ಜನರಲ್ ಪವರ್ ಆಫ್ ಅಟಾರ್ನಿ ಎಂದರೆ ಜಿಪಿಎ ಎಂಬುದು ಈಗಾಗಲೇ ಬಹುತೇಕ ಜನರಿಗೆ ತಿಳಿದಿದೆ. ಒಬ್ಬ ವ್ಯಕ್ತಿ ತನ್ನ ಆಸ್ತಿಯ ಮೇಲಿನ ಅಧಿಕಾರವನ್ನು ಅನ್ಯ ಕಾರಣಕ್ಕೆ ಇನ್ನೊಬ್ಬರಿಗೆ ಕೊಡುವ ಅಧಿಕಾರವೇ ಜನರಲ್ ಪವರ್ ಆಫ್ ಅಟಾರ್ನಿ ಎಂದು ಕರೆಯುತ್ತೇವೆ. ಕನ್ನಡದಲ್ಲಿ ಈ ಜಿಪಿಎಗೆ ಏನಂತಾರೆ. ಪವರ್ ಆಫ್ ಅಟಾರ್ನಿ ಬಗ್ಗೆ ಏನೆಲ್ಲಾ ನಿಯಮ ಗೊತ್ತಿರಬೇಕು. ಪವರ್ ಆಫ್ ಅಟಾರ್ನಿ ಮಾದರಿಯಲ್ಲಿ ಸ್ಪೆಷಲ್ ಪವರ್ ಆಫ್ ಅಟಾರ್ನಿ ಇದೆ. ಅದನ್ನು ಯಾವಾಗ ಬಳಿಸಬಹುದು ? ಪ್ರತಿಯೊಬ್ಬರ ಜೀವನದ ಭಾಗವಾಗಿರುವ ಈ ಅಟಾರ್ನಿಗಳ ಬಗ್ಗೆ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.
ಯಾವುದೇ ಒಬ್ಬ ವ್ಯಕ್ತಿ ಸರ್ಕಾರಿ ಕಚೇರಿಗಳಿಗಾಗಲೀ ಅಥವಾ ಬೇರೆ ಎಲ್ಲೂ ಹೋಗಲು ಸಾಧ್ಯವಾಗದೇ ಇದ್ದರೆ, ಅನಾರೋಗ್ಯಕ್ಕೆ ತುತ್ತಾಗಿದ್ದರೆ, ಇನ್ನಿತರೆ ಸಂದರ್ಭದಲ್ಲಿ ತನ್ನ ಪರವಾಗಿ ಬೇರೆಯವರು ಕೆಲಸಗಳನ್ನು ಮಾಡಲು ಅಧಿಕಾರ ನೀಡುವ ಪತ್ರವೇ ಜನರಲ್ ಪವರ್ ಆಫ್ ಅಟಾರ್ನಿ ಎಂದು ಕರೆಯುತ್ತೇವೆ. ಕನ್ನಡದಲ್ಲಿ ಇದನ್ನು ಮೌಕ್ತರ ನಾಮ ಎಂದು ಕರೆಯುತ್ತೇವೆ. ಒಬ್ಬ ವ್ಯಕ್ತಿಗ ಒಂದು ವಸ್ತು ಅಥವಾ ಆಸ್ತಿ ಮೇಲೆ ಇರುವ ಸಂಪೂರ್ಣ ಹಕ್ಕನ್ನು ಈ ಜನರಲ್ ಪವರ್ ಆಫ್ ಅಟಾರ್ನಿ ಮೂಲಕ ಹಸ್ತಾಂತಿರುಸುವ ದಾಖಲೆ ಪ್ರಮಾಣ ಪತ್ರ. ಇಲ್ಲಿ ಜಿಪಿಎ ಬರೆದುಕೊಡುವರನ್ನು ಪ್ರಿನ್ಸಿಪಾಲ್ ಎಂದು ಕರೆಯುತ್ತೇವೆ. ಬರೆಸಿಕೊಂಡವರನ್ನು ಅಟಾರ್ನಿ ಎಂಥಲೂ ಕರೆಯಲಾಗುತ್ತದೆ.
