ಬೆಳಗಾವಿ: ವಾಣಿಜ್ಯ ತೆರಿಗೆ ಇಲಾಖೆ(Commercial Taxes Department) ಬೆಳಗಾವಿ ವಿಭಾಗದ ಜಂಟಿ ಆಯುಕ್ತೆ ದಾಕ್ಷಾಯಿಣಿ ಚೌಶೆಟ್ಟಿ ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ.ಕಚೇರಿಯಲ್ಲೇ 25 ಸಾವಿರ ರೂ. ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ರಾಜ್ಯ ಸರಕು ಸೇವಾ ತೆರಿಗೆ (State Goods and Services Tax) ಮರುಪಾವತಿಗಾಗಿ ವ್ಯಾಜ್ಯ ಬಗೆಹರಿಸಿಕೊಡಲು ವಿಕಾಸ್ ಕೋಕಣೆ ಎಂಬುವವರಿಂದ 25 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಜಿಎಸ್‌ಟಿ ವಿಚಾರವಾಗಿ ವ್ಯಾಜ್ಯ ಬಗೆ ಹರಿಸಿಕೊಡಲು ವಿಕಾಸ್ ಕೋಕಣೆ ಎಂಬುವರ ಬಳಿ 25 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಆಯುಕ್ತೆ ದ್ರಾಕ್ಷಾಯಿಣಿ ಕಚೇರಿಯಲ್ಲಿಯೇ ಲಂಚ(Bribe) ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತು ವಿಕಾಸ್ ಕೋಕಣೆ ಲೋಕಾಯುಕ್ತ ಠಾಣೆಯಲ್ಲಿ ದೂರು ಕೊಟ್ಟಿದ್ದರು.ಅದರಂತೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದು, ಲಂಚದ ಹಣದ ಸಮೇತ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಲೋಕಾಯುಕ್ತ ಅಧಿಕಾರಿಗಳಿಂದ ವಿಚಾರಣೆ ಮುಂದುವರೆದಿದೆ.