28.2 C
Bengaluru
Wednesday, July 3, 2024

ಸಾಮುದಾಯಿಕ, ಸುಸ್ಥಿರ ಮತ್ತು ಆರೋಗ್ಯಕರ ಜೀವನ ಪರಿಕಲ್ಪನೆಯ ಅಪಾರ್ಟ್‌ಮೆಂಟ್

ನೆದರ್ಲೆಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ʻಸಾಮುದಾಯಿಕ, ಸುಸ್ಥಿರ ಮತ್ತು ಆರೋಗ್ಯಕರ ಜೀವನದ ವಾತಾವರಣ ಸೃಷ್ಟಿಸುವ ಸಲುವಾಗಿ ಓಲಾಫ್‌ ಗಿಪ್ಸರ್‌ ಆರ್ಕಿಟೆಕ್ಟ್ಸ್‌ ಎಂಬ ಡಚ್‌ ಸ್ಟುಡಿಯೊ ಗೃಹ ಸಹಕಾರಿ ಬಿಎಸ್‌ಎಚ್2ಎ ಜೊತೆ ಸೇರಿ ಅಪಾರ್ಟ್‌ಮೆಂಟ್‌ಗಳ ಸಮೂಹವನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ.

ಈ ಹಿಂದಿನ ಕೈಗಾರಿಕಾ ಪ್ರಾಂತವಾಗಿದ್ದ ಬ್ಯೂಕ್‌ಸ್ಲೋಟರ್ಹಮ್ನ ಬಂದರು ಸಮೀಪದ 47 ಮೀಟರ್‌ ಎತ್ತರದ ಈ ಕಟ್ಟಡದಲ್ಲಿ 29 ಅಪಾರ್ಟ್‌ಮೆಂಟ್‌ಗಳು ಮತ್ತು ಸಮುದಾಯ ಬಳಕೆಯ ಸಾಮಾನ್ಯ ಸ್ಥಳಾವಕಾಶವನ್ನು ಹೊಂದಿದೆ. ಅಲ್ಲದೆ, ಕಟ್ಟಡದಲ್ಲಿ ಸಮುದಾಯ ಕೆಫೆ ಮತ್ತು ಟೆರೇಸ್‌ ಮೇಲೆ ನಗರ ಕೃಷಿಗೂ ಅವಕಾಶ ಮಾಡಿಕೊಡಲಾಗಿದೆ.

ಯೋಜನೆಗಾಗಿ ʻತಳಮಟ್ಟದ, ಜನ ಸ್ನೇಹಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆʼಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಮಾಜಿಕವಾಗಿ ಹಾಗೂ ಪರಿಸರದ ದೃಷ್ಟಿಯಿಂದ ಸಮರ್ಥನೀಯವಾಗಿರುವ ವಿನ್ಯಾಸವನ್ನು ಅಭಿವೃದ್ಧಿಪಡಿಸಲು ಬಿಎಸ್‌ಎಚ್2ಎ ಸಹಯೋಗದಲ್ಲಿ ಓಲಾಫ್‌ ಗಿಪ್ಸರ್‌ ಆರ್ಕಿಟೆಕ್ಟ್ಸ್ ಕೆಲಸ ಮಾಡಿದೆ.

ಸಮೂಹ ಕಟ್ಟಡಗಳ ನೆಲಹಾಸು ಮತ್ತು ಒಳಭಾಗಗಳಲ್ಲಿ ಕಾಂಕ್ರೀಟ್ಗಳ ಬಳಕೆ ಮಾಡಲಾಗಿದ್ದು, ಕಟ್ಟಡದ ಬಹುಪಾಲನ್ನು ಕ್ರಾಸ್ ಲ್ಯಾಮಿನೇಟೆಡ್ ಕಟ್ಟಿಗೆಯಿಂದ ನಿರ್ಮಿಸಲಾಗಿದೆ.

ಮರದ ಸೂಪರ್ಸ್ಟ್ರಕ್ಚರ್‌ಗೆ ಶ್ವೇತ ವರ್ಣದ ಉಕ್ಕಿನ ಬಾಹ್ಯ ಚೌಕಟ್ಟನ್ನು ಹೊದಿಸಲಾಗಿದ್ದು, ಅದು ಬಾಲ್ಕನಿಗಳು ಮತ್ತು ಟೆರೇಸ್‌ಗಳಿಗೆ ಗಾಢವಾದ ನೋಟವನ್ನು ನೀಡುತ್ತದೆ.

ಫ್ಲ್ಯಾಟ್ಗಳ ಹೊರಾಂಗಣದಲ್ಲಿ ದೊಡ್ಡದಾದ ಬುಟ್ಟಿಯಲ್ಲಿ ಗಿಡಗಳನ್ನು ನಿಲ್ಲಿಸಲಾಗಿದ್ದು, ಇದು ಕೈಗಾರಿಕೋತ್ತರ ಕಾಲದ ಅಪಾರ್ಟ್‌ಮೆಂಟ್‌ಗಳಲ್ಲಿ ಜೀವವೈವಿಧ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಮತ್ತು ಬಾಲ್ಕನಿಗಳಲ್ಲಿ ಅತ್ಯುತ್ತಮ ಖಾಸಗಿತನವನ್ನೂ ನೀಡುತ್ತದೆ.