ಜಿಪಿಎ ನೋಂದಣಿ ಕಡ್ಡಾಯ:
ಆಸ್ತಿ ಅಭಿವೃದ್ಧಿ, ಆಸ್ತಿ ದಾಖಲೆ ಮಾರ್ಪಾಡು ಸಂದರ್ಭದಲ್ಲಿ ಸಾಮಾನ್ಯವಾಗಿ ಓಡಾಡಲು ಆಗದೇ ಇರುವ ವ್ಯಕ್ತಿ, ಮಾಡಿಕೊಡುವಂತಹ ವ್ಯಕ್ತಿಗೆ ಆಸ್ತಿ ಮೇಲಿನ ಸಂಪೂರ್ಣ ಹಕ್ಕನ್ನು ಜಿಪಿಎ ಮೂಲಕ ಹಸ್ತಾಂತರಿಸಲಾಗುತ್ತದೆ. ಯಾವುದೇ ಜನರಲ್ ಪವರ್ ಆಫ್ ಅಟಾರ್ನಿ ನೋಂದಣಿ ಕಚೇರಿಗಳಲ್ಲಿ ನೋಂದಣಿಯಾದರೆ ಶ್ರೇಷ್ಠವಾಗಿರುತ್ತದೆ. ಆ ದಾಖಲೆಗಳಿಗೆ ಕಾನೂನು ಮಾನ್ಯತೆ ಇರುತ್ತದೆ. ಪವರ್ ಆಫ್ ಅಟಾರ್ನಿಯನ್ನು ನೋಟರಿಯಲ್ಲಿ ದೃಢೀಕರಿಸಬೇಕು. ಇಲ್ಲವೇ ಎಂಬೆಸಿ ಕಾನ್ಸುಲೇಟ್ ಗಳಲ್ಲಿ ದೃಢೀಕರಿಸಬೇಕು. ಒಂದು ವೇಳೆ ಈ ಮೂರು ಕಡೆ ನೋಂದಣಿ ಆಗದಿದ್ದರೆ ಅ ಪವರ್ ಆಫ್ ಅಟಾರ್ನಿಗೆ ಏನೂ ಪವರ್ ಇರಲ್ಲ.
ಗೆಜೆಟೆಡ್ ಅಧಿಕಾರಿಗಳ ದೃಢೀಕೃತಕ್ಕೆ ಇರುವ ಮಾನ್ಯತೆ: ಸಾಮಾನ್ಯವಾಗಿ ಕೆಲವರು ಗೆಜೆಟೆಡ್ ಅಧಿಕಾರಿಗಳಿಂದ ಜಿಪಿಎಗಳನ್ನು ದೃಢೀಕರಿಸುತ್ತಾರೆ. ಗೆಜೆಟೆಡ್ ಅಧಿಕಾರಿಗಳು ದೃಢೀರಿಸಿದ್ರೂ, ದೃಢೀಕರಿಸದಿದ್ದರೂ ಪವರ್ ಆಫ್ ಅಟಾರ್ನಿ ಪಡೆದ ವ್ಯಕ್ತಿಗೆ ಆ ಪತ್ರದ ಮೇಲೆ ಕೆಲಸ ಮಾಡುವ ಅಧಿಕಾರ ಇರುವುದಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ, ಮೂಲ ಪ್ರತಿಗಳ ಜೆರಾಕ್ಸ್ ಪ್ರತಿಗಳನ್ನು ದೃಢೀಕರಣ ಮಾಡಲಷ್ಟೇ ಪರಿಗಣಿಸುತ್ತಾರೆ.
ಜನರಲ್ ಪವರ್ ಆಫ್ ಅಟಾರ್ನಿ vs ಸ್ಪೆಷಲ್ ಪವರ್ ಆಫ್ ಅಟಾರ್ನಿ:
ಸಾಮಾನ್ಯವಾಗಿ ಜನರಿಗೆ ಜಿಪಿಎ ಬಗ್ಗೆ ಗೊತ್ತಿರುತ್ತದೆ. ಜಿಪಿಎ ನಷ್ಟೇ ಮಹತ್ವವಾದ ಸ್ಪೆಷಲ್ ಪವರ್ ಆಫ್ ಅಟಾರ್ನಿ ಪತ್ರಕ್ಕೂ ಕಾನೂನಿನಲ್ಲಿ ಮಾನ್ಯತೆ ಇದೆ.
ಸಾಮಾನ್ಯ ಅಧಿಕಾರ ಪತ್ರ ಎಲ್ಲಾ ಅಧಿಕಾರ ಪತ್ರಗಳನ್ನು ಒಳಗೊಂಡಿರುತ್ತದೆ. ಆದರೆ ವಿಶೇಷ ಅಧಿಕಾರ ಪತ್ರವು ಒಂದೇ ಒಂದು ವಿಶೇಷ ಅಧಿಕಾರವನ್ನು ಹೊಂದಿರುತ್ತದೆ. ಉದಾಹರಣೆಗೆ, ಒಂದು ಜಮೀನು ಭೂ ಪರಿವರ್ತನೆ ಮಾಡಲು ಅಧಿಕಾರ ಸೀಮಿತಗೊಳಿಸಿ ವ್ಯಕ್ತಿಯೊಬ್ಬ ತನ್ನ ಅಧಿಕಾರವನ್ನು ಇನ್ನೊಬ್ಬ ವ್ಯಕ್ತಿಗೆ ಹಸ್ತಾಂತರ ಮಾಡುವ ಪತ್ರವೇ ವಿಶೇಷ ಅಧಿಕಾರ ಪ್ರಮಾಣ ಪತ್ರ.
