#Countdown # Ram Lalla installation # huge celebration # over the country
ಅಯೋಧ್ಯೆ: ಅಯೋಧ್ಯೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಸಂಭ್ರಮ ಆಚರಣೆಗೆ ಇಡೀ ದೇಶ ಸಿದ್ಧವಾಗಿದೆ. ರಾಜ್ಯದ ಹಲವು ದೇಗುಲಗಳಲ್ಲಿ ಶ್ರೀರಾಮನ ಹಾಡುಗಳು ಮೊಳಗುತ್ತಿವೆ. ರಸ್ತೆಗಳಲ್ಲಿ ಕೇಸರಿ ಧ್ವಜಗಳು ಕಾಣಿಸುತ್ತಿವೆ. ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ಕಣ್ಣುಂಬಿಕೊಳ್ಳಲು ಜನ ಸಿದ್ಧರಾಗಿದ್ದಾರೆ. ಮತ್ತೊಂದೆಡೆ, ಹಲವೆಡೆ ಸ್ಥಳೀಯ ಮುಖಂಡರು ನೇರ ಪ್ರಸಾರ ವೀಕ್ಷಿಸಲು ಪರದೆಗಳನ್ನು ಹಾಕಿದ್ದಾರೆ. ವಿದೇಶಗಳಲ್ಲೂ ಸಂಭ್ರಮಾಚರಣೆ ನಡೆಯುತ್ತಿದೆ. ಹಲವೆಡೆ ವಿಶೇಷ ದೀಪಾಲಂಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.ಉತ್ತರ ಪ್ರದೇಶದ ದೇವಾಲಯಗಳ ಪಟ್ಟಣ ಅಯೋಧ್ಯೆಯಲ್ಲಿನ ಐತಿಹಾಸಿಕ ಶ್ರೀರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು,ರಾಮ ಜನ್ಮಭೂಮಿ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಸಾಕಾರಗೊಳ್ಳುವ ಗಳಿಗೆ ಬಂದಿದೆ. ಸೋಮವಾರ ಮಧ್ಯಾಹ್ನ 12.20ರಿಂದ ಅಭಿಜಿತ್ ಮುಹೂರ್ತದಲ್ಲಿ ನಡೆಯುವ ಈ ಶುಭ ಮುಹೂರ್ತಕ್ಕೆ ಇಡೀ ದೇಶವೇ ಎದುರು ನೋಡುತ್ತಿದೆ.ಐನೂರು ವರ್ಷಗಳ ನಿರೀಕ್ಷೆ, ಹಂಬಲ .ನೆರವೇರುವ ಐತಿಹಾಸಿಕ ಕ್ಷಣ ಇದು ಸುಪ್ರೀಂ ಕೋರ್ಟ್ ತೀರ್ಪಿನ ಆದೇಶದಂತೆ ಭವ್ಯವಾದ ಮಂದಿರ ನಿರ್ಮಾಣಗೊಂಡಿದೆ. ದಿವ್ಯ ತೇಜಸ್ಸುಳ್ಳ ವಿರಾಜಮಾನನಾಗಲಿದ್ದಾನೆ. ರಾಮಲಲ್ಲಾ ಊರು ಹೂವು, ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಎಲ್ಲಿ ನೋಡಿದರೂ ಕೇಸರಿ ಮಯ. ರಾಮಾಯಣ ಪಾತ್ರಗಳನ್ನು ಧರಿಸಿ ಜನ ಬರುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಆಕಾಶ ರಾಗವಾದ ಮಂಗಳ ಧ್ವನಿಯ ಭವ್ಯ ಸಂಗೀತದೊಂದಿಗೆ ಸಮಾರಂಭ ಪ್ರಾರಂಭವಾಗಲಿದೆ.
ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಆಕರ್ಷಕ ಸಂಗೀತ ವಾದ್ಯಗಳು ಈ ಶುಭ ಸಮಾರಂಭಕ್ಕೆ ಮೆರುಗು ನೀಡಲಿದ್ದು, ಸುಮಾರು 2 ಗಂಟೆಗಳ ಕಾಲ ಸಂಗೀತದ ಕಲರವ ಮೇಳೈಸಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತಿಥಿಗಳು ಬೆಳಗ್ಗೆ 10-30 ರೊಳಗೆ ಪ್ರವೇಶಿಸಲು ಕೋರಲಾಗಿದೆ.ಎಲ್ಲರ ಮನೆ ಮುಂದೆ ರಂಗೋಲಿ ಚಿತ್ತಾರ ಮೂಡಿದೆ.ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ 12.55ಕ್ಕೆ ಹೆಲಿಕಾಪ್ಟರ್‌ನಿಂದ ರಾಮಮಂದಿರದ ಮೇಲೆ ಪುಷ್ಪವೃಷ್ಟಿಯನ್ನು ಮಾಡಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12:20 ಕ್ಕೆ ಬಾಲರಾಮನ ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆಯಲಿದ್ದಾರೆ. ಕಣ್ಣಿಗೆ ಕಟ್ಟಿರುವ ಬಟ್ಟೆ ತೆರೆದ ಬಳಿಕ ಕಣ್ಣಿಗೆ ಕಾಡಿಗೆಯನ್ನು ಹಚ್ಚಲಿದ್ದಾರೆ.ಇಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅದ್ದೂರಿಯಾಗಿ ಜರುಗಲಿದ್ದು, ಇಡೀ ದೇಶ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.ಮಧ್ಯಾಹ್ನ 1 ಗಂಟೆಯಿಂದ ಇತರ ಭಕ್ತರಿಗೆ ಅವಕಾಶ ದೊರೆಯಲಿದೆ. ಅಯೋಧ್ಯೆ ಕೇಸರಿ ಮಯವಾಗಿದೆ. ರಾಮಮಂದಿರ ಎದುರು ಭಕ್ತರು ಜಮಾಯಿಸಿದ್ದಾರೆ. ಈ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ರಾಜ್ಯದ ಆಯಾ ವಲಯ ಐಜಿಪಿ, ಎಸ್ಪಿ, ಘಟಕದ ಹಿರಿಯ ಅಧಿಕಾರಿಗಳಿಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ. ರಾಜ್ಯದೆಲ್ಲೆಡೆ ಸೂಕ್ಷ್ಮ ಪ್ರದೇಶಗಳು, ಬಸ್-ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.ಈ ಭವ್ಯ ಸಮಾರಂಭಕ್ಕೆ 7,000 ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿದ್ದು, ಈಗಾಗಲೇ ಬಹುತೇಕ ಗಣ್ಯರು ಅಯೋಧ್ಯೆ ತಲುಪಿದ್ದಾರೆ. ಅಂತೆಯೇ ಈ ಆಯ್ದ ಪಟ್ಟಿಯಲ್ಲಿ 506 ಎ-ಲಿಸ್ಟರ್ ಗಣ್ಯರೂ ಕೂಡ ಇದ್ದು, ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮತ್ತು ಕ್ರೀಡಾ ಐಕಾನ್ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಪ್ರಮುಖ ವ್ಯಕ್ತಿಗಳಲ್ಲಿ ಸೇರಿದ್ದಾರೆ.