ಬೆಂಗಳೂರು: ಬೆಂಗಳೂರಿನಲ್ಲಿ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನ ವ್ಯಾಪಾರ ಸ್ಥಳಗಳ ಮೇಲೆ ಏಕಕಾಲಕ್ಕೆ 100ಕ್ಕೂ ಹೆಚ್ಚು ರಾಜ್ಯ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಹಣಕಾಸಿನ ದಾಖಲೆಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ.ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಚಿಕ್ಕಪೇಟೆ ಮತ್ತು ಸುತ್ತಮುತ್ತಲಿನ ಅಂಗಡಿ ಮುಂಗಟ್ಟು ಸೇರಿದಂತೆ ನೂರು ಕಡೆಗಳಲ್ಲಿ ಏಕಕಾಲಕ್ಕೆ ಮೆಗಾ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಗೋಡೌನ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಲೆಕ್ಕಕ್ಕೆ ಸಿಗದ ಹಲವು ವಸ್ತುಗಳನ್ನು ಗೋಡೌನ್‌ಗಳಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಅಂತಹ ಅಂಗಡಿ-ಮಾಲೀಕರಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಜಿಎಸ್‌ಟಿ ನಿಯಮಾವಳಿ ಪ್ರಕಾರ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.ಕೆಲವು ವ್ಯಾಪಾರ ಸ್ಥಳಗಳಲ್ಲಿ ಸರಕುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅಘೋಷಿತ ಗೋದಾಮುಗಳಲ್ಲಿ ಶೇಖರಿಸಿ, ಜಿಎಸ್‌ಟಿ ಇನ್‌ವಾಯ್ಸ್ಗಳನ್ನು ನೀಡದೆ ವ್ಯಾಪಾರ ನಡೆಸಿ, ತೆರಿಗೆ ವಂಚಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟು ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಅಧಿನಿಯಮದ ಅನ್ವಯ, ತೆರಿಗೆದಾಯಕ ವ್ಯಕ್ತಿಗಳು ತಮ್ಮ ನೋಂದಾಯಿತ ವ್ಯಾಪಾರ ಸ್ಥಳಗಳು ಹಾಗೂ ಹೆಚ್ಚುವರಿ ವ್ಯಾಪಾರ ಸ್ಥಳಗಳನ್ನು ಘೋಷಿಸಿಕೊಳ್ಳಲು ಬ ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರವನ್ನು ಮತ್ತು ಸಂಖ್ಯೆಯನ್ನು ಪ್ರದರ್ಶಿಸಲು ವಿಫಲರಾಗಿದ್ದು ವ್ಯಕ್ತಿಗಳಿಗೆ ದಂಡ ಸಹ ವಿಧಿಸಲಾಗಿದೆ.