21.1 C
Bengaluru
Monday, December 23, 2024

Congress Government:ಕರ್ನಾಟಕ ವಿಧಾನಸಭೆಯ ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು ಮೇ 19: ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ ನಾಲ್ಕೈದು ದಿನಗಳ ಬಳಿಕ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಎರಡನೇ ಬಾರಿಗೆ ಅಹಿಂದ ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ.ಆರಂಭದ ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಉಳಿದ ಎರಡೂವರೆ ವರ್ಷ ಡಿ ಕೆ ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸಿ ಎಂದು ಮಲ್ಲಿಕಾರ್ಜುನ ಖರ್ಗೆಯವರು ಸೂಚಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.ಕಂಠೀರವ ಸ್ಟುಡಿಯೋನಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಶನಿವಾರ 20 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್‌ ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್‌ ಕನುಗೋಲು ಸೇರಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ ಸಂಭಾವ್ಯರ ಪಟ್ಟಿ ಇಂತಿದೆ.

ಬೆಳಗಾವಿ – ಲಕ್ಷ್ಮಣ್ ಸವಧಿ, ಲಕ್ಷ್ಮೀ ಹೇಬ್ಬಾಳ್ಕರ್, ಸತೀಶ್ ಜಾರಕಿಹೊಳಿ

ಬಾಗಲಕೋಟೆ – ಆರ್.ಬಿ.ತಿಮ್ಮಾಪುರ

ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್

ಕಲಬುರಗಿ – ಪ್ರಿಯಾಂಕ್‌ ಖರ್ಗೆ, ಅಜಯ್‌ ಸಿಂಗ್, ಶರಣ ಪ್ರಕಾಶ್ ಪಾಟೀಲ್

ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ

ಯಾದಗಿರಿ – ಶರಣಪ್ಪ ದರ್ಶನಾಪುರ್

ಬೀದರ್ – ರಹೀಮ್‌ ಖಾನ್, ಈಶ್ವರ್‌ ಖಂಡ್ರೆ

ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ

ಗದಗ – ಹೆಚ್‌.ಕೆ. ಪಾಟೀಲ್

ಧಾರವಾಡ – ವಿನಯ್‌ ಕುಲಕರ್ಣಿ, ಪ್ರಸಾದ್‌ ಅಬ್ಬಯ್ಯ/ಸಂತೋಷ್ ಲಾಡ್

ಉತ್ತರ ಕನ್ನಡ – ಭೀಮಣ್ಣ ನಾಯಕ್

ಹಾವೇರಿ – ರುದ್ರಪ್ಪ ಲಮಾಣಿ

ಬಳ್ಳಾರಿ – ತುಕಾರಾಮ್‌, ನಾಗೇಂದ್ರ

ಚಿತ್ರದುರ್ಗ – ರಘುಮೂರ್ತಿ

ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್​ಎಸ್​ ಮಲ್ಲಿಕಾರ್ಜುನ

ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್

ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ

ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ

ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ

ಕೋಲಾರ- ರೂಪ ಶಶೀಧರ್​/ನಾರಾಯಣ ಸ್ವಾಮೀ

ಬೆಂಗಳೂರು- ಕೆಜೆ ಜಾರ್ಜ್​/ ರಾಮಲಿಂಗಾ ರೆಡ್ಡಿ, ಹ್ಯಾರಿಸ್​, ಎಂ. ಕೃಷ್ಣಪ್ಪ, ದಿನೇಶ್​ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್

ಮಂಡ್ಯ- ಎನ್​​ ಚೆಲುವರಾಯ ಸ್ವಾಮಿ

ದೆಹಲಿ ವಿಶೇಷ ಪ್ರತಿನಿಥಿ: ಪಿ ಎಂ. ನರೇಂದ್ರ ಸ್ವಾಮಿ

ಮಂಗಳೂರು- ಯುಟಿ ಖಾದರ್

ಮೈಸೂರು-ಎಚ್​ಸಿ ಮಾಹದೇವಪ್ಪ/ ತನ್ವೀರ್​ ಸೇಠ್​ಚಾಮರಾಜನಗರ- ಪುಟ್ಟರಂಗಶೆಟ್ಟಿ

ಕೊಡಗು- ಎಎಸ್​ ಪೊನ್ನಣ್ಣ

ಬೆಂಗಳೂರು ಗ್ರಾಮಾಂತರ. ಕೆಚ್​​ ಮುನಿಯಪ್ಪ

Related News

spot_img

Revenue Alerts

spot_img

News

spot_img