ಬೆಂಗಳೂರು, ಡಿ. 24: ಭಾರತ ಸರ್ಕಾರ ಜನಸಾಮಾನ್ಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದರಿಂದ ಲಾಭ ಪಡೆಯುವವರು ಮಾತ್ರ ಕೆಲವೇ ಕೆಲವು ಮಂದಿ. ಸರ್ಕಾರದ ಯೋಜನೆಗಳು ಜನಸಾಮಾನ್ಯರನ್ನು ತಲುಪುವಲ್ಲಿ ಎಡವುತ್ತವೆ. ಸರ್ಕಾರ ಬಡ ಜನರಿಗೆ, ಕೃಷಿಕರಿಗೆ ಸಹಾಯವಾಗಲಿ ಎಂದು ಯೋಜನೆಗಳನ್ನು ಜಾರಿಗೆ ತರುತ್ತದೆ. ಗ್ರಾಮೀಣ ಪ್ರದೇಶದ ಬಡವರಿಗೆ ಸ್ವಯಂ ಉದ್ಯೋಗ ಶುರು ಮಾಡಲು ಸಹಾಯವಾಗಲಿ ಎಂದು ಯೋಜನೆಗಳನ್ನು ರೂಪಿಸಿವೆ.
ಸ್ವರೋಜ್ ಗಾರ್ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿರುವ ಬಡವರು ಪ್ರಯೋಜನ ಪಡೆದುಕೊಳ್ಳಬಹುದು. ಇದು ಆರ್ಥಿಕವಾಗಿ ಸಹಅಯ ಮಾಡುವುದರ ಜೊತೆಗೆ ಬಡವರಿಗೆ ಸ್ವಯಂ ಉದ್ಯೋಗ ಮಾಡಲು ಅವಕಾಶ ಮಾಡಿಕೊಡುತ್ತದೆ. ಈ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಅಥವಾ ದೇಶೀಯ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಕಾರ್ಮಿಕರಿಗೂ ಅನುಕೂಲವಾಗುತ್ತದೆ. ಈ ಯೋಜನೆಯ ಮೂಲಕ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ಈ ಯೋಜನೆಯನ್ನು ಭಾರತ ಸರ್ಕಾರ 2022 ರಲ್ಲಿ ಶುರು ಮಾಡಿತು. ಇದರಿಂದ ಜನರು ಸ್ವಯಂ ಉದ್ಯೋಗವನ್ನು ಸೃಷ್ಟಿ ಮಾಡಿಕೊಳ್ಳಬಹುದು.
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯ ಮೂಲಕ ಸ್ವಂತ ಉದ್ಯೋಗ ಮಾಡುವ ಬಡವರಿಗೆ ಬ್ಯಾಂಕ್ ಸಾಲದ ಮೇಲೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಬಡ ಜನರನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ಜನರ ಕೌಶಲ್ಯಾಭಿವೃದ್ಧಿಯ ಕಡೆಯೂ ಗಮನ ಹರಿಸಬಹುದು. ಬಡತನ ರೇಖೆಗಿಂತ ಕೆಳಗಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಹತ್ತಕ್ಕಿಂತ ಹೆಚ್ಚಿನ ಮಂದಿ ಸೇರಿ ಗುಂಪು ರಚಿಸಬಹುದು. ಕೆಲ ಗುಂಪುಗಳನ್ನು ರಚಿಸಿ, ಒಟ್ಟು ಸೇರಿ ಉದ್ಯೋಗವನ್ನು ಮಾಡಿ ಸರ್ಕಾರದಿಂದ ಲಾಭ ಪಡೆಯಬಹುದಾಗಿದೆ. ಈ ಯೋಜನೆಯಿಂದ ಹೆಚ್ಚಾಗಿ ಮಹಿಳೆಯರು ಲಾಭವನ್ನು ಪಡೆಯಬಹುದಾಗಿದೆ. ಮಹಿಳೆಯರ ಏಲಿಗೆಗೆ ಈ ಯೋಜನೆ ಸಹಾಯಕಾರಿಯಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಅರ್ಜಿ ಪರಿಶೀಲನೆ ನಡೆಸಿದ ಮೇಲೆ ನೀವು ಯೋಜನೆಗೆ ಅರ್ಹರಾಗಿದ್ದರೆ, ಹಣ ನಿಮ ಮಂಜೂರಾಗುತ್ತದೆ. ಆಗ ನಿಮ್ಮ ಕನಸಿನ ಉದ್ಯೋಗವನ್ನು ಪ್ರಾರಂಭಿಸಬಹುದು.
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯ ಲಾಭವನ್ನು ಯಾರು ಯಾರು ಪಡೆಯಬಹುದು ಎಂದು ನೋಡುವುದಾದರೆ, ಗ್ರಾಮೀಣ ಪ್ರದೇಶದ ಬಡ ಜನರು ಇದರ ಲಾಭ ಪಡೆಯಬಹದು. ಸರ್ಕಾರ ಸ್ವ ಉದ್ಯೋಗಿಗಳಿಗೆ 7500 ರೂಪಾಯಿ ಸಬ್ಸಿಡಿಯನ್ನು ನೀಡುತ್ತದೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸರ್ಕಾರ ಗರಿಷ್‌ಠ 10000 ರೂಪಾಯಿವರೆಗೆ ಸಬಸಿಡಿಯನ್ನು ನೀಡುತ್ತದೆ. ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ 10000 ರೂಪಾಐಈ ಶಃಆಯ ಧನ ಸಿಗುತ್ತದೆ. ಈದರಿಂದ ಬಡ ಜನರಿಗೆ ಸಾಕಷ್ಟು ಲಾಭವಿದೆ.
ಇನ್ನು ಈ ಯೋಜನೆಯ ಲಾಭ ಪಡೆಯಲು ಏನು ಮಾಡಬೇಕು ಎಂದು ನೋಡುವುದಾದರೆ, ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ತೆರಳಬೇಕು. ಹೋಮ್ ಪೇಜ್ ನಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಅರ್ಜಿ ತೆರೆದುಕೊಳ್ಳುತ್ತದೆ. ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಕೂಡ ತುಂಬಿರಿ. ಅರ್ಜಿ ಭರ್ತಿ ಮಾಡಿದ ಬಳಿಕ ಕೇಳಿರುವ ದಾಖಲೆಗಳನ್ನು ಅಪ್ ಲೋಡ್ ಮಾಡಿ. ಬಳಿಕ ಸಲ್ಲಿಸು ಎಂಬ ಬಟನ್ ಒತ್ತಿ. ಆಗ ಇದನ್ನು ಸಂಬಂಧ ಪಟ್ಟ ಅಧಿಕಾರಿಗಳು ಅರ್ಜಿಯನ್ನು ಪರಿಶೀಲನೆ ಮಾಡುತ್ತಾರೆ. ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆ ಅರ್ಹವಾದ ಅರ್ಜಿಯನ್ನು ಆಯ್ಕೆ ಮಾಡುತ್ತಾರೆ. ಆಗ ನೀವು ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯ ಹಣವನ್ನು ಪಡೆದು ಲಾಭ ಪಡೆಯಬಹುದು.