಹಕರಿಸುವಂತೆ ಸಿಎಂ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ನವೆಂಬರ್ ತಿಂಗಳ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ನಿರ್ದಿಷ್ಟ ಮೊತ್ತದ ವಂತಿಗೆಯನ್ನು ಕಟಾಯಿಸಲು ಹಾಗೂ ನಿಗದಿತ ಯೋಜನೆಯ ಬಳಕೆಗೆ ಸರ್ಕಾರವು ಮಂಜೂರಾತಿ ನೀಡಲಾಗಿದೆ.
‘ಎ’ ವೃಂದದ ಅಧಿಕಾರಿಗಳು 11,000 ರೂ., ‘ಬಿ’ ವೃಂದದ ಅಧಿಕಾರಿಗಳು 4,000 ರೂ, ‘ಸಿ’ ವೃಂದದ ನೌಕರರು 400 ರೂ. ನಿಗದಿಪಡಿಸಲಾಗಿದೆ. ‘ಡಿ’ ವೃಂದದ ನೌಕರರಿಗೆ ವಿನಾಯಿತಿ ನೀಡಲಾಗಿದೆ.
ಈ ನಿಗದಿತ ವಂತಿಗೆ ಕೊಡಲು ಇಚ್ಛಿಸದ ಅಧಿಕಾರಿ/ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳಿಗೆ ಲಿಖಿತ ಮೂಲಕ ನ.25 ರೊಳಗೆ ಸಲ್ಲಿಸಬೇಕು. ಅಂತಹ ನೌಕರರ ವೇತನದಿಂದ ನಿಗದಿತ ವಂತಿಗೆಯನ್ನು ಕಟಾವು ಮಾಡುವುದಿಲ್ಲ.