25 C
Bengaluru
Monday, December 23, 2024

2023ರ ಕೇಂದ್ರ ಬಜೆಟ್​ನ ಸಂಪೂರ್ಣ​ ವಿವರಗಳನ್ನುಈ ಆ್ಯಪ್ ಮೂಲಕ ಪಡೆಯಬಹುದು

ಬೆಂಗಳೂರು, ಜ. 31 :ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಅನ್ನುಮಂಡಿಸಲಿದ್ದಾರೆ.ಇದು ನಿರ್ಮಲಾ ಸೀತಾರಾಮನ್ ಅವರಿಂದ ಮಂಡಿಸಲ್ಪಡುವ ಐದನೇ ಬಜೆಟ್ ಆಗಿರಲಿದೆ. ಕೇಂದ್ರ ಸರ್ಕಾರವು 2021ರಲ್ಲಿ ಮೊಬೈಲ್ ಆಪ್ ಒಂದನ್ನು ಆರಂಭಿಸಿದೆ. ಈ ಆಪ್ ಮೂಲಕ ನಾವು ಕೇಂದ್ರ ಬಜೆಟ್‌ನ ಎಲ್ಲ ಪ್ರತಿಯನ್ನು ಪಡೆಯಲು ಸಾಧ್ಯವಾಗುತ್ತದೆ.ಈ ಬಾರಿಯ ಬಜೆಟ್​ ಮೇಲೆ ಜನರ, ಅದರಲ್ಲೂ ಮಧ್ಯಮ ವರ್ಗದವರ ನಿರೀಕ್ಷೆಗಳು ಹೆಚ್ಚಾಗಿವೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೆಚ್ಚಿನ ಕೊಡುಗೆಗಳನ್ನು ನೀಡಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಆದಾಯ ತೆರಿಗೆ ಮಿತಿ ಹಾಗೂ ನಿಯಮಗಳಲ್ಲಿ ಬದಲಾವಣೆ, ಅಗತ್ಯ ವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ ಜತೆಗೆ ವಿವಿಧ ಕ್ಷೇತ್ರಗಳು ತಮ್ಮದೇ ಆದ ನಿರೀಕ್ಷೆಗಳನ್ನು ಬಜೆಟ್ ಮೇಲೆ ಇಟ್ಟುಕೊಂಡಿವೆ.

ದೇಶದ ಆರ್ಥಿಕತೆಯ ಬೆಳವಣಿಗೆಗೆ ಈ ಬಜೆಟ್​ಗಳು ಭಾರೀ ಬೆಂಬಲವನ್ನು ನೀಡುತ್ತದೆ.ಇದಕ್ಕಾಗಿಯೇ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತದಲ್ಲಿರುವ ಪ್ರದೇಶಗಳಿಗೆ ಬೇರೆ ಬೇರೆ ರೀತಿಯಲ್ಲಿ ಕೊಡುಗೆಗಳನ್ನು ಘೋಷಿಸುತ್ತವೆ. ಹಾಗಿದ್ರೆ ಇದರ ಬಗ್ಗೆ ಸುಲಭದಲ್ಲಿ ವಿವರಗಳನ್ನು ಈಗ ಮೊಬೈಲ್​ನಲ್ಲಿಯೇ ನೋಡಬಹುದು.2023-24 ರ ಬಜೆಟ್​ ಮಂಡನೆಯ ಬಗ್ಗೆ ಹೆಚ್ಚಿನ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಇನ್ನು ಈ ಬಜೆಟ್​ ಮಂಡನೆಯ ವಿಚಾರದಲ್ಲಿ ಹಲವಾರು ರೀತಿಯಲ್ಲಿ ಚರ್ಜೆಗಳು, ಮಾತುಕತೆಗಳು ಜನಸಾಮಾನ್ಯರ ನಡುವೆ ನಡೆಯುತ್ತಿರುತ್ತದೆ. ಆದರೆ ಕೇಂದ್ರ ಸರ್ಕಾರದ ಬಜೆಟ್​ ಮಂಡನೆ ಯಾರಿಗೆ ಮತ್ತು ಯಾವ ವಿಭಾಗಕ್ಕೆ ಯಾವ ರೀತಿಯೆಲ್ಲಾ ಬಜೆಟ್​ಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬ ಕುತೂಹಲ ಮೂಡುತ್ತದೆ. ಆದರೆ ಇದಕ್ಕಾಗಿ ಸುಲಭ ವಿಧಾನವಿದೆ. ನಿಮ್ಮಲ್ಲಿರುವ ಮೊಬೈಲ್ ​ ಮೂಲಕವೇ ಕೇಂದ್ರದ ಬಜೆಟ್​ ನಲ್ಲಿ ಮಾಡಿದಂತಹ ಘೋಷಣೆಯ ಬಗ್ಗೆ ಇಡೀ ವಿವರಗಳನ್ನು ನೋಡಬಹುದಾಗಿದೆ.

