17.9 C
Bengaluru
Thursday, January 23, 2025

ಡೆತ್ ವಿಲ್ ಕಾನೂನು: ಮರಣ ಶಾಸನ ರಹಸ್ಯವಾಗಿ ಇಡುವುದೇಗೆ ?

ಬೆಂಗಳೂರು, ಫೆ. 06:
ಯಾವುದೇ ಒಬ್ಬ ವ್ಯಕ್ತಿ ತನ್ನ ಮರಣಕ್ಕೂ ಮುನ್ನ ಆಸ್ತಿ, ಸ್ವತ್ತುಗಳು ಯಾರಿಗೆ ಸೇರಬೇಕು ಎಂಬುದರ ಬಗ್ಗೆ ರಹಸ್ಯವಾಗಿ ಬರೆದಿಡುವ ಪತ್ರವನ್ನು ಮರಣ ಶಾಸನ ಎಂದು ಕರೆಯುತ್ತೇವೆ. ಒಮ್ಮೆ ಬರೆದ ಮರಣ ಶಾಸನ ನೋಂದಣಿ ಮಾಡಿಸುವುದು ಹೇಗೆ ? ಮಾಡಿಸದೇ ಇದ್ದ ಮರಣ ಪತ್ರ ಕಾನೂನಾತ್ಮಕವಾಗಿ ಊರ್ಜಿತವಾಗುತ್ತದೆಯೇ ? ಡೆತ್ ವಿಲ್ ಒಮ್ಮೆ ಬರೆದ ಬಳಿಕ ರದ್ದು ಪಡಿಸಬಹುದೇ ? ಮರಣ ಪತ್ರ ಪ್ರಮಾಣ ಪತ್ರಕ್ಕೆ ಮುದ್ರಾಂಕ ಶುಲ್ಕ ಪಾವತಿಸಬೇಕಾ ? ಈ ಪ್ರಶ್ನೆಗಳು ಪ್ರತಿಯೊಬ್ಬರಲ್ಲೂ ಸಾಮಾನ್ಯ.ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ ಕೂಡ ಹೌದು.

ಮರಣ ಶಾಸನ ರದ್ದು ಪಡಿಸುವ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದರ ಸಮಗ್ರ ವಿವರವನ್ನು ಇಲ್ಲಿ ನೀಡಲಾಗಿದೆ. ಮರಣಶಾಸನ ಮಾಡಿದ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ಯಾವಾಗಲಾದರು ರದ್ದು ಪಡಿಸಬಹುದು. ರದ್ದು ಪಡಿಸಲು ನಿಗದಿತ ಮುದ್ರಾಂಕ ಶುಲ್ಕ ಪಾವತಿಸಬೇಕು. ಮುದ್ರಾಂಕ ಶುಲ್ಕ ಪಾವತಿಸದ ಹೊರತು ಅದರ ರದ್ಧತಿ ಆಗುವುದಿಲ್ಲ.

ಮರಣಶಾಸನ ಬರೆದಿಟ್ಟ ವ್ಯಕ್ತಿಯ ಮರಣಾ ನಂತರ ನೋಂದಣಿ ಮಾಡಿಸಬಹುದೇ?
ಒಬ್ಬ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಬರೆದಿಟ್ಟ ಮರಣ ಶಾಸನವನ್ನು ನೋಂದಣಿ ಮಾಡಿಸಬಹುದು. ಸದರಿ ಇಚ್ಛಾಪತ್ರದಂತೆ ಹಕ್ಕು ಸಾಧಿಸುವವರು ಮರಣಶಾಸನ ಬರೆದಿಟ್ಟ ವ್ಯಕ್ತಿಯು ಮರಣ ಹೊಂದಿದ ಬಗ್ಗೆ ದಾಖಲಾತಿ, ಸಾಕ್ಷಿಗಳು ಹಾಗೂ ದಸ್ತಾವೇಜು ಬರೆದವರು ಸಾಕ್ಷಿಗಳು ಹಾಗೂ ದಸ್ತಾವೇಜು ಬರೆದವರು ಸಾಕ್ಷಿ ಹಾಜರುಪಡಿಸಬೇಕು. ಮರಣಶಾಸನವನ್ನು ಸತ್ಯವಾಗಿ ಬರೆದುಕೊಡಲ್ಪಟ್ಟಿದೆ ಎಂಬುದು ಉಪ ನೋಂದಣಾಧಿಕಾರಿಯವರಿಗೆ ಮನಗಂಡರೆ ನೋಂದಾಯಿಸುತ್ತಾರೆ.

