22.9 C
Bengaluru
Friday, July 5, 2024

ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಡಿ.14 ರವರೆಗೆ ಗಡುವು ವಿಸ್ತರಣೆ

ಬೆಂಗಳೂರು;ಬಹುತೇಕ ಎಲ್ಲಾ ಸೇವೆಗಳಿಗೂ ಆಧಾರ್ ಕಾರ್ಡ್ ಅಗತ್ಯವಾದ ದಾಖಲೆ ಜೀವನವ್ಯವಹಾರಕ್ಕೆ ಅತ್ಯಗತ್ಯವಾಗಿರುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಪ್ರಮುಖವಾದುದು.ಆಧಾರ್ ಕಾರ್ಡ್(Aadhaar Card) ಹೊಂದಿರುವವರಿಗೆ ಭರ್ಜರಿ ಶುಭ ಸುದ್ದಿಯೊಂದು ಹೊರಬಿದ್ದಿದೆ,ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸೆಪ್ಟೆಂಬರ್ 7 ರಂದು ದಾಖಲೆಗಳ ಉಚಿತ ಆಧಾರ್ ನವೀಕರಣವನ್ನು 14 ಸೆಪ್ಟೆಂಬರ್ 2023 ರಿಂದ 14 ಡಿಸೆಂಬರ್ 2023 ರವರೆಗೆ 3 ತಿಂಗಳವರೆಗೆ ವಿಸ್ತರಿಸಿದೆ ,ಅಂತಿಮ ದಿನಾಂಕದ ನಂತರ ನೀವು ನವೀಕರಿಸಲು ಬಯಸಿದರೆ, ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು UIDAI ಹೇಳಿದೆ. ಕಳೆದ 10 – ವರ್ಷಗಳಲ್ಲಿ ಒಮ್ಮೆಯೂ ತಮ್ಮ ಆಧಾರ್ ವಿವರಗಳನ್ನು ನವೀಕರಿಸದಿರುವವರು MyAadhar ಪೋರ್ಟಲ್ ಮೂಲಕ ನವೀಕರಿಸುವಂತೆ ಸೂಚಿಸಿದೆ.ಆಧಾರ್ ಅನ್ನು ನವೀಕರಿಸಲು, UIDAI ನ ಅಧಿಕೃತ ವೆಬ್‌ಸೈಟ್ myAadhaar ಗೆ ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ವಿವರಗಳನ್ನು ನವೀಕರಿಸಬಹುದು. ಇದರಲ್ಲಿ, ಜನಸಂಖ್ಯಾ ಡೇಟಾವನ್ನು ಮಾತ್ರ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ನೀವೇ ಆಧಾರ್ ಅನ್ನು ನವೀಕರಿಸಲು ಸಾಧ್ಯವಾಗದಿದ್ದರೆ, ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಈ ಕೆಲಸವನ್ನು ಮಾಡಬಹುದು, ಆದರೆ ಇಲ್ಲಿ ನೀವು ಪ್ರತಿ ವಿವರವನ್ನು ನವೀಕರಿಸಲು ರೂ 50 ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಆಧಾರ್ ನೋಂದಣಿ ಅಥವಾ ನವೀಕರಣ ಸ್ಥಿತಿಯನ್ನು ಪರಿಶೀಲಿಸಲು 1947 ಸಂಖ್ಯೆಗೆ ಕರೆ ಮಾಡಬಹುದು.

Related News

spot_img

Revenue Alerts

spot_img

News

spot_img