ಈ ಆಪ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಕೇಂದ್ರ ಬಜೆಟ್‌ನ ಆಪ್‌ ಅನ್ನು ನಾವು ಅಂಡ್ರಾಯ್ಡ್ ಯೂಸರ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಬಹುದು. iOS ಬಳಕೆದಾರರು ಆಪ್‌ ಸ್ಟೋರ್ ಮೂಲಕ ಕೇಂದ್ರ ಬಜೆಟ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರಸ್ತುತ ಈ ಆಪ್‌ ಮೂಲಕ ನಾವು ಬಜೆಟ್ 2021-22 ಮತ್ತು ಬಜೆಟ್ 2022-23ರ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.ಕೆಲವು ವಿಭಾಗದಲ್ಲಿ ಬಜೆಟ್‌ನ ಮುಖ್ಯಾಂಶಗಳು, ಬಜೆಟ್ ಭಾಷಣ, ವಾರ್ಷಿಕ ಹಣಕಾಸು ಹೇಳಿಕೆ, ರಿಸಿಪ್ಟ್ ಬಜೆಟ್, ವೆಚ್ಚ ಬಜೆಟ್, ಕಸ್ಟಮ್ ಬಜೆಟ್ ಎಂಬ ವಿಂಗಡನೆಗಳನ್ನು ಮಾಡಲಾಗಿದೆ. ಬಜೆಟ್ ಮಾಹಿತಿಯನ್ನು ಪಿಡಿಎಫ್ ಮಾದರಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ ಮತ್ತು ಪಿಡಿಎಫ್‌ ಮಾದರಿಯಲ್ಲಿಯೇ ಡೌನ್‌ಲೋಡ್ ಕೂಡಾ ಮಾಡಿಕೊಳ್ಳಬಹುದು.

ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಆಪ್‌ ಇದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ 2023-24ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ ಬಳಿಕ ಕೇಂದ್ರ ಬಜೆಟ್‌ ಮೊಬೈಲ್ ಆಪ್‌ನಲ್ಲಿ ದಾಖಲೆಯು ಲಭ್ಯವಾಗುವ ಸಾಧ್ಯತೆಯಿದೆ. ಈ ಆಪ್‌ನ ಆಂಡ್ರಾಯ್ಡ್ ವರ್ಜನ್‌ ಅನ್ನು ಕಳೆದ ಬಾರಿ 2022ರ ಜನವರಿ 14ರಂದು ಅಪ್‌ಡೇಟ್ ಮಾಡಲಾಗಿದೆ. ಈ ಆಪ್‌ ಅನ್ನು ಈವರೆಗೆ 1 ಲಕ್ಷಕ್ಕೂ ಅಧಿಕ ಅಂಡ್ರಾಯ್ಡ್ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ವೆಬ್​ಸೈಟ್​ನಲ್ಲೂ ಡೌನ್​ಲೋಡ್​ ಮಾಡಬಹುದು

ಈ ಆ್ಯಪ್​ ಸ್ಟೋರ್​ಗಳಲ್ಲಿ ಮಾತ್ರವಲ್ಲದೇ ಯೂನಿಯನ್ ಬಜೆಟ್​ ಪೋರ್ಟಲ್​ ಆಗಿರುವ www.Indiabudget.Gov.In ಗೆ ಭೇಟಿ ನೀಡಬಹುದಾಗಿದೆ. ಈ ಪೋರ್ಟಲ್​ನಲ್ಲಿ 2021-22 ಮತ್ತು ಬಜೆಟ್ 2022-23 ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಹ ನೋಡುವ ಅವಕಾಶವಿದೆ.

Related News

spot_img

Revenue Alerts

spot_img

News

spot_img