22.2 C
Bengaluru
Wednesday, December 18, 2024

40 ಸಾವಿರ ಲಂಚಕ್ಕೆ ಬೇಡಿಕೆ;ಭೂಮಾಪನ ಇಲಾಖೆಯ ಮೇಲ್ವಿಚಾರಕ ಲೋಕಾ ಬಲೆಗೆ

#Demand #40 thousand bribe #Land survey #department #supervisor #loka trap

ದಾವಣಗೆರೆ;ಕೃಷಿ ಭೂಮಿಯ ಚೆಕ್‌ ಬಂದಿ, ಪೋಡಿ ಸಂಖ್ಯೆ ಸರಿಪಡಿಸಲು ಮುಂಗಡವಾಗಿ ಐದು ಸಾವಿರ ರೂಪಾಯಿ ಲಂಚ(Bribe) ಪಡೆಯುತ್ತಿದ್ದ ಡಿಡಿಎಲ್‌ಆರ್(DDLR) ಇಲಾಖೆಯ ಕಚೇರಿ ವ್ಯವಸ್ಥಾಪಕರನ್ನು ಗುರುವಾರ ಲೋಕಾಯುಕ್ತ(Lokayukta) ಪೊಲೀಸರು ಬಂಧಿಸಿದ್ದಾರೆ.ಡಿಡಿಎಲ್‌ಆರ್(DDLR) ಇಲಾಖೆಯ ಕಚೇರಿ ವ್ಯವಸ್ಥಾಪಕ ಕೇಶವಮೂರ್ತಿ ಲೋಕಾಯುಕ್ತರ(Lokayukta) ಬಲೆಗೆ ಬಿದ್ದ ಅಧಿಕಾರಿ.ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಪಿ.ಜಿ.ಮುನಿಯಪ್ಪ ತಮ್ಮ ಸೊಸೆಯ ತಾಯಿ ಕೆ.ಎಸ್.ಮೀನಾಕ್ಷಮ್ಯ ಅವರಿಗೆ ಸೇರಿದ ಜಗಳೂರು ತಾಲ್ಲೂಕು ಪಲ್ಲಾಗಟ್ಟಿ ಗ್ರಾಮದ ರಿ.ಸ.ನಂ. 65-7ರಲ್ಲಿ 12 ಗುಂಟೆ ಜಮೀನಿನ ಚೆಕ್ ಬಂದಿ ಮತ್ತು ಪೋಡಿ ನಂಬರ್ ಆದಲು, ಬದಲಾಗಿರುವುದನ್ನು ಸರಿಪಡಿಸಿಕೊಡಲು ಅರ್ಜಿ ಸಲ್ಲಿಸಿದ್ದರು.ಇದನ್ನು ಮಾಡಿಕೊಡಲು ಕೇಶವಮೂರ್ತಿ ರೂ. 40 ಸಾವಿರ ಬೇಡಿಕೆ ಇಟ್ಟಿದ್ದರು,ಕೊನೆಗೆ ರೂ. 30 ಸಾವಿರ ನೀಡುವಂತೆ ಹೇಳಿದ. ಈ ಬಗ್ಗೆ ಮುನಿಯಪ್ಪ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ಗುರುವಾರ ಸಂಜೆ ಕೇಶವಮೂರ್ತಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಮುಂಗಡವಾಗಿ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೇಶವಮೂರ್ತಿಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ತನಿಖೆ(Investigation) ನಡೆಸುತ್ತಿದ್ದಾರೆ,ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲ ಪೂರೆ, ವೃತ್ತ ನಿರೀಕ್ಷಕರಾದ ಎಚ್.ಎಸ್. ರಾಷ್ಟ್ರಪತಿ, ಸಿ. ಮಧುಸೂದನ್, ಪ್ರಭು ಬಿ. ಸೂರಿನ, ಸಿಬ್ಬಂದಿಗಳಾದ ವೀರೇಶಯ್ಯ, ಧನರಾಜ್, ಗಣೇಶ್, ಕೋಟಿನಾಯ್ಕ, ಕೃಷ್ಣ ನಾಯ್ಕ, ಬಸವರಾಜ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

Related News

spot_img

Revenue Alerts

spot_img

News

spot_img