ನವದೆಹಲಿ;ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮಾರ್ಚ್ 21ರೊಳಗೆ ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್(Supremecourt) ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಖಡಕ್ ಆಗಿ ಆದೇಶಿಸಿದೆ.ಜೊತೆಗೆ SBIನಿಂದ ಪಡೆದ ಸಂಪೂರ್ಣ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ EC ಸಾರ್ವಜನಿಕಗೊಳಿಸಬೇಕು ಎಂದು ಸೂಚಿಸಿದೆ. SBI ಛೀಮಾರಿ ಹಾಕಿದ ಸಿಜೆಐ ಡಿವೈ ಚಂದ್ರಚೂಡ್, ‘SBI ಯಾಕೆ ಸಂಪೂರ್ಣ ಮಾಹಿತಿ ನೀಡಲಿಲ್ಲ? ಸಂಪೂರ್ಣ ಮಾಹಿತಿ ನೀಡಬೇಕು ಎಂದು ನಮ್ಮ ಆದೇಶದಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು. ನಮ್ಮ ಆದೇಶ ಪಾಲಿಸಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಎಸ್‌ಬಿಐ(SBI) ಆಯ್ದ ಮಾಹಿತಿಯನ್ನು ಮಾತ್ರ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಈ ಕುರಿತ ಎಲ್ಲಾ ವಿವರಣೆಗಳನ್ನು ಬಹಿರಂಗಪಡಿಸಬೇಕು. ಅದು ಖರೀದಿದಾರರು ಮತ್ತು ಚುನಾವಣಾ ಬಾಂಡ್ ಸ್ವೀಕರಿಸಿದ ರಾಜಕೀಯ ಪಕ್ಷದ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ.ಚುನಾವಣಾ ಬಾಂಡ್‌ಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಬಾಂಡ್‌ಗಳ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಬ್ಯಾಂಕ್‌ಗೆ ಕೇಳಿದೆ ಮತ್ತು ಈ ಕುರಿತು ಮುಂದಿನ ಆದೇಶಗಳಿಗಾಗಿ ಕಾಯಬಾರದು ಎಂದು ಪೀಠ ಹೇಳಿದೆ. ಚುನಾವಣಾ ಬಾಂಡ್ ಸಂಖ್ಯೆಗಳನ್ನು ಒಳಗೊಂಡಂತೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು SBIಗೆ ನಾವು ಕೇಳಿದ್ದೇವೆ ಎಂದು ಪೀಠವು ವಿಚಾರಣೆಯ ಸಮಯದಲ್ಲಿ ಮೌಖಿಕವಾಗಿ ಹೇಳಿದೆ.