25.8 C
Bengaluru
Thursday, February 29, 2024

ವಿದ್ಯಾರ್ಥಿಗೆ ವರ್ಗಾವಣೆ ಪತ್ರ ಕೊಡಲು ಲಂಚಕ್ಕೆ ಬೇಡಿಕೆ: ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ

ಬೆಂಗಳೂರು;ವರ್ಗಾವಣೆ ಪತ್ರ(TC) 9 ನೇ ತರಗತಿಯ ವಿದ್ಯಾರ್ಥಿಯೊಬ್ಬನ ಪೋಷಕರಿಗೆ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯ ಪ್ರಿನ್ಸಿಪಾಲ್ ವಿ. ನಾರಾಯಣ ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಸವೇಶ್ವರ ಪ್ರೌಢಶಾಲೆ ಅನುದಾನಿತ ಪ್ರೌಢಶಾಲೆಯಾಗಿದ್ದು, ವಿದ್ಯಾರ್ಥಿಯೊಬ್ಬರ ತಾಯಿ ದಿವ್ಯಾ ಅವರು ಪ್ರಿನ್ಸಿಪಲ್ ವಿರುದ್ಧ ದೂರು ನೀಡಿದ್ದರು.ಬುಧವಾರ ನಾರಾಯಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಡಿಎಸ್‌ಪಿ ಬಸವರಾಜ ಮಗದುಮ್ ನೇತೃತ್ವದಲ್ಲಿ ಬುಧವಾರ ದಾಳಿ ನಡೆದಿದೆ, ಎಂದು ಲೋಕಾಯುಕ್ತ ಕಚೇರಿ ಮಾಹಿತಿ ನೀಡಿದೆ.

Related News

spot_img

Revenue Alerts

spot_img

News

spot_img