Sign in
  • Home
  • RF-English
  • News
  • Housing Projects
  • Vastu
  • Home Decor
  • Revenuepedia
  • Finance
  • Revenue Alerts
  • ₹ – Services
Sign in
Welcome!Log into your account
Forgot your password?
Password recovery
Recover your password
Search
Facebook
Instagram
Telegram
Twitter
WhatsApp
Youtube
Facebook
Instagram
Telegram
Twitter
WhatsApp
Youtube
Facebook
Telegram
Twitter
WhatsApp
Youtube
Home Revenuepedia ಆರ್ಬಿಐನಿಂದ ₹2,000 ನೋಟುಗಳ ವಿನಿಮಯವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್.
  • Revenuepedia

ಆರ್ಬಿಐನಿಂದ ₹2,000 ನೋಟುಗಳ ವಿನಿಮಯವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್.

By
RF Desk
-
May 29, 2023
0
186
Facebook
Telegram
WhatsApp

    ಯಾವುದೇ ಗುರುತಿನ ಪುರಾವೆ ಇಲ್ಲದೆ ₹ 2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

    ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ತಿರಸ್ಕರಿಸಿತು.

    ಯಾವುದೇ ಮನವಿ ನಮೂನೆ (ರಿಕ್ವಿಸಿಷನ್ ಸ್ಲಿಪ್) ಮತ್ತು ಗುರುತಿನ ಪುರಾವೆಗಳನ್ನು ಪಡೆಯದೆ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿರುವುದು ಮನಸೋಇಚ್ಛೆಯಿಂದ ಕೂಡಿದ್ದು ಅತಾರ್ಕಿಕವಾದುದಾಗಿದೆ ಎಂದು ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಯಲ್ಲಿ ವಾದಿಸಲಾಗಿತ್ತು.

    “ಚಲಾವಣೆಯಲ್ಲಿರುವ ₹ 2000 ಮುಖಬೆಲೆಯ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯ ₹ 6.73 ಲಕ್ಷ ಕೋಟಿಯಿಂದ ₹ 3.62 ಲಕ್ಷ ಕೋಟಿಗೆ ಕುಸಿದಿದೆ ಎಂದು ಆರ್ಬಿಐ ಪ್ಯಾರಾ-2 ರಲ್ಲಿ ಒಪ್ಪಿಕೊಂಡಿದೆ ಎಂದು ಹೇಳುವುದು ಅನಿವಾರ್ಯವಾಗಿದೆ. ಇದರಲ್ಲಿ ₹ 3.11 ಲಕ್ಷ ಕೋಟಿ ಮೊತ್ತ ವ್ಯಕ್ತಿಗಳ ಲಾಕರ್ನಲ್ಲಿ ಉಳಿದಿರಬಹುದು ಇಲ್ಲವೇ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಡ್ರಗ್ ಸ್ಮಗ್ಲರ್ಗಳು, ಗಣಿ ಮಾಫಿಯಾಗಳು ಮತ್ತು ಭ್ರಷ್ಟರ ಬಳಿ ಸಂಗ್ರಹಗೊಂಡಿರಬುದು” ಎಂದು ಅರ್ಜಿ ಆತಂಕ ವ್ಯಕ್ತಪಡಿಸಿತ್ತು.

    ಉಪಾಧ್ಯಾಯ ಅವರು, ಇಡಿಯಾಗಿ ಆರ್ಬಿಐನ ಅಧಿಸೂಚನೆ ಪ್ರಶ್ನಿಸಿರಲಿಲ್ಲ. ಬದಲಿಗೆ ಯಾವುದೇ ಗುರುತಿನ ಪುರಾವೆಗಳಿಲ್ಲದೆ ಕರೆನ್ಸಿ ವಿನಿಮಯಕ್ಕೆ ಅವಕಾಶ ನೀಡುವುದಕ್ಕೆ ಇರುವ ನಿಬಂಧನೆ ಉಲ್ಲಂಘಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

    “ಮೊದಲ ಬಾರಿಗೆ ಜನರು ಹಣದೊಂದಿಗೆ ಬ್ಯಾಂಕ್ಗಳಿಗೆ ಬಂದು ಅದನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ, (ಇದರಿಂದ) ಪಾತಕಿಗಳು ಮತ್ತು ದುಷ್ಟಕೂಟಗಳು ಅವರ ಹಿಂಬಾಲಕರು ತಮ್ಮ ಹಣ ಬದಲಾಯಿಸಿಕೊಳ್ಳಬಹುದಾಗಿದೆ” ಎಂದು ಅವರು ಆರೋಪಿಸಿದ್ದರು.

