32.2 C
Bengaluru
Monday, April 15, 2024

4 ವರ್ಷದೊಳಗೆ ಪೋಡಿ ಮುಕ್ತ ಗ್ರಾಮ’ ನಿರ್ಮಾಣ ; ಕಂದಾಯ ಸಚಿವ ಕೃಷ್ಣ ಬೈರೇಗೌಡ

#Construction # Podi Mukta #Village #within 4 years #Revenue Minister #Krishna Byre Gowda

ಬೆಂಗಳೂರು; ರಾಜ್ಯದಲ್ಲಿರುವ ಪೋಡಿ ಸಮಸ್ಯೆ ಬಗೆಹರಿಸಲು ಕನಿಷ್ಠ ನಾಲ್ಕು ವರ್ಷ ಬೇಕಾಗಿದೆ. ಆ ಅವಧಿಯಲ್ಲೂ ಶೇ. 70ರಷ್ಟು ಸಮಸ್ಯೆ ಬಗೆಹರಿಸಬಹುದಾಗಿದ್ದು, ಇನ್ನುಳಿದ ಶೇ. 30ರಷ್ಟು ಸಮಸ್ಯೆ ಬಗೆಹರಿಸುವುದು ಸುಲಭವಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.2015ರಲ್ಲಿ ಚಾಲನೆ ಗೊಂಡ ಯೋಜನೆಯಡಿ ಈವರೆಗೆ 16,630 ಗ್ರಾಮಗಳನ್ನು ಪೋಡಿ ಮುಕ್ತ ಮಾಡಿದ್ದು, ಬಾಕಿ ಇರುವ 14,085 ಗ್ರಾಮಗಳನ್ನು ನಾಲ್ಕು ವರ್ಷಗಳ ಒಳಗಾಗಿ ಪೂರ್ಣಗೊಳಿಸಲು ಸಂಕಲ್ಪ ಮಾಡಿದ್ದೇವೆ.ಇದಕ್ಕೆ ಅಗತ್ಯ ಸರ್ವೆಯರ್ ಗಳ ನೇಮಕ ಮಾಡುತ್ತಿದ್ದೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ,ಪ್ರಶೋತ್ತರ ಅವಧಿಯಲ್ಲಿ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿ, ರಾಜ್ಯಾದ್ಯಂತ ಪೋಡಿಗೆ ಸಂಬಂಧಿಸಿದಂತೆ .70 ರಷ್ಟು ಬಗೆಹರಿಸಬಹುದಾದ ಸಮಸ್ಯೆಯಾಗಿದ್ದು, ನಾವೇ ಪ್ರತಿ ಹಳ್ಳಿಗೂ ಹೋಗಿ ‘ಪೋಡಿ ಮುಕ್ತ ಗ್ರಾಮ’ ಯೋಜನೆಯನ್ನು ಅಭಿಯಾನದ ರೀತಿ ನಡೆಸಲಿದ್ದೇವೆ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.

ಮುಖ್ಯ ಮಂತ್ರಿಗಳು ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲೂ ನೂರಾರು ಅರ್ಜಿಗಳು ಬಂದಿವೆ. ಹೀಗಾಗಿ ಮುಖ್ಯ ಮಂತ್ರಿಗಳೇ ಇದನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ. ಪ್ರಸ್ತುತ 22 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಹಿಂದಿನ ವರ್ಷಗಳ ಸಾಧನೆಗೆ ಹೋಲಿಸಿದರೆ ಕಳೆದ ಮೂರು ವರ್ಷದಿಂದ ಪೋಡಿ ಮುಕ್ತ ಗ್ರಾಮ ಯೋಜನೆಯ ಸಾಧನೆ . ಹೀಗಾಗಿ ಸಾಧ್ಯವಾದಷ್ಟು ಶೀಘ್ರದಲ್ಲಿ ಈ ಪ್ರಕರಣಗಳನ್ನೂ ಇತ್ಯರ್ಥ ಮಾಡಲು ಕಂದಾಯ ಇಲಾಖೆ ಬದ್ದವಾಗಿದೆ. ಈ ಬಗ್ಗೆ ಸರ್ವೇ ಇಲಾಖೆಗೂ ಅಗತ್ಯ ಸೂಚನೆ ನೀಡಲಾಗಿದೆ. 2015ರಲ್ಲಿ ಪೋಡಿ ಮುಕ್ತ ಗ್ರಾಮ ಯೋಜನೆ ಆರಂಭವಾದದ್ದು. ಆ ವರ್ಷ 1791 ಹಳ್ಳಿಗಳನ್ನು ಪೋಡಿ ಮುಕ್ತ ಗ್ರಾಮ ಎಂದು ಘೋಷಿಸಲಾಗಿತ್ತು. 2017 ರಲ್ಲಿ 1634, 2018 ರಲ್ಲಿ 4337. 2019 ರಲ್ಲಿ 4647, 2020 ರಲ್ಲಿ 2977, 2021ರಲ್ಲಿ 1016 ಹಾಗೂ 2022ರಲ್ಲಿ 228 ಗ್ರಾಮಗಳನ್ನು ಪೋಡಿ ಮುಕ್ತ ಮಾಡಲಾಗಿದೆ. ಈವರೆಗೆ ಒಟ್ಟಾರೆ 16,430 ಗ್ರಾಮಗಳನ್ನು ಪೋಡಿ ಮುಕ್ತ ಮಾಡಲಾಗಿದೆ. ಇನ್ನೂ 16,085 ಗ್ರಾಮಗಳು ಬಾಕಿ ಇವೆ ಎಂದು ಅವರು ಹೇಳಿದರು.

Related News

spot_img

Revenue Alerts

spot_img

News

spot_img