ನೋಂದಣಿಯಾದ ಮರಣಶಾಸನ (ಇಚ್ಛಾಪತ್ರ) ನಕಲನ್ನು ಯಾರಾದರೂ ಪಡೆಯಬಹುದೇ?
ಬರೆದು ನೋಂದಾಯಿಸಿದ ವ್ಯಕ್ತಿ ಬದುಕಿರುವರೆಗೆ ನಕಲನ್ನುಪಡೆಯುವ ಹಕ್ಕು ಅವರಿಗೆ ಮಾತ್ರ ಇರುತ್ತದೆ. ಅವರ ಮರಣಾ ನಂತರ ಮರಣ ಹೊಂದಿದ ಬಗ್ಗೆ ಸೂಕ್ತ ದೃಢೀಕೃತ ದಾಖಲೆಗಳನ್ನು ಒದಗಿಸಿ , ಯಾರಾದರೂ ಪಡೆಯಬಹುದು. ಅವರ ವಾರಸುದಾರರು ಸಹ ಪಡೆಯಬಹುದು. ಮರಣ ಶಾಸನವನ್ನು ಬರೆದ ವ್ಯಕ್ತಿ ಬದುಕಿರುವ ಜೀವಿತ ಕಾಲದಲ್ಲಿ ಯಾರೂ ಪಡೆಯಲು ಸಾಧ್ಯವಿಲ್ಲ.

ಡೆತ್ ವಿಲ್ ಸೀಕ್ರೇಟ್ ಅಗಿ ಇಡುವುದೇಗೆ ?
ಬರೆದ ಮರಣಶಾಸನ ಸೀಲು ಮಾಡಿದ ಲಕೋಟೆಯಲ್ಲಿ ಇಟ್ಟು ಜಿಲ್ಲಾ ನೋಂದಣಾಧೀಕಾರಿಯವರ ಕಛೇರಿಯಲ್ಲಿ ಠೇವಣಿ ಮಾಡಬಹುದು . ಠೇವಣಿ ಮಾಡಲು ನಿಗದಿಸಿದ ಹಣ ಪಾವತಿಸಬೇಕಾಗುತ್ತದೆ. ಹೀಗೆ ಠೇವಣಿ ಮಾಡಿದ ವ್ಯಕ್ತಿ ಅಥವಾ ಅವರಿಂದ ಸೂಕ್ತ ಅಧಿಕಾರ ಪಡೆಯಲು ಅವಕಾಶ ಠೇವಣಿ ಹಿಂದಕ್ಕೆ ಪಡೆಯಲು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಒಮ್ಮೆ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಠೇವಣಿ ಇಟ್ಟ ಮರಣ ಶಾಸನವನ್ನು ಬರೆದ ವ್ಯಕ್ತಿಯ ಮೃತಪಡುವ ವರೆಗೂ ಅನ್ಯರು ನೋಡಲಾಗದು. ಇಚ್ಛಿಸಿದರೆ ಬರೆದ ವ್ಯಕ್ತಿಮಾತ್ರ ಪಡೆಯಬಹುದು. ಅಲ್ಲಿಯ ವರೆಗೂ ಇದನ್ನು ಗೌಪ್ಯವಾಗಿ ಇಡಬಹುದು.

ಮರಣಶಾಸನ ಪತ್ರದ ಮೂಲಕ ಪಡೆದ ಆಸ್ತಿಯ ಖಾತೆಯನ್ನು ವರ್ಗಾಯಿಸಿಕೊಳ್ಳುವ ಬಗೆ ಹೇಗೆ?
ಮರಣಶಾಸನ ಪತ್ರ ಬರೆದ ವ್ಯಕ್ತಿಯ ಮರಣಾ ನಂತರ ,ಮರಣ ದೃಢೀಕರಣ ಪತ್ರ ಹಾಗೂ ಅರ್ಜಿಯ ಜೊತೆ ಪ್ರಮಾಣ ಪತ್ರವನ್ನು ಮರಣಶಾಸನ ಪತ್ರದಲ್ಲಿ ನಮೂದಿಸಿದ ವ್ಯಕ್ತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಖಾತೆಯನ್ನು ವರ್ಗಾಯಿಸಿಕೊಳ್ಳಬಹುದಾಗಿದೆ

Related News

spot_img

Revenue Alerts

spot_img

News

spot_img