ದಾವಣಗೆರೆ;ದಾವಣಗೆರೆಯ ಪಿಜೆ ಬಡಾವಣೆಯಲ್ಲಿ ಪೊಕ್ಸೊ ಪ್ರಕರಣದ ಆರೋಪಿಯಿಂದ 1.87 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಹಣ ಹಾಗೂ ಹಣಕ್ಕೆ ಖಾತರಿಯಾಗಿ ಪಡೆದಿದ್ದ ಸಹಿ ಮಾಡಿದ್ದ ಖಾಲಿ ಚೆಕ್ ಸಮೇತ ವಿಶೇಷ ಸರ್ಕಾರಿ ಅಭಿಯೋಜಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಕ್ಕಳ ಸ್ನೇಹಿ ನ್ಯಾಯಾಲದ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರು ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ವಿಶೇಷ ಅಭಿಯೋಜಕಿ ಆರೋಪಿಯ ಬಳಿ 1.87 ಲಕ್ಷ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಪೋಕ್ಸೋ (POCSO) ಪ್ರಕರಣದ ಆರೋಪಿ ಬಳಿ 3 ಲಕ್ಷಕ್ಕೆ ಎಸ್.ಎಸ್.ಪಿ ಬೇಡಿಕೆ ಇಟ್ಟ ಪ್ರಕರಣವೂ ಬೆಳಕಿಗೆ ಬಂದಿದೆ.ಲೋಕಾಯುಕ್ತ SP ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ದಾಳಿ ವೇಳೆ ರೇಖಾ ಪಡೆದಿದ್ದ ಖಾಲಿ ಚೆಕ್ ಮತ್ತು 1.87 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.
ಲೋಕಾಯುಕ್ತರ ಬಲೆಗೆ ಬಿದ್ದ ಪ್ರಕರಣದ ವಿವರ
ಆರೋಪಿ ರೇಖಾ ಎಸ್ ಕೊಟ್ರಗೌಡರ ಪಿಜೆ ಬಡಾವಣೆಯ ತಮ್ಮ ನಿವಾಸದಲ್ಲೇ ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. .ದಾವಣಗೆರೆ ತಾ. ಕಿತ್ತೂರು ಗ್ರಾಮದ ಜಿ.ಟಿ.ಮದನ್‍ಕುಮಾರ ಕಿತ್ತೂರು ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧದಡಿ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಮದನಕುಮಾರನಿಗೆ ಸಹಾಯ ಮಾಡುವುದಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, 1.13 ಲಕ್ಷ ರೂ.ಗಳನ್ನು ಮುಂಚೆಯೇ ಪಡೆದುಕೊಂಡಿದ್ದರು. ಆರೋಪಿ ಮದನಕುಮಾರ ಪ್ರಕರಣದಲ್ಲಿ ಸಹಾಯ ಮಾಡಲು ನೀಡಬೇಕಾಗಿದ್ದ ಬಾಕಿ 1.87 ಲಕ್ಷ ರೂ.ಗೆ ಖಾತರಿಗಾಗಿ ಆತನಿಂದ ಕರ್ನಾಟಕ ಬ್ಯಾಂಕ್‍ಗೆ ಸೇರಿದ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದರು. ಲಂಚದ ಹಣ ನೀಡಲು ಇಷ್ಟವಿಲ್ಲದ್ದರಿಂದ ಆರೋಪಿ ಮದನ್ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಎಂದು ತಿಳಿದು ಬಂದಿದೆ.