ಬೆಂಗಳೂರು ಜುಲೈ 06: ಕೇಂದ್ರ ಸರ್ಕಾರದ ‘ವಿದ್ಯುತ್ ತಿದ್ದುಪಡಿ ಮಸೂದೆ 2022’ ಅನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ವಿದ್ಯುತ್ ಸುಧಾರಣೆಗಳ ಸಮಾವೇಶದಲ್ಲಿ ಕುರಿತ ಸಿಪಿಎಂ ಒತ್ತಾಯಿಸಲಾಯಿತು. ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿರುವ ವಿದ್ಯುತ್ ನೀತಿ ಅತ್ಯಂತ ಜನವಿರೋಧಿಯಾಗಿದೆ. ಈ ವಿದ್ಯುತ್ ತಿದ್ದುಪಡಿ ಮಸೂದೆ ಖಾಸಗಿ ಬಂಡವಾಳದಾರರ ಕೈಯಲ್ಲಿ ದೇಶದ ಭವಿಷ್ಯವನ್ನು ಇಡುತ್ತದೆ. ವಿದ್ಯುತ್ ದರಗಳನ್ನು ವಿಪರೀತವಾಗಿ ಹೆಚ್ಚುಸುವ ಈ ನೀತಿಗಳನ್ನು ಸೋಲಿಸಬೇಕು’ ಎಂದು ನಿರ್ಣಯ ಕೈಗೊಳ್ಳಲಾಯಿತು.
ಪ್ರಕಟಿಸಿರುವ ರಾಜ್ಯದ ಸರ್ಕಾರ, ಅದರ ನೆಪದಲ್ಲಿ ವಿದ್ಯುತ್ ರಂಗದ ಖಾಸಗೀಕರಣಕ್ಕೆ ಪ್ರಯತ್ನ ಮಾಡಬಾರದು. ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯಗಳು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವುದಿಲ್ಲ ಎಂದು ನಿರ್ಣಯ ಕೈಗೊಂಡಿವೆ. ಅದೇ ರೀತಿ ರಾಜ್ಯದಲ್ಲೂ ಜಾರಿ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿ- ಸಲಾಯಿತು. ‘ವಿದ್ಯುತ್ ರಂಗದ ನಷ್ಟವನ್ನು ಕಡಿಮೆ ಮಾಡಲು ಘಟಕಗಳ ಸ್ಥಾಪನಾ ವೆಚ್ಚ, ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಇತ್ಯಾದಿಗಳ ವೆಚ್ಚ, ವಿದೇಶ ವಿನಿಮಯದ ಹೊರಹರಿವು, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳನ್ನು ಕಡಿಮೆ ಮಾಡಬೇಕು. ಲಭ್ಯವಿರುವ ತಾಂತ್ರಿಕ ಮತ್ತು ಆರ್ಥಿಕ ಅನುಕೂಲಗಳನ್ನು ಪಡೆಯಬೇಕು.
ವಿದ್ಯುತ್ ಸುಧಾರಣೆಗಳ ಸಮಾವೇಶದಲ್ಲಿ ಈ ಕುರಿತು ಸಿಪಿಎಂ ಗೆ ಒತ್ತಾಯಿಸಲಾಯಿತು:-
ನೀತಿ ಭ್ರಷ್ಟಾಚಾರವನ್ನು ಪೂರ್ಣವಾಗಿ ತಡೆಗಟ್ಟಬೇಕು’ ಎಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು. ಮುಖಂಡರಾದ ಆಲ್ ಇಂಡಿಯಾ ಫೆಡರೇಷನ್ ಆಫ್ ಎಲೆಕ್ಷಿಸಿಟಿ ಎಂಪ್ಲಾಯಿಸ್ ನಮಹಮ್ಮದ್ ಸಮೀವುಲ್ಲಾ ಸಮಾವೇಶ ಉದ್ಘಾಟಿಸಿ ದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮೀನಾಕ್ಷಿ ಸುಂದರಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಎಂ ಕಾರ್ಯದರ್ಶಿ ರಾಜ್ಯ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಅರಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಪ್ರಕಾಶ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎನ್.ಮಂಜುನಾಥ್, ಪ್ರತಾಪ್ ಸಿಂಹ, ವೆಂಕಟಾಚಲಯ್ಯ,ಚಂದ್ರತೇಜಸ್ವಿ ಇದ್ದರು.