ಬೆಂಗಳೂರು, ಫೆ. 13 : ಕಾಫಿ ಎಂದು ಹೇಳಿದರೆ ಸಾಕು ಅದೆಷ್ಟೋ ಜನರ ಮನಸ್ಸು ಉಲ್ಲಾಸದಿಂದ ಕೂಡುತ್ತದೆ. ಬೆಳಗೆದ್ದ ಕೂಡಲೇ ಬಿಸಿಬಿಸಿಯಾದ ಒಂದು ಕಪ್ ಕಾಫಿ ಕುಡಿದರೆ ಸಾಕು ಇಡೀ ದಿನ ಆಕ್ಟಿವ್ ಆಗಿ ಇರುವಂತೆ ಮಾಡುತ್ತದೆ., ಕೆಲವರಿಗಂತೂ ಕಾಫಿ ಇಲ್ಲದೇ ದಿನ ಆರಂಭವೂ ಅಗುವುದಿಲ್ಲ ಮುಗಿಯುವುದೂ ಇಲ್ಲ. ಗಂಟೆಗೊಮ್ಮೆ ಕಾಫಿ ಕುಡಿಯುವ ಜನರೂ ನಮ್ಮ ನಿಮ್ಮ ನಡುವೆ ಇದ್ದಾರೆ. ಕಾಫಿಯ ಗುಣವೇ ಅಂತಹದ್ದು, ಅದರಲ್ಲಿರುವ ಕೆಫಿನ್ ಅಂಶ ಮನುಷ್ಯನನ್ನು ಎಚ್ಚರವಾಗಿಡುವಂತೆ ಮಾಡುತ್ತದೆ. ಕಾಫಿಗೆ ಅಡಿಕ್ಟ್ ಆಗದ ಜನರಿಲ್ಲ. ಒಮ್ಮೆ ರೂಢಿ ಮಾಡಿಕೊಂಡರೆ ಬಿಡುವುದು ಬಹಳ ಕಷ್ಟ.
ಈಗ ಯಾಕೆ ಕಾಫಿ ಅಂತ ಯೋಚಿಸುತ್ತಿದ್ದೀರಾ..? ಇಲ್ಲೊಂದು ದಂಪತಿಗಳು ರಿಲ್ಯಾಕ್ಸ್ ಗಾಗಿ ಕಾಫಿ ಕುಡಿಯೋಣ ಎಂದು ಕಾಫಿ ಶಾಪ್ ಗೆ ಹೋಗಿ ಪೇಚಿಗೆ ಸಿಲುಕಿದ್ದಾರೆ. ಎರಡು ಕಾಫಿಗೆ ಬರೋಬರಿ ಮೂರೆವರೆ ಲಕ್ಷ ಬಿಲ್ ಕಟ್ಟಿ ಬಂದಿದ್ದಾರೆ. ಹೌದು.ಜೆಸ್ಸೆ ಹಾಗೂ ದೀಡಿ ಎಂಬ ಅಮೇರಿಕಾ ದಂಪತಿ ಕಳೆದ ತಿಂಗಳು ಸ್ಟಾರ್ ಬಕ್ಸ್ ಗೆ ಕಾಫಿ ಕುಡಿಯಲು ಹೋಗಿದ್ದಾರೆ. ಕಾಫಿಯನ್ನು ಕುಡಿದು ಬಿಲ್ ಕಟ್ಟಿ ಮನೆಗೆ ಬಂದಿದ್ದಾರೆ. ಕೆಲ ದಿನಗಳ ಬಳಿಕ ಮಕ್ಕಳ ಜೊತೆಗೆ ಜೆಸ್ಸೆ ಶಾಪಿಂಗ್ ಮಾಲ್ ಗೆ ತೆರಳಿದ್ದು, ಅದೇ ಕಾರ್ಡ್ ಅನ್ನು ಬಳಸಿ ಅಲ್ಲೂ ಬಿಲ್ ಕಟ್ಟಲು ಯತ್ನಿಸಿದ್ದಾಳೆ. ಆದರೆ, ಕಾರ್ಡ್ ಡಿಕ್ಲೈನ್ ಆಗಿದೆ.