ʻಕಟ್ಟಡಕ್ಕೆ ವಿಶಿಷ್ಟ ಗುಣಲಕ್ಷಣ ನೀಡುತ್ತಿರುವುದು ಅದರ ಶ್ವೇತವರ್ಣ; ಕೈಗಾರಿಕೆಗಳಿಗೆ ಅಭಿಮುಖವಾಗಿರುವ ಭಾಗಗಳನ್ನು ಮೈಕ್ರೊಕ್ಲೈಮೇಟ್‌ ವಲಯವಾಗಿ ಪರಿವರ್ತಿಸಲಾಗಿದೆ. ವಿಶಾಲವಾದ ಬಾಲ್ಕನಿಗಳು ಮತ್ತು ಚಳಿಗಾಲದ ಗಾರ್ಡನ್‌ ಅನ್ನು ಪ್ರತಿಯೊಂದು ಮನೆಗೂ ಕಲ್ಪಿಸಲಾಗಿದೆʼ ಎಂದು ಓಲಾಫ್‌ ಗಿಪ್ಸರ್‌ ಆರ್ಕಿಟೆಕ್ಟ್ಸ್ ಹೇಳಿದೆ.

ಅಪಾರ್ಟ್‌ಮೆಂಟ್ಗಳ ಆವರಣದಲ್ಲಿ ಗ್ಯಾರೇಜ್‌ ಮತ್ತು ಆರು ವಾಣಿಜ್ಯ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವಾಣಿಜ್ಯ ಮಳಿಗೆಗಳ ಪೈಕಿ ಒಂದರಲ್ಲಿ, ಸಮಾಜೋ ಸಾಂಸ್ಕೃತಿಕ ಯೋಜನೆ ಅಡಿಯಲ್ಲಿ ಈಗಾಗಲೇ ಕೆಫೆ ಆರಂಭವಾಗಿದೆ.

ಅಪಾರ್‌್ೋಮೆಂಟ್‌ಗಳು ವಿನ್ಯಾಸ ಮತ್ತು ವಿಸ್ತಾರದಲ್ಲಿ ಭಿನ್ನವಾಗಿವೆ. ಇವುಗಳು 43 ರಿಂದ 182 ಚದರ ಮೀಟರ್ಗಳ ವರೆಗೂ ಭಿನ್ನವಾಗಿ ಸ್ಥಳಗಳನ್ನು ಆಕ್ರಮಿಸಿಕೊಂಡಿವೆ. ಆದಾಗ್ಯೂ, ಅವೆಲ್ಲವುಗಳಿಗೂ ಸಮುದಾಯ ಅಡುಗೆಮನೆ, ವ್ಯಾಯಾಮ ಪ್ರದೇಶ ಮತ್ತು ವಿಶ್ರಾಂತಿ ಗೃಹಗಳಿಗೆ ಸಾಮಾನ್ಯ ಪ್ರವೇಶವನ್ನು ನೀಡಲಾಗಿದೆ.

ʻಅಪಾರ್ಟ್‌ಮೆಂಟ್‌ಗಳಲ್ಲಿ ʻಮುಕ್ತ ಕಟ್ಟಡʼ ತತ್ವವನ್ನು ಅನುಸರಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಬದಲಾಗಬಹುದಾದ ಪರಿಸ್ಥಿತಿಗೆ ತಕ್ಕಂತೆ ಸ್ಥಳಾವಕಾಶವನ್ನು ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆʼ ಎಂದು ಸ್ಟುಡಿಯೊ ಅಭಿಪ್ರಾಯಪಡುತ್ತದೆ. ಉದಾಹರಣೆಗೆ, ಗೃಹ ಕಚೇರಿ ಆಗಿ ಅಥವಾ ಬಾಡಿಗೆಗೆ ಕೊಡಲು ಅನುಕೂಲವಾಗುವಂತೆ ಕೊಠಡಿಗೆ ಪ್ರತ್ಯೇಕ ಬಾಗಿಲುಗಳನ್ನು ನೀಡಲಾಗಿದೆ.

ಮುಕ್ತ, ಗಾಳಿಯಾಡುವ ಸ್ಥಳಗಳನ್ನು ಉಳಿಸಿಕೊಳ್ಳಲು ಮರದ ನೆಲಹಾಸು ಮತ್ತು ಸೀಲಿಂಗ್ಗಳು ಹಾಗೂ ಶ್ವೇತವರ್ಣದ ಗೋಡೆಗಳೊಂದಿಗೆ ಅಪಾರ್ಟ್ಮೆಂಟ್ಗಳಿಗೆ ಅಂತಿಮ ಸ್ಪರ್ಶ ನೀಡಲಾಗಿದೆ.

ಸುತ್ತಲೂ ಬಾಲ್ಕನಿ ಇರುವ ಕಾರಣ ಜಾರಿಸಬಹುದಾದ ಗಾಜಿನ ಬಾಗಿಲುಗಳ ಮೂಲಕ ಹೊರಗಿನ ನೋಟ ನೀಡುವ ಪ್ರಯೋಜನಗಳು ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ.

Related News

spot_img

Revenue Alerts

spot_img

News

spot_img