    ಮೇ 19ರಂದು ₹ 2000 ನೋಟುಗಳನ್ನು ಹಿಂತೆಗೆದುಕೊಳ್ಳುವ ಸೂಚನೆ ನೀಡಿದ್ದರೂ ಕರೆನ್ಸಿ ಕಾನೂನುಬದ್ಧವಾಗಿ ಮುಂದುವರಿಯಲಿದೆ ಎಂದು ಆರ್ಬಿಐ ಹೇಳಿತ್ತು. ತಮ್ಮ ಬ್ಯಾಂಕ್ ಖಾತೆಗಳಿಗೆ ₹ 2000 ಮುಖಬೆಲೆಯ ನೋಟುಗಳನ್ನು ಜಮಾ ಮಾಡಲು ಇಲ್ಲವೇ ಬ್ಯಾಂಕ್ ಶಾಖೆಗಳಲ್ಲಿ ಇತರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಆರ್ಬಿಐ ಜನರಿಗೆ ಸಲಹೆ ನೀಡಿತ್ತು.

    ಈ ಮಧ್ಯೆ ರೂ.2,000 ನೋಟುಗಳ ಹಿಂಪಡೆಯುವಿಕೆಯು ಆರ್ಬಿಐನ ಶಾಸನಬದ್ಧ ಕ್ರಮವಾಗಿದ್ದು ಇದು ನೋಟು ಅಮಾನ್ಯೀಕರಣವಲ್ಲ ಎಂದು ಕೂಡ ಆರ್ಬಿಐ ತಿಳಿಸಿತ್ತು.

    • TAGS
    • 2000 notes
    • 2000 ನೋಟುಗಳು
    • Ban
    • bank account
    • delhi
    • Delhi High Court
    • demonetisation
    • ID proof
    • rbi
    • reserve bank of india
    • Revenuefacts
    • revenuefacts original stories. ದೆಹಲಿ
    • revenuepedia
    • transactions
    • ಆರ್‌ಬಿಐ
    • ದೆಹಲಿ ಹೈಕೋರ್ಟ್
    • ನಿಷೇಧ
    • ನೋಟು ಅಮಾನ್ಯೀಕರಣ
    • ಪುರಾವೆ
    • ಬ್ಯಾಂಕ್ ಖಾತೆ
    • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
    • ರೆವೆನ್ಯೂ ಪೀಡಿಯಾ.
    • ರೆವೆನ್ಯೂ ಫ್ಯಾಕ್ಟ್ಸ್
    • ವಹಿವಾಟು
    Share
    Facebook
    Telegram
    WhatsApp
      Previous articleಪತಿಗಿಂತ ಪತ್ನಿಗೆ ಹೆಚ್ಚು ಸಂಪಾದನೆಯಿದ್ದರೆ ಜೀವನಾಂಶವಿಲ್ಲ; ಸೆಷನ್ಸ್ ಕೋರ್ಟ್ ಆದೇಶ !
      Next articleಸಚಿವ ಸ್ಥಾನ ವಂಚಿತ ಶಾಸಕರಿಂದ ಶುರುವಾಗಿದೆ ಲಾಬಿ, ಯಾರಾ ಪಾಲಾಗಲಿದೆ ಬಿಡಿಎ ಚೇರ್ಮನ್ ಹುದ್ದೆ?
      RF Desk
      RF Desk
      http://www.revenuefacts.com
      Facebook Koo Twitter Website

      RELATED ARTICLESMORE FROM AUTHOR

      RERA’ ಮೇಲೆ GST ವಿನಾಯಿತಿ ಶೀಘ್ರದಲ್ಲೇ ಸಿಗಲಿದೆ ಸ್ಪಷ್ಟನೆ

      RTC-Aadhaar Link: ಪಹಣಿಗೆ ಆಧಾರ್ ಲಿಂಕ್ ಮಾಡದಿದ್ದರೆ ಸಿಗೋದಿಲ್ಲ ಸರ್ಕಾರದ ಸೌಲಭ್ಯ

      ಬಡವರಿಗಾಗಿ ಮುಂದಿನ 5 ವರ್ಷದಲ್ಲಿ 2 ಕೋಟಿ ವಸತಿ ಯೋಜನೆ ನಿರ್ಮಾಣ;ನಿರ್ಮಲಾ ಸೀತಾರಾಮನ್

      © 2022 - Revenue Facts. All Rights Reserved.