ಯಾಕೆಂದು ಜೆಸ್ಸೆ ಚೆಕ್ ಮಾಡಿದ್ದಾಳೆ. ಆಗ ತಿಳದದ್ದು, ತನ್ನ ಕಾರ್ಡ್ ನಲ್ಲಿದ್ದ ಅಷ್ಟೂ ಮೊತ್ತ ಸ್ಟಾರ್ ಬಕ್ಸ್ ನಲ್ಲಿ ಕುಡಿದ ಎರಡು ಕಾಫಿಗೆ ಖರ್ಚಾಗಿದೆ ಎಂಬುದು. ಅಲ್ಲಿಗೆ ಇವರು ಕುಡಿದ ಎರಡು ಕಾಫಿಗೆ ಬರೋಬ್ಬರಿ 3.67 ಲಕ್ಷ ಬಿಲ್ ಪಾವತಿಯಾಗಿದೆ. ಇದನ್ನು ತಿಳಿದ ಜೆಸ್ಸೆ ಶಾಕ್ ಆಗಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆಯಲು ಜೆಸ್ಸೆ ಹಾಗೂ ದೀಡಿ ಇಬ್ಬರೂ 30 ರಿಂದ 40 ಬಾರಿ ಸ್ಟಾರ್ ಬಕ್ಸ್ ನ ಕಸ್ಟರ್ ಕೇರ್ ಗೆ ಕರೆ ಮಾಡಿದ್ದಾರೆ. ಮಕ್ಕಳ ಜೊತೆಗೆ ಥೈಲ್ಯಾಂಡ್ ಗೆ ಹೋಗಬೇಕೆಂದು ಕುಟುಂಬ ಟಿಕೆಟ್ ಬುಕ್ ಮಾಡಿತ್ತು. ಆದರೆ, ಕಾಫಿ ನ ಪರಿಣಾಮ ಹೋಗಲು ಕರ್ಚಿಗೆ ಹಣವಿಲ್ಲದೇ, ಅದನ್ನೂ ಕೂಡ ಕ್ಯಾನ್ಸಲ್ ಮಾಡಿಕೊಳ್ಳಬೇಕಾಯ್ತು. ಟಿಕೆಟ್ ನೀಡಿದ್ದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಇನ್ನು ಸ್ಟಾರ್ ಬಕ್ಸ್ ಕಂಪನಿಯೂ ಮೊದಲಿಗೆ ನೀಬು ಹೆಚ್ಚಿನ ಟಿಪ್ಸ್ ನೀಡಿದ್ದೀರಿ ಎಂದು ವಾದ ಮಾಡಿತ್ತು. ದಂಪತಿಗಳು ಪೊಲೀಸ್ ಠಾಣೆಯಲ್ಲಿ ದೂ ದಾಕಲಿಸಿದ ಬಳಿಕ ನೆಟ್ ವರ್ಕ್ ಸಮಸ್ಯೆ ಇಂದಾಗಿ ಹೆಚ್ಚಿನ ಹಣ ಕಡಿತವಾಗಿದ ಎಂದು ದಂಪತಿಗೆ ಎರಡು ಚೆಕ್ ನಲ್ಲಿ ಹಣವನ್ನು ಮರುಪಾವತಿ ಮಾಡಿದೆ. ಈ ಸುದ್ದಿಯನ್ನು ನೋಡಿದ ಹಲವರು ಮನೆಯಲ್ಲೇ ಕಾಫಿ ಮಾಡಿಕೊಂಡು ಕುಡಿಯುವ ನಿರ್ಧಾರ ಮಾಡಿದ್ದಾರೆ. ಒಂದು ಬಿಲ್ ನಿಂದಾದ ಸಮಸ್ಯೆಯಿಂದ ದಂಪತಿ ಹಾಗೂ ಕುಟುಂಬ ತಮ್ಮ ಟ್ರಿಪ್ ಅನ್ನು ಕೂಡ ಕ್ಯಾನ್ಸಲ್ ಮಾಡಿಕೊಂಡಿದ್ದು ನೋಡಿದರೆ ಬೇಸರವಾಗುತ್ತದೆ.