ಬೆಂಗಳೂರು, ಜೂ. 09 : ಶಿವರಾಮ ಕಾರಂತ ಲೇಔಟ್ ಕಾಮಗಾರಿ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು ಪರಿಶೀಲನೆಯನ್ನು ನಡೆಸಿದರು. ಬಲಿಕ ಮಾತನಾಡಿದ ಅವರು ಬಿಡಿಎ ಕೇಂದ್ರ ಮಹತ್ವದ ವಿಚಾರವನ್ನು ಹೇಳಿದರು. ಶಿವರಾಮ ಕಾರಂತ ಲೇಔಟ್ ಕಾಮಗಾರಿಗೆ ಆದೇಶ ಸಿಕ್ಕಿದೆ. ಈ ಬಗ್ಗೆ ಚರ್ಚೆ ನಡೆಸಿದ್ದು, ಲೇಔಟ್ ಯೋಜನೆ, ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಈ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಸಿಗಬೇಕು ಎಂದು ಹೇಳಿದರು.
ಈ ಲೇಔಟ್ ನಿರ್ಮಾಣದಿಂದ ಬಿಡಿಎಗೂ ಪ್ರಯೋಜನ ಆಗಬೇಕು. ಇದುವೆ ನಮ್ಮ ಉದ್ದೇಶ. ಇದೆಲ್ಲದರ ಬಗ್ಗೆಯೂ ಮಾಹಿತಿಯನ್ನು ಪಡೆದಿದ್ದೇನೆ. ಬಿಡಿಎ ನಿವೇಶನಕ್ಕೆ ಅರ್ಜಿ ಹಾಕಿರುವ ಬಡವರಿಗೆ ಅನ್ಯಾಯವಾಗಬಾರದು. ಕಾನೂನಿನ ಮೂಲಕವೇ ಎಲ್ಲವೂ ನಡೆಯುತ್ತದೆ. ಬಡಾವಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲವೇ ಸ್ಥಳೀಯ ಮಟ್ಟದ ಬಡಾವಣೆ ಮಾಡುತ್ತಿದ್ದಾರಾ? ಯಾವ ರೀತಿ ಯೋಜನೆ ರೂಪಿಸಿದ್ದೀರಾ ಎಂಬ ಬಗ್ಗೆ ಡಿಸಿಎಂ ಚರ್ಚೆ ನಡೆಸಿದರು.
ಇನ್ನು ಬೆಂಗಳೂರು ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ಹೆಸರಘಟ್ಟ ಹೋಬಳಿ, ಯಶವಂತಪುರ ಹೋಬಳಿಯ 17 ಗ್ರಾಮಗಳ 3546 ಎಕರೆ 12 ಗುಂಟೆ ಜಮೀನು ಅನ್ನು ಶಿವರಾಂ ಕಾರಂತ ಬಡಾವಣೆಯನ್ನು ನಿರ್ಮಾಣ ಮಾಡಲಾಗುತ್ತಿದೆ. 30 ರಿಂದ 40 ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳಿವೆ. ಬಿಡಿಎ ಶಿವರಾಮ ಕಾರಂತ್ ಲೇಔಟ್ ರಚನೆಗಾಗಿ ತಮ್ಮ ಆಸ್ತಿಯನ್ನು ಕಳೆದುಕೊಳ್ಳುತ್ತಿರುವ ರೈತರು ಮತ್ತು ಭೂಮಾಲೀಕರು ಯೋಜನೆಗೆ ಅಧಿಸೂಚಿಸಲಾದ ತಮ್ಮ ಆಸ್ತಿಯಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ಪಡೆಯುತ್ತಾರೆ.
ಬಡಾವಣೆ ನಿರ್ಮಾಣವಾಗುವ ರೈತರಿಗೆ ಶೇ.40 ರಷ್ಟು ಭೂಮಿಯನ್ನು ಪರಿಹಾರವಾಗಿ ನೀಡಲು ಯೋಚಿಸಲಾಗಿದೆ. ಇದರ ಇತ್ಯರ್ಥಕ್ಕಾಗಿ ರಾಜ್ಯ ಸರ್ಕಾರವನ್ನು ಸಂಪರ್ಕ ಮಾಡಿದೆ. ಶಿವರಾಮ ಕಾರಂತ ಬಡಾವಣೆ ಸೇರಿದಮತೆ ಹಲವು ಬಡಾವಣೆಗಳ ನಿರ್ಮಾಣಕ್ಕಾಗಿ ಬಿಡಿಎ ರೈತರ ಭೂಮಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮ ಜಮೀನಿನ ಮೇಲೆ ಹೆಚ್ಚಿನ ಪರಿಹಾರ ಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕೆಲ ಪ್ರಕರಣಗಳು ಹಲವು ದಶಕಗಳಿಂದ ಇತ್ಯರ್ಥವಾಗದೇ ಹಾಗೆ ಉಳಿದಿವೆ.