26.7 C
Bengaluru
Sunday, December 22, 2024

ದೀಪಾವಳಿ ಹಬ್ಬ: ರಿಯಾಲ್ಟಿ ಕ್ಷೇತ್ರದಲ್ಲಿ ವಸತಿ ಬೇಡಿಕೆ ಶೇಕಡ 30ರಷ್ಟು ಹೆಚ್ಚಳ

ಹಬ್ಬಗಳಿಗೂ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ. ಹಬ್ಬಗಳು ಹತ್ತಿರವಾಗುತ್ತಿದ್ದಂತೆ ರಿಯಾಲ್ಟಿ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗಳಾಗುತ್ತಿರುತ್ತವೆ. ಈಗ ದೀಪಾವಳಿ ಸಮಯ. ನೋಯ್ಡಾ, ಗಾಜಿಯಾಬಾದ್‌ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ವಸತಿ ಬೆಲೆಯು ಶೇಕಡ 30ರಷ್ಟು ಏರಿಕೆಯಾಗಿದೆಯಂತೆ.

ಈಗ ವರ್ಕ್‌ ಫ್ರಂ ಹೋಮ್‌ ಹಾಗೂ ಹೈಬ್ರೀಡ್‌ ಮಾಡೆಲ್‌ ಆಫ್‌ ವರ್ಕಿಂಗ್‌ (ಕಂಪೆನಿಯ ಉದ್ಯೋಗಿಗಳು ತಮ್ಮ ಅನುಕೂಲದ ಸ್ಥಳದಿಂದ, ದೂರದ ಪ್ರದೇಶಗಳಿಂದ ಕೆಲಸ ಮಾಡುವುದು) ಪರಿಕಲ್ಪನೆಗಳು ಹೆಚ್ಚಾಗುತ್ತಿರುವುದರಿಂದ ಗ್ರಾಹಕರು ಮನೆ ಖರೀದಿ ಸಂದರ್ಭದಲ್ಲಿ ವಿಶಾಲ ಸ್ಥಳ ಇರುವ, ಮನೆ ಹಾಗೂ ಕಚೇರಿ ಕೆಲಸಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಕೋಣೆಗಳು ಇರುವ ಐಷಾರಾಮಿ ಮನೆ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಕೊರೊನಾ ಸಾಂಕ್ರಾಮಿಕ ಕಾಲಕ್ಕೆ ಹೋಲಿಸಿದರೆ ಈಗ ನೋಯ್ಡಾ, ಗಾಜಿಯಾಬಾದ್‌ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಹಬ್ಬದ ಈ ಸೀಸನ್‌ನಲ್ಲಿ ರಿಯಲ್‌ ಎಸ್ಟೇಟ್ ಕ್ಷೇತ್ರಕ್ಕೆ ದಿಢೀರ್‌ ಬೇಡಿಕೆ ಏರಿದೆ. ವರದಿಗಳ ಪ್ರಕಾರ ದೀಪಾವಳಿ ಸಮಯದಲ್ಲಿ ಶೇಕಡ 30ರಷ್ಟು ಬೇಡಿಕೆ ಹೆಚ್ಚಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಕಂಡು ಬಂದ ಅತ್ಯಧಿಕ ಬೇಡಿಕೆ ಎನ್ನಲಾಗಿದ್ದು, ಕೊರೊನಾ ಸಾಂಕ್ರಾಮಿಕ ನಂತರ ಬದಲಾಗಿರುವ ಉದ್ಯೋಗದ ಪರಿಕಲ್ಪನೆಗಳು ಇದಕ್ಕೆ ಕಾರಣ ಎನ್ನಲಾಗಿದೆ.

ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಗಿರೀಶ್‌ ಕೌಸ್ಗಿ

‘ಈಗ ವರ್ಕ್‌ ಫ್ರಂ ಹೋಮ್‌ ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮನೆಗಳನ್ನು ರೂಪಿಸಲಾಗುತ್ತಿದೆ. ಜನರು ಮನೆಯಿಂದಲೇ ಕೆಲಸ ಮಾಡುವುದರಿಂದ ಅಂತಹ ಅನುಕೂಲಕರ ಮನೆಗಳ ಹುಡುಕಾಟ ನಡೆಸುತ್ತಾರೆ. ಅಂತಹ ಮನೆಗಳ ಬೇಡಿಕೆಯೇ ಹೆಚ್ಚಾಗಿದೆ ಎನ್ನುತ್ತಾರೆ ಕಟ್ಟಡ ಬಿಲ್ಡರ್‌ಗಳು. ಅಲ್ಲದೇ, ವರ್ಕ್‌ ಫ್ರಂ ಹೋಮ್‌ ಅವಧಿಯಲ್ಲಿ ಖಾಸಗಿತನ, ಏಕಾಂತ ಒದಗಿಸುವ ಮನೆಗಳ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ ಎನ್ನುತ್ತಾರೆ ಅವರು.

ಈ ಬಾರಿ ಹಬ್ಬಗಳ ಸಮಯದಲ್ಲಿ ಸಾಮಾನ್ಯ ಮನೆಗಳಿಗೆ ಬೇಡಿಕೆ ಹೆಚ್ಚಿಲ್ಲ ಎನ್ನಬಹುದು. ಐಷಾರಾಮಿ ಮನೆಗಳ ಬೇಡಿಕೆ ಏರಿಕೆಯಾಗಿದೆ. ಕೊರೊನಾ ಅವಧಿಯಲ್ಲಿ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಜನರು, ಈಗ ತಮ್ಮ ಬಜೆಟ್‌ನ್ನು ಕೊಂಚ ಹೆಚ್ಚಿಸಿಕೊಂಡು ಐಷಾರಾಮಿ ಮನೆಗಳನ್ನು ಖರೀದಿಸಲು ಹುಡುಕುತ್ತಿದ್ದಾರೆ. ಈ ಮುಂಚೆ 90 ಲಕ್ಷದಿಂದ 1 ಕೋಟಿ ಮೌಲ್ಯದ ಫ್ಲಾಟ್‌ಗಳನ್ನು ಕೊಳ್ಳಲು ಆಲೋಚಿಸುತ್ತಿದ್ದವರು ಈಗ ಮತ್ತಷ್ಟು ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಲು ಬಯಸುತ್ತಿದ್ದಾರೆ ಎನ್ನುತ್ತವೆ ಕಟ್ಟಡ ನಿರ್ಮಾಣ ಕಂಪೆನಿಗಳು.

ಈ ಹಬ್ಬದ ಋತುವಿನಲ್ಲಿ ವಸತಿ ಬೇಡಿಕೆ ಹೆಚ್ಚಾಗಿದ್ದರೆ, ಕಚೇರಿ ಹಾಗೂ ವಾಣಿಜ್ಯ ಸ್ಥಳದ ಬೇಡಿಕೆಯು ಸ್ಥಿರವಾಗಿದೆ. ಅದರಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ವರದಿಗಳು ತೋರಿಸುತ್ತಿವೆ.

Related News

spot_img

Revenue Alerts

spot_img

News

spot_img