24.2 C
Bengaluru
Sunday, December 22, 2024

ರೈತರಿಗಾಗಿ ಕ್ರೆಡಿಟ್ ಕಾರ್ಡ್ ಯೋಜನೆ;ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ?

#Credit Card Scheme # Farmers # Apply # Kisan Credit Card

ಬೆಂಗಳೂರು : ಕೃಷಿ ಯೋಜನೆಗಳ ಪೈಕಿ ‘ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ’ ಮಹತ್ವದ ಯೋಜನೆಯಾಗಿದೆ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಆರ್ಥಿಕ ನೆರವು ನೀಡಲು ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅವುಗಳಲ್ಲಿ ಒಂದು. ರೈತರ ಮೇಲಿನ ಆರ್ಥಿಕ ಹೊರೆಯನ್ನ ಮತ್ತಷ್ಟು ತಗ್ಗಿಸಲು ಕಿಸಾನ್ ಕ್ರೆಡಿಟ್ ಕಾರ್ಡ್(Kissancredit card) ಪರಿಚಯಿಸಲಾಯಿತು. ಇದರ ನೆರವಿನಿಂದ ರೈತರು ತಮ್ಮ ಕೃಷಿ ಅಗತ್ಯಗಳಿಗಾಗಿ ಸುಲಭವಾಗಿ ಸಾಲ ಪಡೆಯಬಹುದು,ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕೆಸಿಸಿ ಖಾತೆಯು ಕ್ರೆಡಿಟ್ ಸೌಲಭ್ಯದ ಜೊತೆಗೆ ಉಳಿತಾಯ ಖಾತೆಯ ಪ್ರಯೋಜನವನ್ನು ನೀಡುತ್ತದೆ. ಭಾರತದಾದ್ಯಂತ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.ಈ ಯೋಜನೆಯಡಿ, ದೇಶದ ಯಾವುದೇ ರೈತರು ವಾರ್ಷಿಕ ಶೇ. 4ರ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ದೇಶದ ಲಕ್ಷಾಂತರ ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ(Kisan Credit Card)

ರೈತರಿಗೆ ಕೃಷಿ ಮತ್ತು ಇತರ ಅಗತ್ಯಗಳಿಗಾಗಿ ಸಮರ್ಪಕ ಮತ್ತು ಸಕಾಲಿಕ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಆರ್‌ಬಿಐ(RBI) ಹೇಳಿದೆ,ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ಈ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪರಿಚಯಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಆಧಾರಿತ ಸಾಲ ಮತ್ತು ಉಳಿತಾಯ ಖಾತೆ ಪ್ರಕಾರದ ಸೇವೆಗಳನ್ನ ನೀಡುತ್ತದೆ,ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನುಮೋದಿಸಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಸಹ ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುತ್ತಾರೆ.ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಆಕ್ಸಿಸ್ ಬ್ಯಾಂಕ್, ICICI ಬ್ಯಾಂಕ್, HDFC ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಂತಹ ಭಾರತದ ಅನೇಕ ಜನಪ್ರಿಯ ಬ್ಯಾಂಕ್‌ಗಳು ನೀಡುತ್ತವೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿ ದರವು ಅದರ ಕ್ರೆಡಿಟ್ ಮಿತಿಯೊಂದಿಗೆ ಒಂದು ಬ್ಯಾಂಕ್‌ನಿಂದ ಇನ್ನೊಂದಕ್ಕೆ ಬದಲಾಗುತ್ತದೆ.ಬೇಸಾಯಕ್ಕಾಗಿ ಬ್ಯಾಂಕ್ ಗಳಿಗೆ ಅಲೆಯದೆ ಸಾಲದ ಸಹಾಯದಿಂದ ಹೂಡಿಕೆಯನ್ನ ಸಾಲದ ರೂಪದಲ್ಲಿ ಪಡೆಯಬಹುದು. ಅವುಗಳನ್ನ ಒಂದೇ ಬಾರಿಗೆ ಅಥವಾ ಸುಲಭ ಕಂತುಗಳಲ್ಲಿ ಪಾವತಿಸಬಹುದು. ಕ್ರೆಡಿಟ್ ಕಾರ್ಡ್(Creditcard) ಸಹಾಯದಿಂದ ನೀವು ಉಳಿತಾಯ ಖಾತೆಯನ್ನ(savingsaccount) ತೆರೆಯಬಹುದು. ಪ್ರತ್ಯೇಕ ಖಾತೆಗಳ ಬದಲಿಗೆ ಒಂದೇ ಖಾತೆಯಲ್ಲಿ ನಗದು ಉಳಿಸಲು ಮತ್ತು ಅಗತ್ಯವಿದ್ದಾಗ ಸಾಲ ಪಡೆಯುವ ಅವಕಾಶವಿದೆ.

 

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ?

*ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ವೆಬ್ಸೈಟ್ಗೆ ಹೋಗಿ.

* ಅಲ್ಲಿ ನೀವು ಕಿಸಾನ್ ಕಾರ್ಡ್ ಆಯ್ಕೆಯನ್ನ ಆರಿಸಬೇಕಾಗುತ್ತದೆ.

* ಅದರಲ್ಲಿ ಕೇಳಿರುವ ಎಲ್ಲಾ ವಿವರಗಳನ್ನ ಭರ್ತಿ ಮಾಡಿ ಸಲ್ಲಿಸಬೇಕು.

*ನಂತರ ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

*ಎಲ್ಲಾ ಅರ್ಹತೆಗಳು ಇದ್ದರೆ, ಪ್ರಕ್ರಿಯೆಯ 15 ದಿನಗಳಲ್ಲಿ ಕಾರ್ಡ್ ನೀಡಲಾಗುವುದು.

ದಾಖಲೆಗಳು :

* ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ,

*ಪಾಸ್‌ಪೋರ್ಟ್‌

*ಕಂದಾಯ ಅಧಿಕಾರಿಗಳು ನೀಡಿದ ಭೂಮಿಯ ಪುರಾವೆ,

*ಸಾಗುವಳಿ ವಿಧಾನ,

*ಸಾಗುವಳಿ ಮಾಡಿದ ಬೆಳೆಗಳ ವಿಸ್ತೀರ್ಣ,

*ಸಾಲ ಮಿತಿಗೆ ಭದ್ರತಾ ದಾಖಲೆಗಳು,

* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

Related News

spot_img

Revenue Alerts

spot_img

News

spot_img