ಜಿಪಿಎಗೆ ಮುದ್ರಾಂಕ ಶುಲ್ಕ ಎಷ್ಟು?
ಸಾಮಾನ್ಯ ಅಧಿಕಾರ ಪತ್ರಕ್ಕೆ, ಸ್ವತ್ತಿನ ಕ್ರಯ ಮಾಡಲು ಅಧಿಕಾರ ಕೊಟ್ಟಲ್ಲಿ ಮಾತ್ರ ಆ ಸ್ವತ್ತಿನ ಮೌಲ್ಯದ ಮೇಲೆ ಶೇ. 05 ರಷ್ಟು ಮುದ್ರಾಂಕ ಶುಲ್ಕವನ್ನು ಕಟ್ಟಬೇಕು. ಅದನ್ನು ಹೊರತು ಪಡಿಸಿ ಬೇರೆ ಎಲ್ಲಾ ಅಧಿಕಾರಗಳಿಗೆ ಕೇವಲ ಎರಡು ನೂರು ರೂಪಾಯಿ ಮಾತ್ರ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು. ಬಳಿಕ ಇದನ್ನು ಉಪ ನೋಂದಣಿ ಕಚೇರಿಗಳಲ್ಲಿ ಅಥವಾ ಭಾರತ ಸರ್ಕರದ ಅಧಿಕೃತ ಪರವಾನಗಿ ಹೊಂದಿರುವ ನೋಟರಿಗಳಲ್ಲಿ ದೃಢೀಕರಿಸಬೇಕು.
ವಿಶೇಷ ಅಧಿಕಾರ ಪತ್ರ: special power of Auttorny: ವಿಶೇಷ ಅಧಿಕಾರ ಪತ್ರಕ್ಕೆ ಎರಡು ನೂರು ಮುದ್ರಾಂಕ ಶುಲ್ಕ ಕಟ್ಟಬೇಕು. ತದನಂತರ ಇದನ್ನು ಕಡ್ಡಾಯವಾಗಿ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಬೇಕು. ಆ ಬಳಿಕ ಉಪ ನೋಂದಣಿ ಕಚೇರಿಗಳಲ್ಲಿ ರಿಜಿಸ್ಟ್ರೇಷನ್, ಅಥೆಂಟಿಕೇಷನ್, ಕಡ್ಡಾಯವಾಗಿ ಮಾಡಲೇಬೇಕು.
ವಿದೇಶ ಪ್ರಜೆಗಳು ಜಿಪಿಎ ಮಾಡಿಸಲು ಬೇರೆ ನಿಯಮ: ಬೇರೆ ದೇಶಗಳಲ್ಲಿ ವಾಸಿಸುವ ಪ್ರಜೆಗಳು ನಮ್ಮ ದೇಶದಲ್ಲಿ ಇರುವರ ಪರವಾಗಿ ಅಧಿಕಾರ ಚಲಾಯಿಸುವ ಸಲುವಾಗಿ ಪವರ್ ಆಫ್ ಅಟಾರ್ನಿ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಆದ್ರೆ ಇವುಗಳಲ್ಲಿ ಅವರು ಎಲ್ಲಿ ವಾಸ ಮಾಡಿರುತ್ತಾರೋ ಆಯಾ ದೇಶದ ನೋಟರಿ ಪಬ್ಲಿಕ್, ಎಂಬೆಸಿ ಇವರ ಎದುರು ದೃಢೀಕರಿಸಬೇಕಿರುತ್ತದೆ. ತದನಂತರ ಅದು ಭಾರತಕ್ಕೆ ಬಂದ ಮೇಲೆ 90 ದಿನಗಳ ಒಳಗಾಗಿ ಸಂಬಂಧಪಟ್ಟ ಮುದ್ರಾಂಕ ಉಪ ಆಯುಕ್ತರು ( ಅಪಮೌಲ್ಯ ತನಿಖಾಧಿಕಾರಿ) ಜಿಲ್ಲಾ ಉಪ ನೋಂದಣಾಧಿಕಾರಿ) ಇವರಲ್ಲಿ ನಿಗದಿತ ಮುದ್ರಾಂಕ ಶುಲ್ಕ ಪಾವತಿ ಮಾಡಿ ದೃಢಿಕರಿಸುವುದು ಕಡ್ಡಾಯವಾಗಿರುತ್ತದೆ.
ವಕಾಲತು ನಾಮ ಎಂದರೇನು ? : ಒಬ್ಬ ವ್ಯಕ್ತಿ ತನ್ನ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಲು ನ್ಯಾಯವಾದಿಗಳಿಗೆ ನೀಡುವ ಅಧಿಕಾರ ಪತ್ರ ಆಗಿರುತ್ತದೆ. ಇದು ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಮಾತ್ರ ಸೀಮಿತವಾಗುತ್ತದೆ. ವಿನಃ ಅನ್ಯ ಬಳಕೆ ಮಾಡುವಂತಿಲ್ಲ.