ಬೆಂಗಳೂರು: ರಿಯಲ್ ಎಸ್ಟೇಟ್ ಪ್ರಮೋಟರ್ ಗಳು ತಮ್ಮ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ನಿರ್ವಹಣೆ ಸಂಬಂಧ ಅಡಿಟ್ ವರದಿಯನ್ನು ಡಿಸೆಂಬರ್ 15 ರೊಳಗೆ ಸಲ್ಲಿಸುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸೂಚಿಸಿದೆ.
ರಿಯಲ್ ಎಸ್ಟೇಟ್ ಕಂಪನಿಗಳು 2021-22 ನೇ ಸಾಲಿನ ಅಡಿಟ್ ವರದಿಯನ್ನು ಕರ್ನಾಟಕ ನಿಯಂತ್ರಣ ಪ್ರಾಧಿಕಾರ ಸೆಕ್ಷನ್ 4 (2) (i)(D) ಅಡಿಯಲ್ಲಿ ಪ್ರತಿ ವರ್ಷ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಈ ಕುರಿತು ಕರ್ನಾಟಕ ರೇರಾ ಸೂಚನೆ ಮಾಡಿತ್ತು. ರಿಯಲ್ ಎಸ್ಟೇಟ್ ಪ್ರಮೋಟರ್ಸ್ ಅಡಿಟ್ ವರದಿಯನ್ನು ಸಲ್ಲಸುವ ಜತೆಗೆ ಅಲ್ ಲೈನ್ ನಲ್ಲೂ ರೇರಾ ವೆಬ್ ತಾಣಕ್ಕೆ ಅಪ್‌ಲೋಡ್ ಮಾಡಬೇಕಾಗಿದೆ. ಈ ಸಂಬಂಧ ಹೊಸ ಫಾರಂ ನಂಬರ್ 7 ರೂಪಿಸಿದ್ದು, ಎಲ್ಲಾ ದಾಖಲೆಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ ರೆರಾ ಆದೇಶ ಹೊರಡಿಸಿದೆ.
ಈ ಆದೇಶದ ಪ್ರಕಾರ 2021- 22 ನೇ ಸಾಲಿನ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ನಿರ್ವಹಣೆ, ಲಾಭ ನಷ್ಟ ಕುರಿತು ಹಣಕಾಸು ವರ್ಷ ಮುಗಿದ ಅರು ತಿಂಗಳ ಒಳಗೆ ಅಡಿಟ್ ರಿಪೋರ್ಟ್ ಸಲ್ಲಿಸಬೇಕು. ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳು, ಪೂರ್ಣಗೊಂಡವರು, ಹಿಂಪಡೆದ ಪ್ರಾಜೆಕ್ಟ್ ಗಳು, ನಿರ್ವಹಣೆ ಹಂತದಲ್ಲಿರುವ ಪ್ರಾಜೆಕ್ಟ್ ಗಳು, ಹೂಡಿಕೆ, ಲಾಭ ನಷ್ಟದ ಕುರಿತು ಸಮಗ್ರ ವಿವರಗಳನ್ನು ಕರ್ನಾಟಕ ರೇರಾಗೆ ರಿಯಲ್ ಎಸ್ಟೇಟ್ ಕಂಪನಿಗಳು ಸಲ್ಲಿಸಬೇಕಿದೆ.
ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ಅಡಿಟ್ ರಿಪೋರ್ಟ್ ಕೆ ರೇರಾ ವೆಬ್ ತಾಣದಲ್ಲಿ ಅನ್‌ಲೈನ್ ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಫಾರಂ 7 ನ್ನು ಅಭಿವೃದ್ಧಿ ಪಡಿಸಲಾಗಿದೆ. ರೇರಾ ವೆಬ್ ತಾಣಕ್ಕೆ ಭೇಟಿ ನೀಡಿ ಅಲ್ಲಿ ಆನ್‌ಲೈನ್ ಮೂಲಕವೇ ಡಿಸೆಂಬರ್ 15, 2022 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಅನ್‌ಲೈನ್ ನಲ್ಲಿ ಅಡಿಟ್ ವರದಿ ಸಲ್ಲಿಸುವ ಸಂಬಂಧ ಗೊಂದಲಗಳಿದ್ದರೆ, ಕೆ ರೇರಾ 080- 22249798/ 22249799, ಸಂಪರ್ಕಿಸಲು ಸೂಚಿಸಲಾಗಿದೆ.