#Dk Shivakumar, #R Ashok, #Contractors Bill Row, #Politics,
ಬೆಂಗಳೂರು, ಆ.10: ಗುತ್ತಿಗೆದಾರರ ಬಿಲ್ ಪಾವತಿ ವಿವಾದ ರಾಜ್ಯದಲ್ಲಿ ರಾಜಕೀಯ ಕೆಸೆರೆರಚಾಟಕ್ಕೆ ನಾಂದಿ ಹಾಡಿದೆ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಸಂಬಂಧ ಆಡಳಿತ ರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಬೆಜೆಪಿ ತಿರುಗಿ ಬಿದ್ದಿದೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದಿರುವ ನಕಲಿ ಬಿಲ್ ಕಾಮಗಾರಿಗಳ ಜಾಡು ಹಿಡಿದು ಕಾಂಗ್ರೆಸ್ ತನಿಖೆ ಮಾಡುತ್ತಿದೆ. ಇಬ್ಬರ ಕೆಸೆರೆರಚಾಟದಲ್ಲಿ ಪ್ರಾಮಾಣಿಕ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗುತ್ತಿಗೆದಾರರ ಬಿಲ್ ಪಾವತಿ ಸಂಬಂಧ ಮಾಜಿ ಸಚಿವ ಅರ್. ಅಶೋಕ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ನೇರವಾಗಿ ಹರಿಹಾಯ್ದರು. ಡಿಕೆ ಡೈಲಾಗ್ ಗಳನ್ನು ಉಲ್ಲೇಖಿಸಿ ಪಂಚಿಂಗ್ ಡೈಲಾಂಗ್ ಹೊಡೆದ ಆರ್. ಅಶೋಕ್ ಅವರ ಮಾತಿನ ದಾಟಿ ಹೀಗಿತ್ತು!
ನೀವು ಸತ್ಯಾ ಹರಿಚಂದ್ರ ಮಕ್ಕಳಾಗಿದ್ದರೆ ನೀವು ನಿಮ್ಮ ಕಾಲದಲ್ಲಿ ಆಗಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮಾಡಿ. ಆ ಧೈರ್ಯ ನಿಮಗೆ ಇಲ್ಲವೇ ? ನಮ್ಮ ಸರ್ಕಾರದ ಅವಧಿಯಲ್ಲಿ ( ಕಾಂಗ್ರೆಸ್ ಸರ್ಕಾರ ) ಏನಾದರೂ ಭ್ರಷ್ಟಾಚಾರ ನಡೆದಿದ್ದರೆ ಪ್ರಧಾನಿಗಾದ್ರೂ ದೂರು ಕೊಡಿ. ರಾಷ್ಟ್ರಪತಿಗಾದ್ರೂ ದೂರು ಕೊಡಿ. ಲೋಕಾಯುಕ್ತಗಾದ್ರೂ ದೂರು ಕೊಡ್ಲಿ. ಭಯ ಪಡುವುದು ನಮ್ಮ ಡಿನ್ಷನರಿಯಲ್ಲಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಇದೇನು ಬಿಲ್ ಲಾಡೆನ್ ಸರ್ಕಾರನಾ ? ಯಾವುದಾದ್ರೂ ತನಿಖಾ ಸಂಸ್ಥೆಗಳ ಭಯ ಇರಬೇಕಲ್ಲವೇ ? ಅಷ್ಟೆಲ್ಲಾ ಯಾಕೆ ಕಮೀಷನ್ ತೆಗೆದುಕೊಳ್ಳುತ್ತಿಲ್ಲ, ತೆಗೆದುಕೊಳ್ಳುವುದಿಲ್ಲ ಎಂದು ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂದು ಅಶೋಕ್ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಮೋಸ ಮಾಡಿದವರರಿಗೆ ಬಿಲ್ ಕೊಡಬೇಕೇನ್ರಿ, ಕಳ್ಳತನ ಮಾಡಿದವರಿಗೆ ಬಿಲ್ ಕೊಡಬೇಕ್ರೀ ಅಂತ ಕೇಳುತ್ತಿದ್ದಾರೆ. ಬೇಲ್ ಮೇಲೆ ಹೊರ ಬಂದಿದ್ದೀರಾ.. ಬೇಲ್ ಮೇಲೆ ಇದ್ದೀರಾ. ನೀವು ಬೇಲ್ ಜನ. ಭ್ರಷ್ಟಾಚಾರ ಕೇಸಿನಲ್ಲಿ ಸತ್ಯಾ ಹರಿಚಂದ್ರನಂತೆ ಫೋಸು ಕೊಡುವುದು ಎಷ್ಟು ಸರಿ ? ಭೂತದ ಬಾಯ್ಲಿ ಭಗವದ್ಗೀತೆ ಓದಿದಂತೆ. ನೀವೇ ಅಪರಾದಿಗಳು. ಗುತ್ತಿಗೆದಾರರನ್ನು ಕಳ್ಳರು ಎಂದು ಹೇಳುವುದು ಎಷ್ಟು ಸರಿ ಅಶೋಕ್ ಪ್ರಶ್ನಿಸಿದರು. ಕೊಡಬೇಕೇನ್ರಿ ?
