26.7 C
Bengaluru
Sunday, December 22, 2024

ಐಷಾರಾಮಿ ವಿಲ್ಲಾವನ್ನು ಖರೀದಿಸಿದ ಕ್ರಿಕೆಟಿಗ ವಿರಾಟ್‌ ಕೊಹ್ಲಿ: ವಿಲ್ಲಾದಲ್ಲಿ ಏನೇನಿದೆ ಗೊತ್ತೇ..?

ಬೆಂಗಳೂರು, ಫೆ. 28 : ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೊಸ ವಿಲ್ಲಾವನ್ನು ಖರೀದಿಸಿದ್ದಾರೆ. 34 ವರ್ಷದ ವಿರಾಟ್‌ ಮುಂಬೈ ಸಮೀಪದ ಅಲಿಬಾಗ್‌ನಲ್ಲಿ ಐಷಾರಾಮಿಯ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಅಲಿಬಾಗ್ ನಲ್ಲಿರುವ ವಿರಾಟ್‌ ಕೊಹ್ಲಿ ಅವರ ಈ ಹೊಸ ವಿಲ್ಲಾ 2,000 ಚದರ ಅಡಿ ವಿಸ್ತೀರ್ಣದಲ್ಲಿದೆ. ಇದಕ್ಕೆ ವಿರಾಟ್‌ ಕೋಹ್ಲಿ ಬರೋಬ್ಬರಿ 6 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಕ್ರಿಕೆಟಿಗ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ನಿರತರಾಗಿರುವ ಕಾರಣ ವಿರಾಟ್ ಸಹೋದರ ವಿಕಾಸ್ ಕೊಹ್ಲಿ ವಿಲ್ಲಾ ನೋಂದಣಿಗೆ ಬಂದಿದ್ದರು.

400 ಚದರ ಅಡಿ ಈಜುಕೊಳವನ್ನು ಒಳಗೊಂಡಿರುವ ವಿಲ್ಲಾವನ್ನು ಹೊಂದಲು ಕೊಹ್ಲಿ 36 ಲಕ್ಷ ರೂಪಾಯಿಗಳನ್ನು ಸ್ಟ್ಯಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅಲಿಬಾಗ್‌ನಲ್ಲಿ ಕೊಹ್ಲಿ ಖರೀದಿಸಿದ ಎರಡನೇ ಆಸ್ತಿ ಇದಾಗಿದೆ ಎಂಬುದನ್ನು ಮರೆಯುವಂತಿಲ್ಲ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಿರಾದ್ ಗ್ರಾಮದಲ್ಲಿ ₹19.24 ಕೋಟಿಗೆ 36,059 ಚದರ ಅಡಿಯ ಫಾರ್ಮ್‌ಹೌಸ್ ಅನ್ನು ಖರೀದಿಸಿದ್ದರು. ನಟ ರಾಮ್ ಕಪೂರ್, ಪತ್ನಿ ಗೌತಮಿ, ಆಕ್ಸಿಸ್ ಬ್ಯಾಂಕ್ ಸಿಇಒ ಮತ್ತು ಎಂಡಿ ಅಮಿತಾಬ್ ಚೌಧರಿ ಸೇರಿದಂತೆ ಹಲವರು ಈ ಆವಾಸ್ ಯೋಜನೆಯಲ್ಲಿ ವಿಲ್ಲಾಗಳನ್ನು ಖರೀದಿಸಿದ್ದಾರೆ.

ಮಹಾರೇರಾ ಪೋರ್ಟಲ್‌ನ ಮಾಹಿತಿಯ ಪ್ರಕಾರ, ಅವಾಸ್ ಲಿವಿಂಗ್ 24,955 ಚದರ ಮೀಟರ್ ಪ್ಲಾಟ್‌ನಲ್ಲಿ 2,770 ಚದರ ಅಡಿಯಿಂದ 5,045 ಚದರ ಅಡಿವರೆಗಿನ 16 ಬಂಗಲೆಗಳೊಂದಿಗೆ ಯೋಜನೆ ರೂಪಿಸಲಾಗಿದೆ. ಕೊಹ್ಲಿ ಅವರ ಉತ್ತರಾಧಿಕಾರಿ ರೋಹಿತ್ ಶರ್ಮಾ ಅವರು 2021 ರಲ್ಲಿ ಅಲಿಬಾಗ್‌ನ ಮತ್ರೋಲಿ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿಯನ್ನು ಖರೀದಿಸಿದ್ದರು. ‌ಹಲವಾರು ಕಾರ್ಪೊರೇಟ್ ನಾಯಕರು ನವೀನ್ ಅಗರ್ವಾಲ್, ಗೌತಮ್ ಸಿಂಘಾನಿಯಾ, ಪ್ರಕಾಶ್ ಮೋದಿ, ಸಲೀಲ್ ಪರೇಖ್, ಸಂಜಯ್ ನಾಯರ್, ಫಲ್ಗುಣಿ ನಾಯರ್, ಮತ್ತು ದೇವೆನ್ ಮೆಹ್ತಾ ಅವರು ಈಗಾಗಲೇ ಅಲಿಬಾಗ್‌ನಲ್ಲಿ ಆಸ್ತಿ ಹೊಂದಿದ್ದಾರೆ.

Related News

spot_img

Revenue Alerts

spot_img

News

spot_img