22.9 C
Bengaluru
Friday, July 5, 2024

ಸರ್ಕಾರಿ ನೌಕರರು ಓದಲೇಬೇಕಾದ ಉಪಯುಕ್ತ ಮಾಹಿತಿ

ಬೆಂಗಳೂರು: ಜೀವ ವಿಮಾ ಪಾಲಿಸಿಗಳ ಅವಧಿ ಪೂರೈಕೆ ಅವಧಿಯನ್ನುಹೆಚ್ಚಿಸುವಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ರಾಜ್ಯ ಆರ್ಥಿಕ ಇಲಾಖೆಗೆ ಪತ್ರ ಬರೆದಿದೆ.

ಸರ್ಕಾರಿ ನೌಕರರ ಜೀವನ ಭದ್ರತೆಗಾಗಿ ಜೀವವಿಮೆ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ, ಈ ಸೌಲಭ್ಯ ಸರ್ಕಾರಿ ನೌಕರನ ವಯಸ್ಸು 55 ವರ್ಷಗಳಿಗೆ ಸೀಮಿತಗೊಳಿಸಿದಂತೆ ಇದೆ. ಆದರೆ, ಸರ್ಕಾರ ಸದ್ಯ ನೌಕರರ ನಿವೃತ್ತಿ ವಯೋಮಾನವನ್ನು 60 ವರ್ಷಗಳಿಗೆ ಹೆಚ್ಚಳ ಮಾಡಿದೆ. ಇದರಿಂದ ನಿವೃತ್ತಿಹಂತದ ನೌಕರರು ವಿಮಯಿಂದ ವಂಚಿತರಾಗುತ್ತಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ.

ಆರಂಭದಲ್ಲಿ ಜೀವವಿಮೆ ಸೌಲಭ್ಯ ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ ಇತ್ತು. ಆದರೆ, 1959ರಲ್ಲಿ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಜೀವವಿಮೆ ಸೌಲಭ್ಯ ಎಂದು ಕಡ್ಡಾಯಗೊಳಿಸಲಾಯಿತು. ಆಗ ನಿವೃತ್ತಿ ವಯೋಮಾನ 55 ವರ್ಷ ಎಂದು ನಿಗದಿಪಡಿ ಅಲ್ಲಿವರೆಗೆ ಮಾತ್ರ ಜೀವವಿಮೆ ಸೌಲಭ್ಯ ನೀಡಲಾಗುತ್ತಿತ್ತು. ಆದರೆ, 1984ರಲ್ಲಿ ರಾಜ್ಯ ಸರ್ಕಾರವು ನಿವೃತ್ತಿ ವಯಸ್ಸನ್ನು 58 ವರ್ಷಗಳಿಗೆ ಹೆಚ್ಚಿಸಿತು. ಬಳಿಕ 2008ರಲ್ಲಿ ನಿವೃತ್ತಿ ವಯೋಮಾನ 60 ವರ್ಷಗಳಿಗೆ ಹೆಚ್ಚಳ ಮಾಡಲಾಯಿತು.

ಆದರೆ, ವಿಮಾ ಸೌಲಭ್ಯ ಇದುವರೆಗೂ 55 ವರ್ಷಗಳಿಗೆ ಮಾತ್ರ ನೀಡಲಾಗುತ್ತಿದೆ. ಹೆಚ್ಚುವರಿ 5 ವರ್ಷಗಳ ಸೇವಾವಧಿಗೆ ನೌಕರರು ವಿಮೆಯಿಂದ ವಂಚಿತರಾಗುತ್ತಿದ್ದಾರೆ. ಈ ಐದು ವರ್ಷಗಳ ಅವಧಿಯಲ್ಲಿ ಸರ್ಕಾರಿ ನೌಕರರು ಅಕಾಲಿಕ ಮರಣ ಹೊಂದಿದರೆ ಅವರ ಅವಲಂಬಿತ ಕುಟುಂಬಕ್ಕೆ ದೊರೆಯುತ್ತಿದ್ದ ಆರ್ಥಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ವಿಮಾ ಸೌಲಭ್ಯವನ್ನೂ ಸಹ 55 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ.

ಸಲಹೆಗಳು:
* ಚಾಲ್ತಿಯಲ್ಲಿರುವ ಪಾಲಿಸಿಗಳ ಅವಧಿಯನ್ನು ವಿಸ್ತರಿಸುವ ಮೊದಲು ವಿಮಾದಾರರ ಲಿಖಿತ ಒಪ್ಪಿಗೆ ಪಡೆದು ವಿಸ್ತರಿಸಬೇಕು

* ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಪಾವತಿಸುತ್ತಿರುವ ಪ್ರಸ್ತುತ ವಿಮಾ ಕಂತಿನ ದರದಲ್ಲೇ 60 ವರ್ಷದ ವರೆಗೂ ಪಾವತಿ ಮಾಡುವುದು. ಆದರೆ, ವಿಮೆ ಮೊತ್ತನ್ನು ಹೆಚ್ಚಿಸಲಾಗುವುದು. ವಿಮಾ ಕಂತಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

* ಇನ್ನು ಮುಂದೆ ನೀಡುವ ಹೊಸ ಪಾಲಿಸಿಗಳನ್ನುವಿಮಾದಾರರ 60 ವರ್ಷಗಳಿಗೆ ಅನ್ವಯವಾಗುವಂತೆ ನೀಡುವುದು.

* ಹೆಚ್ಚಿಸಿದ ವಿಮಾ ಮೊತ್ತಕ್ಕೆ ಲಾಭಾಂಶವನ್ನುಉತ್ತರಾನ್ವಯವಾಗಿ ನೀಡಲಾಗುವುದು. ಪೂರ್ವಾನ್ವಯವಾಗಿ ನೀಡಲಾಗುವುದಿಲ್ಲ ಎಂದು ವಿಮಾ ಇಲಾಖೆ ನಿರ್ದೇಶಕರು ಸರ್ಕಾರಕ್ಕೆ ವಿವರಿಸಿದ್ದಾರೆ.

Related News

spot_img

Revenue Alerts

spot_img

News

spot_img