Brand Bengaluru ಬ್ರಾಂಡ್ ಬೆಂಗಳೂರು ಗಬ್ಬು ನಾರ್ತಿದೆ:
ಬ್ರಾಂಡ್ ಬೆಂಗಳೂರು ಹೆಸರು ಮಾಡೋಕೆ ಹೊರಟಿದ್ದೀರಿ. ಇದೇನಾ ಬೆಂಗಳೂರು. ಕೆಲಸ ಸ್ಟಾಪ್ ಅಗಿದೆ. ಮನೆಗಳ ನಿರ್ಮಾಣಕ್ಕೆ ಪ್ಲಾನ್ ಅಪ್ರೂವಲ್ ನಿಂತು ಹೋಗಿದೆ ಅಕ್ರಮವಾಗಿ ಯಾರು ಬೇಕಾದ್ರೂ ಮನೆ ಕಟ್ಟಿಕೊಳ್ಳಬಹುದು. ರಸ್ತೆಯಲ್ಲಿ ಕಸದ ಡಬ್ರೀಸ್ ಬಿದ್ದಿದೆ. ರೋಡ್ ಪಕ್ಕ ನೋಡಿ ಗಬ್ಬು ನಾರುತ್ತಿದೆ. ಐದು ಸಾವಿರ ಟನ್ ಡಬ್ರಿಸ್ ಇದೆ. ಇದು ಬ್ರಾಂಡ್ ಬೆಂಗಳೂರು. ಕೆಲಸ ಕಾರ್ಯ ಸ್ಟಾಪ್ ಮಾಡಿ ಬ್ರಾಂಡ್ ಬೆಂಗಳೂರು ಮಾಡ್ತೀರಾ ? ಎಲ್ಲಾ ಬಿಲ್ ಸ್ಟಾಪ್ ಮಾಡಿ ಬ್ರಾಂಡ್ ಬೆಂಗಳೂರು ಮಾಡುತ್ತೀರಾ ಎಂದು ಗುಡುಗಿದರು.
ಕಾಂಗ್ರೆಸ್ ಸರ್ಕಾರಕ್ಕೆ ನಾನು ಈ ಪ್ರಶ್ನೆ ಮುಂದಿಡುತ್ತಿದ್ದೇನೆ. ಅವರಿಗೆ ನಿಜವಾಗಿಯೂ ಕರ್ನಾಟಕ ಜನರ ಮೇಲೆ ಕಾಳಜಿ ಇದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ. 40 ಪರ್ಸೆಂಟ್ ಅಂತ ಹೇಳಿ ಇವರು ವಸೂಲಿ ಮಾಡುತ್ತಿಲ್ಲವೇ ? ಈಗ 40 ಪರ್ಸೆಂಟ್ ಜತೆಗೆ ಪ್ಲಸ್ ಹದಿನೈದು ಸೇರಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
R Ashok Questioner :
1. ನಮ್ಮ ಮೇಲೆ 40 ಪರ್ಸೆಂಟ್ ನಿರಾದಾರ ಅರೋಪ ಮಾಡಿ ಅಧಿಕಾರಕ್ಕೆ ಬಂದ ನೀವು ನಿಮ್ಮ ಮೇಲೆ ಹದಿನೈದು ಪರ್ಸೆಂಟ್ ಅರೋಪ ಇಲ್ಲವೇ ಇದರ ಬಗ್ಗೆ ಉತ್ತರ ಕೊಡಿ. ಇದು 40 ಪರ್ಸೆಂಟ್ ಜತೆಗೆ ಪ್ಲಸ್ ಹದಿನೈದು!
2. ನೀವು ಕಮೀಷನ್ ಕೇಳಲ್ಲ ಎಂದ್ರೆ ಅಜ್ಜಯ್ಯ ದೇವಸ್ಥಾನಕ್ಕೆ ಹೊಗಿ ಪ್ರಮಾಣ ಮಾಡಿ ಎಂಬ ಮಾತಿಗೆ ಒಪ್ಪಬೇಕಲ್ಲವೇ ?
3. ಕಮೀಷನ್ ದಂಧೆ ಶುರು ಮಾಡಿರೋದು ಲೋಕಸಭೆಯ ಫಂಡ್ ಕಲೆಕ್ಷನ್ ಗೆ ಗುದ್ದಲಿ ಪೂಜೆಯೇ ?
4. ಗುತ್ತಿಗೆದಾರರ ಹಿತಾಸಕ್ತಿ ಕಾಪಾಡ್ತೀವಿ ಅಂತ ಅಧಿಕಾರಕ್ಕೆ ಬಂದ ನೀವು ಗುತ್ತಿಗೆದಾರರನ್ನು ಕಡೆಗಣಿಸುತ್ತಿರುವುದು ಎಷ್ಟು ಸರಿ ? ಕೆಂಪಣ್ಣ ಎಲ್ಲಿದ್ದೀಯಪ್ಪ ?
05. ಬಿಬಿಎಂಪಿ ವ್ಯಾಪ್ತಿಯಲ್ಲಿ 2019 ರಿಂದ 2023 ರ ವರೆಗೆ ನಡೆದ ಬಾಕಿ ಬಿಲ್ ಬಗ್ಗೆ ತನಿಖೆಗೆ ಅದೇಶಿಸಿದ್ದೀರಿ. 2013 ರಿಂದಲೂ ನಡೆದಿರುವ ಕಾಮಗಾರಿಗಳ ಅಕ್ರಮ ಬಗ್ಗೆ ತನಿಖೆ ಯಾಕೆ ಮಾಡಿಸುತ್ತಿಲ್ಲ ?
06. ದಯಾ ಮರಣ ಕೇಳಿರುವ ಗುತ್ತಿಗೆದಾರರಿಗೆ ದಯಾ ಮರಣ ಕರುಣಿಸುತ್ತೀರಾ ? ಹೀಗೆ ಹತ್ತು ಪ್ರಶ್ನೆಗಳನ್ನು ಗುತ್ತಿಗೆದಾರರ ಬಿಲ್ ಬಾಕಿ ಬಗ್ಗೆ ಸರ್ಕಾರದ ಮುಂದಿಟ್ಟಿದ್ದಾರೆ